ಮೃತ ಕುಟುಂಬಕ್ಕೆ ಶಾಸಕ ನಾಡಗೌಡ ಪರಿಹಾರ ಚೆಕ್ ವಿತರಣೆ
MLA Nadagowda distributes compensation check to deceased family
ತಾಳಿಕೋಟಿ: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಏಪ್ರಿಲ್ 27ರಂದು ಸಿಡಿಲು ಬಡಿತದಿಂದ ಮೃತರಾದ ರೈತ ಅಯ್ಯಣ್ಣ ಸಜ್ಜನ ಇವರ ಕುಟುಂಬಕ್ಕೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಅಪ್ಪಾಜಿ ನಾಡಗೌಡರು ಸಾಂತ್ವನ ಹೇಳಿ ಸರ್ಕಾರದಿಂದ ಬಿಡುಗಡೆಗೊಂಡ ರೂ.5 ಲಕ್ಷ ಮೊತ್ತದ ಚೆಕ್‌ನ್ನು ಮೃತರ ಧರ್ಮಪತ್ನಿ ಸುವರ್ಣಾ ಸಜ್ಜನ ಇವರಿಗೆ ಹಸ್ತಾಂತರಿಸಿದರು.
ಮಂಗಳವಾರ ಬಳಗಾನೂರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಅಪ್ಪಾಜಿ ನಾಡಗೌಡರು ಮೃತ ರೈತನ ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಧೈರ್ಯ ತುಂಬಿದರು. ಮಾತನಾಡಿದ ಅವರು ಮೃತ ರೈತ ಅಯ್ಯಣ್ಣ ಸಜ್ಜನ ಅವರ ಅಕಾಲಿಕ ನಿಧನದಿಂದಾಗಿ ಅವರ ಕುಟುಂಬಕ್ಕೆ ತುಂಬಾ ತೊಂದರೆಯಾಗಿದೆ. ಏಕೆಂದರೆ ಅವರು ತಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಆದರೆ ಇದು ವಿಧಿ ಲಿಖಿತ ಇದಕ್ಕೆ ಕುಟುಂಬದ ಸದಸ್ಯರು ಧೈರ್ಯ ತೆಗೆದುಕೊಳ್ಳಬೇಕು. ಈ ಸಂಕಷ್ಟದ ಸಮಯದಲ್ಲಿ ಅವರ ಜೊತೆ ನಾನೂ ಇದ್ದೇನೆ ಎಂದರು.
ತಹಸಿಲ್ದಾರ್ ಡಾ.ವಿನಯಾ ಹೂಗಾರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ(ನಾವದಗಿ), ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಗ್ರಾಮದ ಗಣ್ಯರಾದ ಮಲ್ಲಣ್ಣ ದೋರನಹಳ್ಳಿ, ಚನ್ನಣ್ಣ ದೇಸಾಯಿ ಪ್ರಭುಗೌಡ ಬಿರಾದಾರ, ಎಸ್.ಐ. ಕಡಕೋಳ,ಆರ್.ಎಸ್.ವಾಲಿಕಾರ, ಅಮರ್ಪ ಬಿರಾದಾರ ಹಾಗೂ ಗ್ರಾಮಸ್ಥರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 