ಮೃತ ಲಕ್ಷ್ಮಣರಾವ್ ಮನೆಗೆ ಶಾಸಕ ನಾಡಗೌಡ ಭೇಟಿ : ಸಾಂತ್ವನ
MLA Nad Gowda visits deceased Laxman Rao's house: Condolences
ತಾಳಿಕೋಟಿ 07 : ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಲಕ್ಷ್ಮಣರಾವ್ ಮಹಿಂದ್ರಕರ ಅವರು ಇತ್ತೀಚಿಗೆ ನಿಧನರಾದ ಹಿನ್ನೆಲೆಯಲ್ಲಿ ಕೆ ಎಸ್ ಡಿ ಎಲ್ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಮಂಗಳವಾರ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶಾಸಕರು ದಿವಂಗತ ಲಕ್ಷ್ಮಣರಾವ್ ಮಹಿಂದ್ರಕರ ಅವರೊಂದಿಗಿನ ತಮ್ಮ ರಾಜಕೀಯ ಒಡನಾಟ, ಪಕ್ಷದ ಕುರಿತು ಅವರಿಗಿದ್ದ ನಿಷ್ಠೆ ಹಾಗೂ ಅವರಲ್ಲಿದ್ದ ಒಳ್ಳೆಯ ಮಾನವೀಯ ಗುಣಗಳನ್ನು ಮೆಲುಕು ಹಾಕಿ ಇವತ್ತು ನಾನು ಪಕ್ಷದ ಒಬ್ಬ ಒಳ್ಳೆಯ ನಿಷ್ಠಾವಂತ ಮುಖಂಡನನ್ನು ಕಳೆದುಕೊಂಡಿದ್ದೇನೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು. ಈ ಸಮಯದಲ್ಲಿ ಮೃತ ಲಕ್ಷ್ಮಣ್ ಮಹಿಂದ್ರಕರ ಅವರ ಸಹೋದರ ದೀಲೀಪ ಮಹಿಂದ್ರಕರ, ಎಸ್ ಎಂ ಮಹಿಂದ್ರಕರ, ವಿ.ಬಿ.ಲೋಕರೆ, ತುಳಸಿದಾಸ ಹಂಚಾಟೆ, ಮೋತಿಲಾಲ್ ಮಹಿಂದ್ರಕರ, ಕಿಟ್ಟು ಮಹಿಂದ್ರಕರ, ವಿಜಯ ಮಹಿಂದ್ರಕರ, ಸುರೇಶಧಣಿ ನಾಡಗೌಡ (ಬಿಂಜಲಬಾವಿ), ಸಿದ್ದನಗೌಡ ಪಾಟೀಲ (ನಾವದಗಿ), ಪ್ರಭುಗೌಡ ಮದರಕಲ್ಲ, ನೀಲಮ್ಮ ಗೌಡತಿ ಪಾಟೀಲ ಹಾಗೂ ಕುಟುಂಬದ ಸದಸ್ಯರು ಇದ್ದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 