ಯಲ್ಲಮ್ಮನಗುಡ್ಡಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ: ವಿಶೇಷ ಪೂಜೆ
MLA Balachandra Jarkiholi visits Yallammanagar: Special puja performed
ಲೋಕದರ್ಶನ ವರದಿ
ಯಲ್ಲಮ್ಮನಗುಡ್ಡಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ: ವಿಶೇಷ ಪೂಜೆ
ಉಗರಗೋಳ 23: ದೀಪಾವಳಿಯ ಬಲಿಪಾಡ್ಯಮಿ ಪ್ರಯುಕ್ತ ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಾಂಗಣದಲ್ಲಿ ಇರಿಸಲಾಗಿದ್ದ ಸಾಲು ಸಾಲು ದೀಪಗಳನ್ನು ಬೆಳಗಿಸಿ, ಬೆಳಕಿನ ಹಬ್ಬ ಆಚರಿಸಿದರು.
ನಮ್ಮ ಹೆತ್ತವರು ಭಕ್ತಿಯಿಂದ ಯಲ್ಲಮ್ಮ ದೇವಿಗೆ ನಡೆದುಕೊಳ್ಳುತ್ತಿದ್ದರು. ಅವರ ನಂತರದಲ್ಲಿ ಕಳೆದ 10 ವರ್ಷಗಳಿಂದ ನಾನು ಬಲಿಪಾಡ್ಯಮಿ ದಿನ ಯಲ್ಲಮ್ಮನಗುಡ್ಡಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದೇನೆ. ದೇವಿಗೆ ಉಡಿ ತುಂಬಿ, ಕಳಸಕ್ಕೆ ಸೀರೆ ಉಡಿಸುವ ಸಂಪ್ರದಾಯ ಮುಂದುವರಿಸಿದ್ದೇನೆ. ತಾಯಿ ಅನುಗ್ರಹದಿಂದ ಎಲ್ಲ ರಂಗಗಳಲ್ಲೂ ನಮ್ಮ ಕುಟುಂಬಕ್ಕೆ ಒಳ್ಳೆಯದಾಗಿದೆ. ಇಂದು ನಾಡಿನ ಜನತೆಗೆ ಒಳ್ಳೆಯದಾಗಲೆಂದು ಬೇಡಿಕೊಂಡಿದ್ದೇನೆ ಎಂದರು.
ಬೇರೆ ಬೇರೆ ಧಾರ್ಮಿಕ ಸ್ಥಳಗಳಲ್ಲಿ ವರ್ಷಕ್ಕೊಮ್ಮೆಯೋ ಅಥವಾ ಐದು ವರ್ಷಕ್ಕೊಮ್ಮೆಯೇ ಜಾತ್ರೆ ನಡೆಯುತ್ತದೆ. ಆದರೆ, ವರ್ಷವೀಡೀ ಜಾತ್ರೆ ನಡೆಯುವ ಏಕೈಕ ಶಕ್ತಿಪೀಠ ಇದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ವಿಶ್ವಾಸ ವೈದ್ಯ ನೇತೃತ್ವದಲ್ಲಿ ಯಲ್ಲಮ್ಮನಗುಡ್ಡವನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಯಲ್ಲಮ್ಮ ದೇವಿ ದೇವಸ್ಥಾನದ ವತಿಯಿಂದ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಶಾಸಕ ವಿಶ್ವಾಸ ವೈದ್ಯ ಸತ್ಕರಿಸಿದರು.
ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ದೇವಸ್ಥಾನದ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿ ಕೋಟಾರಗಸ್ತಿ, ದೊಡಗೌಡರ, ನಾಗರತ್ನಾ ಚೋಳಿನ, ರೇಣುಕಾ ಶಿಂತ್ರಿ, ಡಿ.ಆರ್.ಚವ್ಹಾಣ, ಅಲ್ಲಮಪ್ರಭು ಪ್ರಭುನವರ, ಸದಾನಂದ ಈಟಿ, ವಿ.ಆರ್.ನೀಲಗುಂದ, ಅರ್ಚಕರಾದ ಪಂಡಿತ ಯಡೂರಯ್ಯ, ಏಕನಗೌಡ ಮುದ್ದನಗೌಡ್ರ, ವಿಶ್ವನಾಥಗೌಡ ರೇಣ್ಕೀಗೌಡ್ರ, ಪರಸನಗೌಡ ರೇಣ್ಕೀಗೌಡ್ರ, ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.
ಬಾಕ್ಸ್‌ಗಳು////
ಜಿಲ್ಲೆಯಲ್ಲಿ ಮಾದರಿ ಬ್ಯಾಂಕ್ ಮಾಡುತ್ತೇವೆ
ಡಿಸಿಸಿ ಬ್ಯಾಂಕ್ ಠೇವಣಿ ಮೊತ್ತವನ್ನು 10 ಸಾವಿರ ಕೋಟಿಯವರೆಗೆ ಹೆಚ್ಚಿಸಿ, ರೈತರು, ಗ್ರಾಹಕರು ಮತ್ತು ನೌಕರರಿಗೆ ಅನುಕೂಲ ಮಾಡುತ್ತೇವೆ. 29 ವರ್ಷಗಳ ನಂತರ ಅದು ನಮ್ಮ ತೆಕ್ಕೆಗೆ ಬಂದಿದೆ. ಅದಕ್ಕೆ ಯೋಗ್ಯವಾದ ಅಧ್ಯಕ್ಷರನ್ನು ನೇಮಕ ಮಾಡುತ್ತೇವೆ. ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಿದರೂ ತಲೆ ಕೆಡಿಸಿಕೊಳ್ಳಲ್ಲ. ಯಲ್ಲಮ್ಮ ದೇವಿ ಆಶೀರ್ವಾದದಿಂದ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಜಿಲ್ಲೆಯಲ್ಲೇ ಮಾದರಿ ಬ್ಯಾಂಕ್ ಆಗಿ ಅದನ್ನು ಬೆಳೆಸುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಡಿಸಿಸಿ ಬ್ಯಾಂಕ್‌ನ 16 ನಿರ್ದೇಶಕರ ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ನಮ್ಮ ಪೆನಲ್‌ನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮೂವರು ಅಭ್ಯರ್ಥಿಗಳು ನಮಗೆ ಬೆಂಬಲ ಕೊಟ್ಟಿದ್ದರಿಂದ ಸಂಖ್ಯಾಬಲ 13ಕ್ಕೇರಿದೆ. ನಾವೇ ಅಧಿಕಾರಕ್ಕೆ ಏರುವುದು ನಿಶ್ಚಿತ ಎಂದು ಅವರು ಹೇಳಿದರು.
=====
ಬೆಮುಲ್ ಮಾದರಿಯಲ್ಲೇ ಡಿಸಿಸಿ ಬ್ಯಾಂಕ್ ಅಭಿವೃದ್ಧಿ: ವೈದ್ಯ
ಈ ಹಿಂದೆ ಬೆಳಗಾವಿ ಜಿಲ್ಲಾ ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಬೆಮುಲ್) ಆರ್ಥಿಕ ನಷ್ಟದಿಂದ ಬಳಲುತ್ತಿತ್ತು. ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾದ ಎರಡೇ ವರ್ಷಕ್ಕೆ ಅದು ಪ್ರಗತಿಯತ್ತ ಸಾಗಿದೆ. ಹಾಲು ಪೂರೈಸಿದ ರೈತರಿಗೆ 10 ದಿನಗಳಲ್ಲೇ ರೈತರಿಗೆ ಬಿಲ್ ಕೊಡಲಾಗುತ್ತದೆ. ಈಗ ಡಿಸಿಸಿ ಬ್ಯಾಂಕ್ ನೇತೃತ್ವವನ್ನು ಬಾಲಚಂದ್ರ ಜಾರಕಿಹೊಳಿ ಅವರೇ ವಹಿಸಿಕೊಂಡಿದ್ದಾರೆ. ಹಾಗಾಗಿ ಬೆಮುಲ್ ಮಾದರಿಯಲ್ಲೇ ಡಿಸಿಸಿ ಬ್ಯಾಂಕ್ ಅನ್ನು ಬಾಲಚಂದ್ರ ಜಾರಕಿಹೊಳಿ ಬೆಳೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 