ಶಾಸಕ ಲಕ್ಷ್ಮಣ ಸವದಿಗೆ ಅಥಣಿ ಪುರಸಭಾ ಸದಸ್ಯರಿಂದ ಸನ್ಮಾನ

ಶಾಸಕ ಲಕ್ಷ್ಮಣ ಸವದಿಗೆ ಅಥಣಿ ಪುರಸಭಾ ಸದಸ್ಯರಿಂದ ಸನ್ಮಾನ   MLA Lakshman Savadi felicitated by Athani Municipality members

ಶಾಸಕ ಲಕ್ಷ್ಮಣ ಸವದಿಗೆ ಅಥಣಿ ಪುರಸಭಾ ಸದಸ್ಯರಿಂದ ಸನ್ಮಾನ   

ಅಥಣಿ 20: ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕ ಸ್ಥಾನದ ಮೂಲಕ ರೈತರಿಗೆ ಸತತ ಮೂವತ್ತು ವರ್ಷಗಳಿಂದ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಸರಕಾರದ ಆರ್ಥಿಕ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ದೀಲೀಪ ಲೋಣಾರೆ ಹೇಳಿದರು.  

ಅವರು ಶಾಸಕ ಲಕ್ಷ್ಮಣ ಸವದಿಯವರನ್ನು ಸತ್ಕರಿಸಿ ಮಾತನಾಡುತ್ತಿದ್ದರು.  

      ಶಾಸಕ ಲಕ್ಷ್ಮಣ ಸವದಿ ಸಹಕಾರ ಸಚಿವರಾಗಿದ್ದ ಸಂದರ್ಭದಲ್ಲಿ ಇಡೀ ದೇಶದಲ್ಲಿಯೇ ರೈತರಿಗೆ ಬಿಡಿಸಿಸಿ ಬ್ಯಾಂಕಿನ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರುವ ಮೂಲಕ ರೈತರಿಗೆ ಆರ್ಥಿಕವಾಗಿ ಅನಕೂಲ ಮಾಡಿಕೊಟ್ಟರು ಎಂದ ಅವರು ರಾಜ್ಯದ ಒಬ್ಬ ಪ್ರಭಾವಿ ರಾಜಕಾರಣಿಯಾಗಿ, ಸಹಕಾರಿ ಧುರೀಣರಾಗಿ ಕಾರ್ಯನಿರ್ವಹಿಸುತ್ತಿರುವ ಶಾಸಕ ಲಕ್ಷ್ಮಣ ಸವದಿ ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಭೂತಪೂರ್ವಕವಾಗಿ ಗೆಲುವು ಸಾಧಿಸಿದ್ದು, ಅಥಣಿ ಪುರಸಭೆಯ ಎಲ್ಲ ಸದಸ್ಯರ ಪರವಾಗಿ ನಾನು ಅಭಿನಂದಿಸುವೆ ಎಂದರು.  

          ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ವೀಲೀನರಾಜ ಯಳಮೇಲಿ, ರಾಜಶೇಖರ ಗುಡೋಡಗಿ, ವೆಂಕಟೇಶ ದೇಶಪಾಂಡೆ ಉಪಸ್ಥಿತರಿದ್ದರು.