ಸಕ್ಕರೆ ಕಾರ್ಖಾನೆ ಆಡಳಿತದಲ್ಲಿ ಹೊರಗಿನವರಿಗೆ ಅವಕಾಶ ಕಲ್ಪಿಸಿ ಕೊಡಬೇಡಿ, ಶಾಸಕ ಲಕ್ಷ್ಮಣ ಸವದಿ ರೈತರಲ್ಲಿ ಮನವಿ.

ಸಕ್ಕರೆ ಕಾರ್ಖಾನೆ ಆಡಳಿತದಲ್ಲಿ ಹೊರಗಿನವರಿಗೆ ಅವಕಾಶ ಕಲ್ಪಿಸಿ ಕೊಡಬೇಡಿ, ಶಾಸಕ ಲಕ್ಷ್ಮಣ ಸವದಿ ರೈತರಲ್ಲಿ ಮನವಿ.  MLA Lakshman Savadi appeals to farmers not to give opportunities to outsiders in the sugar factory a

ಸಕ್ಕರೆ ಕಾರ್ಖಾನೆ ಆಡಳಿತದಲ್ಲಿ ಹೊರಗಿನವರಿಗೆ ಅವಕಾಶ ಕಲ್ಪಿಸಿ ಕೊಡಬೇಡಿ, ಶಾಸಕ ಲಕ್ಷ್ಮಣ ಸವದಿ ರೈತರಲ್ಲಿ ಮನವಿ.  

ಅಥಣಿ 11: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಚುಕ್ಕಾಣಿಯನ್ನು ಬೇರೆ ತಾಲೂಕಿನವರ ಕೈಗೆ ಕೊಡದೇ ನಮ್ಮ ತಾಲೂಕಿನ ರೈತರಿಗೆ ಕೊಡುವ ನಿಟ್ಟಿನಲ್ಲಿ ಮುಂಬರುವ ಈ ಚುನಾವಣೆಯಲ್ಲಿ ನನ್ನ ಹಾಗೂ ಶಾಸಕ ರಾಜು ಕಾಗೆ  ನೇತೃತ್ವದ  ಸ್ವಾಭಿಮಾನಿ ಪ್ಯಾನಲ್ ನ್ನೇ ಬೆಂಬಲಿಸಿ ಎಂದು ಶಾಸಕ ಲಕ್ಷ್ಮಣ ಸವದಿ ಸದಸ್ಯರಲ್ಲಿ ಮನವಿ ಮಾಡಿದರು. ಅವರು ಕಾರಖಾನೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.  ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ನನ್ನ ಕೊಡುಗೆ ಇಲ್ಲ ಎಂದು ವಿರೋಧಿ ಬಣ ಇತ್ತೀಚಿಗೆ ಆರೋಪಿಸಿತ್ತು ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ಇದ್ದಾಗ ನಮ್ಮ ರಾಜ್ಯದ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಸೇರಿದಂತೆ  8 ಕಾರಖಾನೆಗಳನ್ನು ಕೂಡಿಸಿಕೊಂಡು ಎನ್‌.ಸಿ.ಡಿ.ಸಿ ಮೂಲಕ ರಾಜ್ಯದ ಶೇರು ಸಂಗ್ರಹಕ್ಕಾಗಿ ಮೊಟ್ಟ ಮೊದಲ ಬಾರಿಗೆ ಪ್ರಯತ್ನಿಸಿದ್ದು ನಾನೇ ಎಂದ ಅವರು ಎನ್‌.ಸಿ.ಡಿ.ಸಿ ಯಿಂದ ಇಕ್ವಿಟಿ ಕೂಡ ತರಲು ನಾನೇ ಕಾರಣ ಆದರೂ ವಿರೋಧಿ ಬಣದವರು ನಾನ್ನ ಕೊಡುಗೆ ಎನೂ ಇಲ್ಲ ಎನ್ನುತ್ತಾರೆ ನಾನು ಮಾಡಿದ ಇಂತಹ ಅನೇಕ ಕಾರ್ಯಗಳ ಕುರಿತು ಹೇಳಬಹುದು ಆದರೆ ನನಗೆ ಅದರ ಅವಶ್ಯಕತೆ ಇಲ್ಲ ಸದಸ್ಯರಿಗೆ ತಪ್ಪು ಕಲ್ಪನೆಯಾಗಬಾರದು ಎನ್ನುವ ಕಾರಣಕ್ಕೆ ಸ್ಪಷ್ಟನೆ ನೀಡಿದೆ ಎಂದರು. ಸಕ್ಕರೆ ಕಾರಖಾನೆಯ ಎರಡು ಸರ್ವಸಾಧಾರಣ ಸಭೆಗೆ ಬಂದು ಸಹಿ ಮಾಡದ ಶೇರುದಾರರಿಗೆ ಮತದಾನದ ಹಕ್ಕು ಇಲ್ಲ ಎಂದು ಕಾರಖಾನೆಯ ಆಡಳಿತ ಮಂಡಳಿಯ ನಿಯಮ ಅಲ್ಲ ಇದು ಸರಕಾರದ ಸಹಕಾರ ಇಲಾಖೆಯಲ್ಲಿ ಈ  ನಿಯಮ ಇದೆ ಆದರೆ ಇಲ್ಲಿ ಒಂದು ಅವಕಾಶವೂ ಇದೆ ಅದೆನೆಂದರೆ ಸಹಿ ಮಾಡದ ಸದಸ್ಯರಿಗೆ 185 ದಿನ ಮೊದಲು ತಿಳುವಳಿಕೆ ನೋಟಿಸ್ ಕೊಡಬೇಕು ಎಂದ ಅವರು ಯಾರು ಸಭೆಗೆ ಬಂದಿಲ್ಲ ಅಂತಹ ಸದಸ್ಯರ ಮತದಾನ ಹಕ್ಕನ್ನು ಮರಳಿ ಪಡೆಯಲು ಉಚ್ಚ ನ್ಯಾಯಾಲಯದಲ್ಲಿ ದಾವೆ ಹಾಕಿ ಪಡೆಯಬಹುದಾಗಿದ್ದರಿಂದ ಸದ್ಯದ ಆಡಳಿತ ಮಂಡಳಿ ಸದಸ್ಯರನ್ನಾಗಲಿ ಅಥವಾ ನನ್ನನ್ನು ಸಂಪರ್ಕಿಸಿ ಎಂದು ಹೇಳಿದರು.      ಕಾರಖಾನೆಯ ಆಡಳಿತ ಸುರಳಿತವಾಗಬೇಕು ಎನ್ನುವ ನಿಟ್ಟಿನಲ್ಲಿ ಚುನಾಯಿತ ಆಡಳಿತ ಮಂಡಳಿಯೊಂದಿಗೆ ಸರಕಾರದ ನಾಮನಿರ್ದೇಶನ ಸದಸ್ಯರು ಸೇರಿದಂತೆ 15 ಜನರ ಸಲಹಾ ಸಮಿತಿ ರಚಿಸಲು ಒಪ್ಪಿಗೆ ನೀಡಬೇಕು ಮತ್ತು ಆ ಸಮೀತಿ ನೀಡುವ ಎಲ್ಲ ಸಲಹೆಗಳನ್ನು ಒಪ್ಪಿಕೊಳ್ಳಬೇಕು ಆಗ ಮಾತ್ರ ನಾನು ಮತ್ತು ರಾಜು ಕಾಗೆ ಈ ಚುನಾವಣೆಯ ನೇತೃತ್ವ ವಹಿಸಿಕೊಳ್ಳುತ್ತೇವೆ ಎಂದು ಷರತ್ತು ವಿಧಿಸಿದರು.         ತಕ್ಷಣ ಶಾಸಕ ಸವದಿಯವರ ಸಲಹೆಯನ್ನು ಒಪ್ಪಿಕೊಂಡ ಪ್ರಸಕ್ತ ಆಡಳಿತ ಮಂಡಳಿ ಸದಸ್ಯರು ನಿಮ್ಮಿಬ್ಬರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸೋಣ ಮತ್ತು ಕಾರಖಾನೆಯನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಎದ್ದು ನಿಂತು ಸಭೆಯಲ್ಲಿ ಹೇಳಿದರು.         ಸಭೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ತಪ್ಪು ತಡೆಗಳಾಗಿದ್ದರೆ ನಮ್ಮ ಗಮನಕ್ಕೆ ತನ್ನಿ, ಇಂತಹ ಸಭೆಗಳಲ್ಲಿ ನೇರವಾಗಿ ಅಭಿಪ್ರಾಯ ವ್ಯಕ್ತ ಪಡಿಸಿ ಆಗ ಮಾತ್ರ ಆಡಳಿತ ಮಂಡಳಿ ಉತ್ತಮ ಆಡಳಿತ ನಡೆಸಲು ಸಾಧ್ಯ, ಇದು ರೈತರ ಸ್ವಂತ ಕಾರಖಾನೆಯಾಗಿದೆ ರೈತರು ಮನಸ್ಸು ಮಾಡಿದಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದರು. ಕೆಲ ವರ್ಷಗಳ ಹಿಂದೆ ಕಾರಖಾನೆಗಳಿಗೆ ಕಬ್ಬು ಪೂರೈಕೆ ಮಾಡುವುದು ಕಷ್ಟದಾಯಕವಾಗಿತ್ತು ಇದನ್ನು ತಪ್ಪಿಸಲು ಸಹಕಾರಿ ಕಾರಖಾನೆಯನ್ನು ಪ್ರಾರಂಭಿಸಿ ಗಟ್ಟಿಗೊಳಿಸಲಾಯಿತು.  ಕಳೆದ 25 ವರ್ಷಗಳಿಂದ ನಾನು ಮತ್ತು ಲಕ್ಷ್ಮಣ ಸವದಿ ಶಾಸಕರಾಗಿ ಅಥಣಿ ಮತ್ರು ಕಾಗವಾಡ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾವಿಬ್ಬರು ಕಳೆದ 25 ವರ್ಷಗಳಿಂದ ಎಷ್ಟು ಜನರಿಗೆ ಒಳ್ಳೆಯದನ್ನು ಮಾಡಿದ್ದವೋ ಗೊತ್ತಿಲ್ಲ ಆದರೆ ಯಾರಿಗೂ ಕೆಟ್ಟದನ್ನು ಮಾಡಿಲ್ಲ ಎಂದ ಅವರು ಬರುವ ಹಂಗಾಮಿನಲ್ಲಿ ಕೃಷ್ಣಾ ಸಕ್ಕರೆ ಕಾರಖಾನೆ ಕನಿಷ್ಠ 8 ರಿಂದ 9 ಲಕ್ಷ ಟನ್ ಕಬ್ಬು ನುರಿಸಬೇಕು ಆಗ ಮಾತ್ರ ಕಳೆದ ವರ್ಷದ ಹಾನಿಯನ್ನು ಸರಿ ತೂಗಿಸಿ ಲಾಭದಲ್ಲಿ ಮುನ್ನಡೆಸಲು ಸಾಧ್ಯ ಎಂದರು.        ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರ​‍್ಪ ಸವದಿ ಮಾತನಾಡಿ, 2007 ರಿಂದ ಇಲ್ಲಿಯವರೆಗೆ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಮಾರ್ಗದರ್ಶನದಲ್ಲಿ ಕಾರಖಾನೆಯನ್ನು ಮುನ್ನಡೆಸಿಕೊಂಡು  ಬಂದಿರುವೆ, 2018 ರಲ್ಲಿ ಕಾರಖಾನೆ 2900 ಪ್ರತಿ ಟನ್ ಕಬ್ಬಿಗೆ ಹಣ ಕೊಟ್ಟಾಗ ಸಕ್ಕೆರೆ 2400 ರೂ.ಗಳಂತೆ ಮಾರಾಟವಾಯಿತು. ಮುಂದೆ ಮಹಾಪುರ ಬಂದು ಕಬ್ಬು ಬೆಳೆ ಹಾಳಾದ ಪರಿಣಾಮ ಕಬ್ಬು ಪೂರೈಕೆಯಾಗಲಿಲ್ಲ ಇಂತಹ ಅನೇಕ ಕಾರಣಗಳಿಂದ ಕಾರಖಾನೆಗೆ ತೊಂದರೆ ಉಂಟಾಗಿದೆ ಎಂದ ಅವರು  ಮುಂದೆಯೂ ಇಬ್ಬರೂ ಶಾಸಕರ ಮಾರ್ಗದರ್ಶಮದಲ್ಲಿ ಕಾರಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು.        ಪ್ರಾಸ್ತಾವಿಕವಾಗಿ ನ್ಯಾಯವಾದಿ ಎ.ಎಮ್‌.ಖೊಬ್ರಿ, ಪ್ರಗತಿ ಪರ ರೈತರಾದ ರಾಜು ನಾಡಗೌಡ, ಜುಗೂಳನ ಸಹಕಾರಿ ಧುರೀಣ ಅಣ್ಣಾಸಾಹೇಬ ಪಾಟೀಲ, ಅನಂತ ಬಸರೀಖೋಡಿ, ಶ್ಯಾಮ ಪೂಜಾರಿ, ಶೀತಲ್ ಪಾಟೀಲ, ಶೇಖರಗೌಡ ನೇಮಗೌಡ, ಸುರೇಶ ಮಾಯಣ್ಣವರ, ಎ.ಸಿ.ಪಾಟೀಲ ಮಾತನಾಡಿದರು. ನ್ಯಾಯವಾದಿ ಸುಶೀಲಕುಮಾರ ಪತ್ತಾರ ನಿರೂಪಿಸಿದರು, ನ್ಯಾಯವಾದಿ ಡಿ.ಬಿ.ಠಕ್ಕಣ್ಣವರ ಸರ್ವರನ್ನು ಸ್ವಾಗತಿಸಿದರು.