ಜಾಮಿಯಾ ಮಸೀದಿಗೆ ಶಾಸಕ ನಾಡಗೌಡ ಭೇಟಿ

ಜಾಮಿಯಾ ಮಸೀದಿಗೆ ಶಾಸಕ ನಾಡಗೌಡ ಭೇಟಿ MLA Nadagouda visits Jamia Masjid

ತಾಳಿಕೋಟಿ 25: ಪುಟ್ಟಣದ ಐತಿಹಾಸಿಕ ಸಾತೋ ಶಹೀದ ಜಾಮೀಯಾ ಮಸೀದಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಅಪ್ಪಾಜಿ ನಾಡಗೌಡರು ಶುಕ್ರವಾರ ಭೇಟಿ ನೀಡಿದರು.  ಅವರು ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹಮದ್ ಖಾಜಿ ಹಾಗೂ ಮಸೀದಿ ಮುಖ್ಯಸ್ಥರೊಂದಿಗೆ ಮಸೀದಿ ನಿರ್ಮಾಣದ ಕುರಿತು ಮಾತನಾಡಿ ಸರ್ಕಾರದ ಸೌಲಭ್ಯಗಳು ಪಡೆಯಲು ತಿಳಿಸಿದರು. ಮಸೀದಿ ಸುಂದರವಾಗಿ ನಿರ್ಮಾಣಗೊಂಡಿರುವುದಕ್ಕೆ ಶಾಸಕರು ಸಂತೋಷ ವ್ಯಕ್ತಪಡಿಸಿದರು. ಜಾಮೀಯಾ ಮಸೀದಿ ಕಮಿಟಿ ವತಿಯಿಂದ ಶಾಸಕ ನಾಡಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.  

ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹಮದ್ ಕಾಜಿ ಅವರು ಶಾಸಕರಿಗೆ ಸಚಿವ ಸ್ಥಾನ ಸಿಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು.  ಗಣ್ಯರಾದ ವಿ.ಸಿ.ಹಿರೇಮಠ, ಸಿದ್ದನಗೌಡ ಪಾಟೀಲ ನಾವದಗಿ, ಸಂಗನಗೌಡ ಅಸ್ಕಿ, ಹಸನಸಾಬ ಮನಗೂಳಿ, ಮುರ್ತುಜಾ ಮೇತ್ರಿ, ಮೋದಿನಸಾ ನಗಾರ್ಚಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಭಾವಿ, ಮಂಜೂರಲಿ ಬೇಪಾರಿ, ತನ್ವೀರ್ ಮನಗೂಳಿ, ಆಸೀಫ್ ಕೆಂಭಾವಿ, ಮಲ್ಲನಗೌಡ ದೇಸಾಯಿ ಮತ್ತೀತರರು ಇದ್ದರು.