ಕೋಟಿ ವೆಚ್ಚದ ಡಾಂಬರೀಕರಣ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ
MLA Mahendra Thammanava performed the ground breaking ceremony for the tarmacked road costing crores
ಪಾಲಬಾವಿ 03: ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ ರವರು ಇತ್ತೀಚಿಗೆ ಕುಡಚಿ ಮತಕ್ಷೇತ್ರದ ಕುಡಚಿ, ಶಿರಗೂರ, ಹಾಲಶಿರಗೂರ, ಚಿಂಚಲಿ ಪಟ್ಟಣ ಕೂಡುವ ರಸ್ತೆಗೆ 285 ಕೋಟಿ ರೂಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಕ್ಲಾಸ್ ಒನ್ ಗುತ್ತಿಗೆದಾರ ಸದಾಶಿವ ದಳವಾಯಿ ಹಾಗೂ ಗ್ರಾಮಸ್ಥರು ಸೇರಿಕೊಂಡು ಹೋಮಾಲೆ ಹಾಕಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ಗುತ್ತಿಗೆದಾರ ಸದಾಶಿವ ದಳವಾಯಿ, ಗಿರಿಗೌಡ ಪಾಟೀಲ, ಮಾರುತಿ ಕಾಂಬಳೆ, ವರ್ಧಮಾನ ಶಿರಹಟ್ಟಿ, ಮಹಾದೇವ ಮಗದುಮ್ಮ, ಈಶ್ವರ ಮುರುಡಿ, ಕಲ್ಮೇಶ ಕಾಂಬಳೆ, ಲಕ್ಷ್ಮಣ ಬಾಂವೆ, ಸಂಜು ಚೌಗಲಾ, ನೀಲಪ್ಪ ಕಾಂಬಳೆ, ಇಸಾಕ್ ತಾಂಬೊಳಿ, ಬಾಬಾಸಾಹೇಬ್ ಮುಲ್ಲಾ, ಸುಭಾಷ ದಳವಾಯಿ, ಯಲ್ಲಪ್ಪ ಹುಲ್ಲೇನವರ, ಈಶ್ವರ ಕುಂಬಾರ, ಹಾಲಸಿದ್ದೇಶ್ವರ ದೇವಸ್ಥಾನದ ಅರ್ಚಕ ಗೂಳಪ್ಪ ಪೂಜಾರಿ, ಶಂಕರ ದಳವಾಯಿ, ಸಚಿನ್ ಹಳಕಲ್ಲ, ಸಹಾಯಕ ಅಭಿಯಂತರ ಕಾಂಬಳೆ, ಪಿಡಿಒ ಸೌಜನ್ಯ ಪ್ರಭಾಕರ, ಹಾಲಪ್ಪ ಸವದತ್ತಿ ಇತರರು ಇದ್ದರು.ಫೋಟೋ ಶೀರ್ಷಿಕೆ:-03ಪಿಎಲ್ಬಿ.02 ಶಿರಗೂರ ಗ್ರಾಮದಲ್ಲಿ 285 ಕೋಟಿ ರೂಗಳ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಯ ಪೂಜಾ ಸಂದರ್ಭದಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರಗೆ ಗುತ್ತಿಗೆದಾರ ಸದಾಶಿವ ದಳವಾಯಿ ಹಾಗೂ ಗ್ರಾಮಸ್ಥರು ಸನ್ಮಾನಿಸುತ್ತಿರುವುದು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 