ಬಳ್ಳಾರಿ ರಾಮಕೃಷ್ಣ ಮಿಷನ್ನಿಗೆ ಶಾಸಕ ಭರತ್ ರೆಡ್ಡಿ ಭೇಟಿ

ಬಳ್ಳಾರಿ ರಾಮಕೃಷ್ಣ ಮಿಷನ್ನಿಗೆ ಶಾಸಕ ಭರತ್ ರೆಡ್ಡಿ ಭೇಟಿ MLA Bharat Reddy visits Ballari Ramakrishna Mission

ಲೋಕದರ್ಶನ ವರದಿ 

ಬಳ್ಳಾರಿ 22: ದಿ. ಮೇ 22 ರಂದು ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ ಅವರು ರಾಮಕೃಷ್ಣ ಮಿಷನ್ ಬಳ್ಳಾರಿಗೆ ಭೇಟಿ ನೀಡಿ ತಮ್ಮ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ಹತ್ತು ಲಕ್ಷ ರೂಪಾಯಿ ದೇಣಿಗೆ ಕೊಟ್ಟು ಆಶ್ರಮದ ಚಟುವಟಿಕೆಗಳಿಗೆ ಶುಭ ಹಾರಿಸಿದರು.  

ತಾವು ಏಪ್ರಿಲ್ 20 ನೇ ತಾರೀಕು ರಾಮಕೃಷ್ಣ ವಿವೇಕಾನಂದ ಕೇಂದ್ರದಿಂದ ರಾಮಕೃಷ್ಣ ಮಿಷನ್ನಿಗೆ ಹಸ್ತಾಂತರವಾದ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರ ಹಾಗೂ ಸಭಿಕರ ಮುಂದೆ 10 ಲಕ್ಷ ದೇಣಿಗೆ ಕೊಡುವುದಾಗಿ ಕೊಟ್ಟ ಮಾತಿನಂತೆಯೇ ಸ್ವತಃ ತಾವೇ ಆಶ್ರಮಕ್ಕೆ ಬಂದು ದೇಣಿಗೆ ಕೊಡುವುದರ ಮೂಲಕ ತಮ್ಮ ಮಾತನ್ನು ಪೂರೈಸಿದರು. ಇಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದ ರಾಮಕೃಷ್ಣ ವಿವೇಕಾನಂದ ಕೇಂದ್ರದ ಎಲ್ಲ ಸದಸ್ಯರ ಮತ್ತು ಆಶ್ರಮದ ಸ್ವಾಮಿಗಳ ಸಮ್ಮುಖದಲ್ಲಿ ಚೆಕ್ ಅನ್ನು ಹಸ್ತಾಂತರಿಸಿ ಮುಂದೆ ಈ ಆಶ್ರಮದ ಏಳಿಗೆಗೆ ಸಹಕರಿಸುವುದಾಗಿ ಮಾತು ಕೊಟ್ಟು ಸಭಿಕರನ್ನು ಮತ್ತು ಭಕ್ತರನ್ನುದೇಶಿಸಿ ಹಿತನುಡಿಗಳೊಂದಿಗೆ ತೆರಳಿದರು. 

ಶಾಸಕ ಭರತ್ ರೆಡ್ಡಿ ಅವರು ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವನ್ನು ನೀಡುತ್ತಾ ಸಮಾಜನಿರ್ಮಾಣ/ರಾಷ್ಟ್ರನಿರ್ಮಾಣ ಕಾರ್ಯಕ್ರಮದಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಬಳ್ಳಾರಿ ರಾಮಕೃಷ್ಣ ಮಿಷನ್ನಿನ ಮುಖ್ಯಸ್ಥರಾದ ಸ್ವಾಮಿ ಮಂಗಳನಾಥಾನಂದಜಿಯವರು ಶಾಸಕರ ಕಾರ್ಯಚಟುವಟಿಕೆಗಳನ್ನು ಮೆಚ್ಚುತ್ತಾ ಅವರಿಗೆ ಶುಭ ಹಾರೈಸುತ್ತಾ ಅವರಿಂದ ಮತ್ತಷ್ಟು ಸಮಾಜಮುಖಿ ಚಟುವಟಿಕೆಗಳಿಗೆ ದಿವ್ಯತ್ರಯರ ಆಶೀರ್ವಾದವನ್ನು ಕೋರಿದರು.