ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಶಾಸಕ ಸಿ ಎಸ್ ನಾಡಗೌಡ ಭೇಟಿ
MLA CS Nad Gowda visited the house of a farmer who committed suicide
ಲೋಕದರ್ಶನ ವರದಿ
ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಶಾಸಕ ಸಿ ಎಸ್ ನಾಡಗೌಡ ಭೇಟಿ
ಮುದ್ದೇಬಿಹಾಳ 09: ಸಾಲಬಾಧೆ ತಾಳದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮುದ್ದೇಬಿಹಾಳ ತಾಲೂಕು ಕುಂಟೋಜಿ ಗ್ರಾಮದ ರೈತ ಸಂಗಪ್ಪ ಲಕ್ಕಪ್ಪ ಗೌಡರ(ಬೊಮ್ಮಣಗಿ) ಇತನ ಮನೆಗೆ ಗುರುವಾರ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಭೇಟಿ ನೀಡಿ ಕುಟುಂಭಕ್ಕೆ ಸಾಂತ್ವಾನ ಹೇಳಿದರು.
ಬಳಿಕ ಶಾಸಕ ಅಪ್ಪಾಜಿ ನಾಡಗೌಡ ಅವರು ಸುದ್ದಿಗಾರರೊಂದಿಗೆ ಮತನಾಡಿ ರೈತ ಸಂಗಪ್ಪ ಲಕ್ಕಪ್ಪ ಗೌಡರ(ಬೊಮ್ಮಣಗಿ) ಅವರ ಆತ್ಮ ಹತ್ಯೆ ಇಡೀ ರೈತ ಕುಟುಂಭಕ್ಕೆ ನೋವನ್ನುಂಟು ಮಾಡಿದೆ. ಬೆಳೆ ಕೈಕೊಟ್ಟಿತಲ್ಲ ಎಂದು ರೈತರು ಆತ್ಮಹತ್ಯೆಯಂತಹ ಕೆಟ್ಟ ಈ ರೀತಿಯ ತಪ್ಪು ದಾರಿ ತುಳಿಯಬಾರದು ಯಾಕೇಂದರೆ ಅವರನ್ನೇ ನಂಬಿ ಬುದುಕಿತ್ತಿರುವ ಕುಟುಂಭವನ್ನು ಮತ್ತಷ್ಟಕ್ಕೆ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದಂತಾಗುತ್ತದೆ.
ರೈತರ ಸಮಸ್ಯೆ ಕೂಡ ನಮಗೂ ಅರ್ಥವಾಗುತ್ತದೆ ಈ ಹಿನ್ನೇಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯವರ ನೇತೃತ್ವದ ಸರಕಾರ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಮಾತ್ರವಲ್ಲದೇ ಪರಿಹಾರ ರೂದಲ್ಲಿ ಆರ್ಥಿಕ ಸಹಾಯವೂ ಕೂಡ ನೀಡಲಿದೆ. ಸಧ್ಯ ಸಂಗಪ್ಪ ಲಕ್ಕಪ್ಪ ಗೌಡರ(ಬೊಮ್ಮಣಗಿ) ಅವರು ಆತ್ಮಹತ್ಯೆ ಮಾಡಿಕೊಂಡ ಕಾರಣ ನಮ್ಮ ಸರಕಾರದಿಂದ ಸುಮಾರು 5 ಲಕ್ಷರೂಗಳನ್ನು ಪರಿಹಾರರೂಪದಲ್ಲಿ ವಿತರಿಸಲಾಗುವುದು. ಈ ವೇಳೆ ಮೃತ ರೈತನ ಪತ್ನಿಗೆ ಪ್ರತಿ ತಿಂಗಳು 2 ಸಾವಿರ ರೂಗಳ ಮಾಸಿಕ ಪಿಂಚಣೆ ನೀಡಲಾಗುವುದು. ಇದರಲ್ಲಿ ಯಾವೂದೇ ರಾಜಕೀಯ ಬೇಡ, ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ. ಕೆಲವರು ಇದೇ ಅವಕಾಶವೆಂದು ಭಾವಿಸಿ ಪರಿಹಾರ ಕೊಡಿಸುವನೆಪದಲ್ಲಿ ರಾಜಕೀಯ ಲೇಪನ ಬೆರೆಸುತ್ತಿದ್ದಾರೆ ಇಂತಹವರ ಮಾತಿಗೆ ರೈತರು ತಲೆಕೆಡಿಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ಮಕ್ಕಳು ಶಿಕ್ಷಣ ಪಡೆದಿದ್ದಾರೆ ಎಂಬ ಮಾಹಿತಿ ಮೇರೆಗೆ ನಮ್ಮ ಸರಕಾರ ಪಂಚಗ್ಯಾರಂಟಿ ಯೋಜನೆ ಪ್ರಮುಖ ಭಾಗವಾಗಿರುವ ವಿದ್ಯಾನಿಧಿಗೆ ಅರ್ಜಿ ಸಲ್ಲಿಸಿದರೆ ಅಲ್ಲಿಯೂ ಕೂಡ ಎರಡ ವರ್ಷಗಳವರೆಗೆ 15 ರೂಗಳನ್ನು ನೀಡುತ್ತದೆ. ಇಂತಹ ಅನೇಕ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಈ ವೇಳೆ ಕುಟುಂಭದವರೊಬ್ಬರು ಮಧ್ಯೆ ಪ್ರವೇಶಿಸಿ ಮಾತನಾಡಿ ಕುಂಟೋಜಿ ಸರ್ವೇ ನಂಬರ 326ರ ಜಮೀನು ಸಧ್ಯ ಕೃಷ್ಣಾ ಭಾಗ್ಯ ಜಲನಿಗಮದವರು ಮುಳವಾಡ ಪೂರ್ವ ಕಾಲುವೆ ನಿರ್ಮಾಣಕ್ಕೆಂದು ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದು ಆದರೇ ಅರ್ಧಮರ್ಧ ಸ್ವಾಧಿನ ಪಡಿಸಿಕೊಂಡಿದ್ದ ಮಾತ್ರವಲ್ಲದೇ ಜಮೀನಿನ ಮದ್ಯದಲ್ಲಿಯೇ ಕಾಲುವೆ ನಿರ್ಮಿಸಿದ್ದರಿಂದ ಅತ್ತ ಹೋಗುವಂತಿಲ್ಲ. ಇತ್ತ ಬರುವಂತಿಲ್ಲ. ಕಾಲುವೆ ಎರಡು ಬದಿಯಲ್ಲಿ ಆರೇಳು ಗುಂಟೆ ಜಮೀನು ಇದೇ ಬಿತ್ತನೆ ಮಾಡಲು ಸಾಧ್ಯವಾಗದೇ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಮನನೊಂದುಕೊಂಡರು. ಇದಕ್ಕೆ ಸ್ಪಂದಿಸಿ ಶಾಸಕ ಅಪ್ಪಾಜಿ ನಾಡಗೌಡರವರು ಮಾತನಾಡಿ ಕೆಬಿಜೆಎನ್‌ಎಲ್ ಅಧಿಕಾರಿಗಳೋಂದಿಗೆ ಧೂರವಾಣಿ ಮೂಲಕ ಮಾತನಾಡಿ ಈ ಗಾಗಲೇ ಸಂಗಪ್ಪ ಗೌಡರ(ಬೊಮ್ಮಣಗಿ ಅವರು ಆತ್ಮ ಹತ್ಯೆ ಮಾಡಿದ್ದು ಅವರ ಕುಟುಂಭ ತೀರಾ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಕಾರಣ ಭೂಸ್ವಾಧಿನ ಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಭೂ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಿಕೊಡಿ ಎಂದು ಸೂಚಿಸಿದರು.
ಶಾಶಕ ಅಪ್ಪಾಜಿ ನಾಡಗೌಡ ಅವರ ಸಲಹೆ ಪರಿಹಾರ ಕೊಡಿಸುವ ಭರವಸೆಯ ಮಾತಿಗೆ ಮೃತ ರೈತ ಕುಟುಂಭದವರು ಗೌರವಿಸಿ ಮೆಚ್ಚುಗೆ ಮಾತುಗಳನ್ನು ವ್ಯಕ್ತಪಡಿಸಿದರು.
ಈ ವೇಳೆ ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ ಬಿ ಕೆ ಬಿರಾದಾರ, ಮುಖಂಡರಾದ ಸಂಗನಗೌಡ ಬಿರಾದಾರ(ಜಿಟಿಸಿ) ಯಲ್ಲವ್ವ ಲಕ್ಕಪ್ಪ ಗೌಡರ, ಬೋರಮ್ಮ ಸಂಗಪ್ಪ ಗೌಡರ, ಪರಮಾಂದ ಗೌಡರ, ಹಣಮಂತ ಗೌಡರ, ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 