ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಲಮಾಣಿ
MLA Lamani performs Bhoomi Puja for new project
ಲಕ್ಷ್ಮೇಶ್ವರ 02 : ಲೋಕೋಪಯೋಗಿ ಇಲಾಖೆ ಗದಗ ವಿಭಾಗ ಶಿರಹಟ್ಟಿ ಉಪ ವಿಭಾಗ ಸನ್ 2024-25ನೇ ಸಾಲಿನ ಲೆಕ್ಕ ಶೀರ್ಷಿಕೆ ರಾಜ್ಯ ಹೆದ್ದಾರಿ ಸೇತುವೆ ನಿರ್ವಹಣೆಯ ಅಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ತಾಲೂಕಿನ ದೊಡ್ಡೂರು- ಶಿಗ್ಲಿ ರಸ್ತೆ ಮಧ್ಯ ಬಾಕ್ಸ್ ಕಲ್ವರ್ಟ್ ನಿರ್ಮಾಣಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಅವರು ಶನಿವಾರ ಭೂಮಿ ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಹಲವಾರು ಗ್ರಾಮಗಳಿಗೆ ಸಂಪರ್ಕಿಸಿ ರಸ್ತೆಗಳ ಮಧ್ಯದಲ್ಲಿ ಇರುವ ಹಳ್ಳದ ಸೇತುವೆಗಳು ಸಂಪೂರ್ಣ ನೆಲಮಟ್ಟದಲ್ಲಿ ಇವೆ ಮಳೆ ಬಂದ ಸಂದರ್ಭದಲ್ಲಿ ಹಳ್ಳಗಳ ತುಂಬಿ ಹರಿಯುವ ಸಮಯದಲ್ಲಿ ರಸ್ತೆ ಸಂಪರ್ಕಗಳು ಸಹ ಬಂದಾಗಿ ವಾಹನ ಸವಾರರು ತೊಂದರೆಯನ್ನು ಅನುಭವಿಸುವಂತಹ ಪರಿಸ್ಥಿತಿ ಇವೆ ಅಂತಾ ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು ಅವಶ್ಯವಾಗಿದ್ದು ಈಗಾಗಲೇ ಸರಕಾರಕ್ಕೆ ಅನುದಾನದ ಬೇಡಿಕೆಯನ್ನು ಸಲ್ಲಿಸಲಾಗಿದೆ ಸರ್ಕಾರದಿಂದ ಬರುವ ಹಂತ ಹಂತದ ಅನುದಾನದಿಂದ ತಾಲೂಕಿನ ಕೆಳ ಮಟ್ಟದಲ್ಲಿರುವ ಸೇತುವೆಗಳನ್ನು ಮತ್ತು ಹದಗಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಈ ಸಮಯದಲ್ಲಿ ದೊಡ್ಡೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಇಳಿಗೇರ ಅಶೋಕ ಶಿರಹಟ್ಟಿಟೋಪಣ್ಣ ಲಮಾಣಿ ಗುಡ್ಡಪ್ಪ ಹಡಪದ ಗಂಗಾಧರ ಮೆಣಸಿನಕಾಯಿ ಸೇರಿದಂತೆ ಶಿಗ್ಲಿ ದೊಡ್ಡೂರು ಉಂಡೆನಹಳ್ಳಿ ಗ್ರಾಮದ ಅನೇಕ ಮುಖಂಡರು ಯುವಕರು ಇದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 