ಬೆಳೆ ನಷ್ಟ ಸರ್ವೆ ಶೀಘ್ರ ಪೂರ್ಣಗೊಳಿಸಲು ಶಾಸಕ ರಾಜುಗೌಡ ಸೂಚನೆ
MLA Rajugowda instructs to complete crop loss survey soon
ದೇವರಹಿಪ್ಪರಗಿ 29: ಕ್ಷೇತ್ರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಆ ಬಗ್ಗೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸರ್ವೆ ಕಾರ್ಯ ಶೀಘ್ರ ಪೂರ್ಣಗೊಳಿಸಿ ಬೆಳೆ ನಷ್ಟದ ವರದಿ ಶೀಘ್ರ ನೀಡಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ಬೆಳೆ ಹಾನಿ ಹಾಗೂ ಕ್ಷೇತ್ರದ ಸಮಸ್ಯಗಳ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು, ನಿರಂತರ ಮಳೆ ಹಾಗೂ ಡೋಣಿ ನದಿ ಪ್ರವಾಹದಿಂದ ಜನ. ಜಾನುವಾರಗಳಿಗೆ ತೊಂದರೆಯಾಗಿದ್ದರೆ ಮತ್ತು ಆಸ್ತಿ, ಪ್ರಾಣ ಹಾನಿಯಾದ ಬಗ್ಗೆ ಸಂಪೂಣ ವಾಸ್ತವಿಕ ಸತ್ಯಾಂಶ ಒದಗಿಸಬೇಕು ಎಂದು ತಾಲೂಕಾ ಅಧಿಕಾರಿಗಳಿಂದ ಶಾಸಕರು ಮಾಹಿತಿ ಕೇಳಿದರು. ದೋಣಿ ನದಿ ಪ್ರವಾಹದಿಂದ ಇಲ್ಲಿಯವರೆಗೆ ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯ ಪ್ರಕಾರ 1328 ಹೆಕ್ಟರ್ ಬೆಳೆ, ತೋಟಗಾರಿಕೆ 944.7 ಹೆಕ್ಟರ್ ಹಾಗೂ ಇಲ್ಲಿಯವರೆಗೆ 66 ಮನೆಗಳು ಹಾನಿಯಾಗಿರುವ ಅಂದಾಜಿದೆ. ರಸ್ತೆ, ಸೇತುವೆ, ಕೆರೆ-ಕಟ್ಟೆಗಳು, ಬ್ರಿಡ್ಜ್ ಕಂ ಬ್ಯಾರೇಜ್ಗಳು, ಶಾಲೆ, ಅಂಗನವಾಡಿ ಕೇಂದ್ರಗಳು ಹಾಗೂ ವಿವಿಧ ಮನೆ , ಸರ್ಕಾರಿ ಕಚೇರಿಗಳು ಹಾನಿಗೆ ಒಳಗಾಗಿವೆ ಗ್ರಾ.ಪಂ ಹಾಗೂ ತಾಪಂ ವತಿಯಿಂದ ಆಗುವ ಕೆಲಸಗಳನ್ನು ಮಾಡಿ ಹೆಚ್ಚಿನ ಕೆಲಸಗಳನ್ನು ಬಗ್ಗೆ ನನಗೆ ವರದಿ ನೀಡಿ ಹಾಗೂ ಕೃಷಿ ಇಲಾಖೆಯಿಂದ ಬೀಜ ಗೊಬ್ಬರದ ತಯಾರಿ, ಹೆಸ್ಕಾಂ ಇಲಾಖೆಯಿಂದ ವಿದ್ಯುತ್ತಿಗೆ ಸಂಬಂಧಿಸಿದ ಹಾಗೂ ಬೆಳೆ ವಿಮೆ ಸೌಲಭ್ಯವನ್ನು ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡಬೇಕು, ರಸ್ತೆಗಳು, ಕೃಷಿ ,ತೋಟಗಾರಿಕೆ ಬೆಳೆಗಳ ಹಾನಿಯಾದ ಬಗ್ಗೆ ಖಚಿತ ಮಾಹಿತಿ ಸರಕಾರಕ್ಕೆ ಅಧಿಕಾರಿಗಳು ಶೀಘ್ರದಲ್ಲಿ ವರದಿ ನೀಡಬೇಕು ನಾನು ಸರಕಾರದ ಮಟ್ಟದಲ್ಲಿ ವಿಶೇಷ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಮತಕ್ಷೇತ್ರದ ನಾಲ್ಕು ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ,ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಾರತಿ ಚೆಲುವಯ್ಯ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಅರಣುಕುಮಾರ ವಡಿಗೇರಿ,ತಾಲೂಕಾ ಕೃಷಿ ಅಧಿಕಾರಿಗಳಾದ ಶರಣಗೌಡ ಪಾಟೀಲ, ಹೆಸ್ಕಾಂ ಎಇಇ ಎಸ್.ಬಿ.ಶಿರಗೂರ, ಎಪಿಎಂಸಿ ಕಾರ್ಯದರ್ಶಿ ಬಿ.ಎಲ್.ಜುಮನಾಳ, ಅಧಿಕಾರಿಗಳಾದ ಎಚ್.ಕೆ.ಪಾಟೀಲ, ಡಿ.ಬಿ.ಕಲಬುರ್ಗಿ, ಎ.ಡಿ.ಶಿವಾನಂದ ಮೂಲಿಮನಿ ಸೇರಿದಂತೆ ಮತಕ್ಷೇತ್ರದ ನಾಲ್ಕು ತಾಲೂಕಿನ ವಿವಿಧ ಇಲಾಖೆಯ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 