ಖಾಸ್ಗತೇಶ್ವರ ಮಠಕ್ಕೆ ಶಾಸಕ ನಾಡಗೌಡ ಭೇಟಿ
MLA Nadagouda visits Khasgateshwara Matha
ತಾಳಿಕೋಟಿ 25: ಪಟ್ಟಣದ ಐತಿಹಾಸಿಕ ಖಾಸ್ಗತೇಶ್ವರ ಮಠದ ಜಾತ್ರೋತ್ಸವ ಹಿನ್ನೆಲೆಯಲ್ಲಿ ಕೆಎಸ್ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಅಪ್ಪಾಜಿ ನಾಡಗೌಡರು ಶುಕ್ರವಾರ ಶ್ರೀಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಖಾಸ್ಗತ ಹಾಗೂ ವಿರಕ್ತ ಶ್ರೀಗಳ ಗದ್ದುಗೆಗೆ ಪೂಜೆ ನೆರವೇರಿಸಿ ನಂತರ ದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಶಾಸಕರು ಶ್ರೀಮಠದ ಮುಖ್ಯಸ್ಥ ಮುರಗೇಶ ವಿರಕ್ತಮಠ ಇವರಿಂದ ಜಾತ್ರೆಯ ಸಿದ್ಧತೆಗಳ ಕುರಿತು ಮಾಹಿತಿ ಪಡೆದುಕೊಂಡರು. ಸಿದ್ದಲಿಂಗ ದೇವರು ಶಾಸಕ ಅಪ್ಪಾಜಿ ನಾಡಗೌರಿಗೆ ಮಾಲಾರೆ್ಣ ಮಾಡಿ ಆಶೀರ್ವಾದ ನೀಡಿದರು. ವಿ.ವಿ.ಸಂಘದ ಅಧ್ಯಕ್ಷ ವೀರಪಾಕ್ಷಯ್ಯ ಹಿರೇಮಠ, ಸಿದ್ದನಗೌಡ ಪಾಟೀಲ ನಾವದಗಿ, ಪಿಎಸ್‌ಐ ಜ್ಯೋತಿ ಖೋತ್, ಸಂಗನಗೌಡ ಅಸ್ಕಿ, ಸಜ್ಜನ ಬಳಗಾನೂರ, ಆಸೀಫ್ ಕೆಂಭಾವಿ, ಮಲ್ಲನಗೌಡ ದೇಸಾಯಿ, ಬಬ್ಲೂ ಕೆಂಭಾವಿ ಮತ್ತೀತರರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 