7ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಭೂಮಿ ಪೂಜೆ
MLA J.N. Ganesh performs Bhoomi Puja for road development work costing Rs. 7 crore
ಲೋಕದರ್ಶನ ವರದಿ
ಕಂಪ್ಲಿ 06: ಕ್ಷೇತ್ರದಲ್ಲಿ ಶಿಕ್ಷಣ ನೀರಾವರಿ ಮತ್ತು ರಸ್ತೆಗೆ ಹೆಚ್ಚಿನ ಅಧ್ಯತೆ ನೀಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದ ಅಂಬೇಡ್ಕರ್ ಸರ್ಕಲ್ ಇಂದಿರಾ ಕ್ಯಾಂಟಿನ್ ಹತ್ತಿರ 2025-26ನೇ ಸಾಲಿನ 4059 ಸಿಎಂಐಡಿಕ್ಯೂ ಯೋಜನೆಯ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಕಂಪ್ಲಿ ಯಿಂದ ಕೊಟ್ಟಾಲ್ ಮಾವಿನಹಳ್ಳಿ ಶ್ರೀರಾಮರಂಗಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪುರಷರಗಿಂತ ಮಹಿಳೆಯರು ಹೆಚ್ಚಿನ ಜನಸಂಖ್ಯೆ ಇರುವುದರಿಂದ ಮಹಿಳೆಯರಿಗೆ ಮೀಸಲಾತಿ ಅಗುವ ಸಂಭವವಿದೆ ನಮ್ಮ ಪಕ್ಷದಿಂದ ಮಹಿಳೆಯರು ಯಾರೆ ನಿಂತರು ಅವರ ಪರವಾಗಿ ಕೆಲಸ ಮಾಡಲಾಗುವುದು ಇಲ್ಲ ಅಂದರೆ ಇದೆ ಮೀಸಲಾತಿ ಮುಂದುವರೆದರೆ ಪುನಹ ನಾನು ಚುನಾವಣೆ ನಿಲ್ಲುತೇವೆ ಎಂದು ಭರವಸೆ ನೀಡಿದರು.
ರೈತರಿಗೆ ಹೋಲಗಳಿಗೆ ಮಾಗಣಿ ರಸ್ತೆಗಳಿಗೆ ಅಧ್ಯತೆ ನೀಡಲಾಗುವುದು ಹೀಗೆ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿ ಎಂಸಿ ಅಧ್ಯಕ್ಷ ಹಬೀಬರೆಹಮಾನ್ ಮುಖಂಡರಾದ ಮೂಕಯ್ಯಸ್ವಾಮಿ ಲಕ್ಷೀನಾರಾಯಣ ದೇವಸಮುದ್ರ ವೆಂಕೋಬಣ್ಣ ಸುಧೀರ್ ಚಾಂದಬಾಷ ರಾಮನಾಯುಡು ನಾರಾಯಣಪ್ಪ ಸಣಾಪುರ ಹನುಮಂತಪ್ಪ ವೆಂಕಟರಾಮರಾಜ ವೀರೇಶ ಸುಧಾ ವಿ ನಾಗರಾಜ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು. ತಾಲೂಕಿನ ಕಂಪ್ಲಿ ಕೊಟ್ಟಾಲ್ ಕ್ರಾಸ್ ದಿಂದ ದೇವಸಮುದ್ರ ಮಾಗಣಿ ರಸ್ತೆ 3 ಕೋಟಿ ಮತ್ತು ಸಣಾಪುರ ರಸ್ತೆಯಲ್ಲಿರುವ ರಾಮದೇವರ ಗುಡಿಯಿಂದ ಒಂಟಿ ಮನೆವರೆಗೆ 1 ಕೋಟಿ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಾಸಕ ಗಣೇಶ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 