ಶಾಸಕ ಡಿ.ಎಮ್.ಐಹೊಳೆ ಹುಟ್ಟುಹಬ್ಬ: ನಾಳೆ ಕಬ್ಬಡ್ಡಿ ಪಂದ್ಯಾವಳಿ
ರಾಯಬಾಗ 17: ಶಾಸಕ ದುರ್ಯೋಧನ ಐಹೊಳೆಯವರ ಹುಟ್ಟುಹಬ್ಬದ ಪ್ರಯುಕ್ತ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಶಾಸಕ ಡಿ.ಎಮ್.ಐಹೊಳೆ ಇವರ ಸಾರಥ್ಯದಲ್ಲಿ ಜ.19 ರಿಂದ 21ರವರೆಗೆ ಅಖಿಲ ಭಾರತ ‘ಎ’ ಗ್ರೇಡ್ ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗಳು ಹಾಗೂ ಜ.22 ರಂದು ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸಿಜನ್ 8ರ ಅಂತಿಮ ಸ್ಪರ್ಧೆ ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಜರುಗಲಿದೆ ಎಂದು ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅರುಣ ಐಹೊಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.22 ರಂದು ಸಾಯಂಕಾಲ 6 ಗಂಟೆಗೆ ನಡೆಯಲಿರುವ ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸಮಾರಂಭ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ನಟಿ ಆರಾಧನಾ, ಗಾಯಕಿ ಶಮಿತಾ ಮಲ್ನಾಡ್, ಕಾಮಿಡಿ ಖಿಲಾಡಿ ಖ್ಯಾತಿಯ ಪ್ರವೀಣಕುಮಾರ ಗಸ್ತಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.