ಹಸಿರು ನಿಸಾನೆ ತೋರಿಸಿ ಹೊಸ ಬಸ್ಗೆ ಚಾಲನೆ ನೀಡಿದ ಶಾಸಕ ಲಮಾಣಿ
MLA Lamani flags off new bus
ಲಕ್ಷ್ಮೇಶ್ವರ 08; ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಎರಡು ಹೊಸ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಶಾಸಕ ಡಾ ಚಂದ್ರು ಲಮಾಣಿ ಅವರು ಮಾತನಾಡಿ ಈಗ ಚಾಲನೆ ನೀಡುತ್ತಿರುವ ಎರಡು ಹೊಸ ಬಸ್ ಗಳನ್ನು ಗ್ರಾಮೀಣ ಭಾಗಗಳ ಕಡೆಗೆ ಸಂಚರಿಸುವ ಶಿರಹಟ್ಟಿ ಬೆಳ್ಳಟ್ಟಿ ಮುಂಡರಗಿ ಮಾರ್ಗಕ್ಕೆ ಬಿಡಬೇಕು. ಈಗ ಸಂಚರಿಸುತ್ತಿರುವ ಹಳೆ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟ ನಿಲ್ಲುತ್ತಿವೆ ಇದರಿಂದ ಗ್ರಾಮೀಣ ಭಾಗದ ಪ್ರಯಾಣಿಕರು ತೊಂದರೆಯನ್ನು ಅನುಭವಿಸುವುದು ತಪ್ಪುತ್ತದೆ ಇನ್ನೂ ಹೊಸ ಬಸ್ಸುಗಳು ಬೇಕಾಗುತ್ತವೆ ಅವುಗಳನ್ನು ತರಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಲ್ಲ ಪ್ರಯಾಣಿಕರು ಶಾಂತಿ ರೀತಿಯಿಂದ ಪ್ರಯಾಣ ಮಾಡಬೇಕು ಈಗಾಗಲೇ ಸರ್ಕಾರ ಘೋಷಿಸಿರುವಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಪ್ರಾರಂಭ ವಾಗಬೇಕು ವಿದ್ಯಾರ್ಥಿಗಳಿಗೆ ಪಂಪ್ ಸರ್ಕಲ್ ಬಸ್ ನಿಲ್ದಾಣ ಶಿಗ್ಲಿ ರಸ್ತೆಯಲ್ಲಿರುವ ಪದವಿ ಪೂರ್ಣ ಕಾಲೇಜಿಗೆ ಹೂಗಲು ಪ್ರತ್ಯೇಕ ಬಸ್ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ಘಟಕದವರಿಗೆ ತಿಳಿಸಿದರು.
ಮಹಿಳೆಯರು ಬಸ್ ಹತ್ತುವಾಗ ಇಳಿಯುವಾಗ ತಮ್ಮ ಆಭರಣಗಳ ಕಡೆ ಹೆಚ್ಚು ಗಮನ ಹರಿಸಬೇಕು ಬಸ್ ಹತ್ತುವ ಗದ್ದಲದಲ್ಲಿ ಆಭರಣಗಳ ಕಳೆದುಕೊಂಡು ರೋಧಿಸುತ್ತಿರುವ ಘಟನೆಗಳು ಕಂಡುಬರುತ್ತವೆ ಅದಕ್ಕಾಗಿ ಮಹಿಳೆಯರು ಜಾಗೃತಿಯಿಂದ ಪ್ರಯಾಣ ಮಾಡಬೇಕು ಎಂದರು.
ಪಂಚ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ 5 ಪಂಚ್ ಗ್ಯಾರಂಟಿ ಯೋಜನೆಯನ್ನು ಜನರಿಗೆ ನೀಡುತ್ತಿದ್ದು ಈಗಾಗಲೇ ಲಕ್ಷ್ಮೇಶ್ವರ ಘಟಕಕ್ಕೆ16 ಹೊಸ ಬಸ್ಸುಗಳನ್ನು ನೀಡಿದೆ ಮುಂದೆಯೂ ಸಹ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚು ಬಸ್ ಬಿಡುವ ಅವಸ್ಥೆ ಮಾಡುತ್ತೇವೆ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲು ವಾಗಲೆಂದು ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದಾರೆ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಮಯದಲ್ಲಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಸವಿತಾ ಆದಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಪಿ ಬಳಿಗಾರ, ಕ್ರೈಂ ಪಿಎಸ್ಐ ಟಿ ಕೆ ರಾಠೋಡ್, ಅನಿಲ ಮುಳುಗುಂದ, ಗಂಗಾಧರ ಮೆಣಸಿನಕಾಯಿ, ಗೀರೀಶ್ ಚೌರೆಡ್ಡಿ, ಪ್ರವೀಣ ಬೋಮಲೆ, ಮಂಜುಪ್ಪ ಶೆರಶೂರಿ, ಯಲ್ಲಪ್ಪ ಹಂಜಗಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಂಚ್ ಗ್ಯಾರಂಟಿ ಸಮಿತಿಯ ಸದಸ್ಯರು ಮುಖಂಡರು ಪ್ರಯಾಣಿಕರು ಇದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 