ವಿವಿಧ ರೂ. 770ಲಕ್ಷ ಕಾಮಗಾರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ

ವಿವಿಧ ರೂ. 770ಲಕ್ಷ ಕಾಮಗಾರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ MLA Babasaheb Patil launches various Rs. 770 lakh works

               ನೇಸರಗಿ 04: ಕರ್ನಾಟಕ ರಾಜ್ಯ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಕಿತ್ತೂರು ಮತಕ್ಷೇತ್ರದ ನೇಗಿನಹಾಳ ಗ್ರಾಮದ ರಸ್ತೆ, ಮೂಲ ಸೌಕರ್ಯ ಅಭಿವೃದ್ಧಿಗೆ 370 ಲಕ್ಷ ರೂಪಾಯಿಗಳ ಅಭಿವೃದ್ಧಿ ಕಾಮಗಾರಿ, ಕಿತ್ತೂರು ಮತಕ್ಷೇತ್ರದ ಹರಿನಾಲ ಅಚ್ಚುಕಟ್ಟು ಪ್ರದೇಶ  ವ್ಯಾಪ್ತಿಯಲ್ಲಿ ಬರುವ ಸಂಪಗಾಂವ ಗ್ರಾಮದ ಚನ್ನಪ್ಪ ನಾಗನಗೌಡರ ಇವರ ಹೊಲದಿಂದ ಶಂಕರಗೌಡ ಪಾಟೀಲ ಇವರ  ಹೊಲದ ವರೆಗೆ ಹಾಗೂ ಹಳೆ ಕುರಗುಂದ ಗ್ರಾಮದಿಂದ ಕೂಡುವ 7 ಬಿ ಹಂಚು ಕಾಲುವೆ ರಸ್ತೆ ನಿರ್ಮಾಣಕ್ಕೆ  120 ಲಕ್ಷ ರೂಪಾಯಿಗಳ ಕಾಮಗಾರಿ, ಜಲಸಂಪನ್ಮೂಲ ಇಲಾಖೆಯಿಂದ ಕಿತ್ತೂರು ಮತಕ್ಷೇತ್ರದ ಹರಿನಾಲಾ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಳೆ ಕುರಗುಂದ ಗ್ರಾಮದಿಂದ ಹರಿನಾಲಾ ಬಳದಂಡೆ ಕಾಲುವೆ 7 ಎಲ್ ಕುಡುರಸ್ತೆ ನಿರ್ಮಾಣ ಮತ್ತು ಹೊಳಿ ಹೊಸೂರ ಗ್ರಾಮದಿಂದ ಪಟ್ಟಿಹಾಳ ಬಳದಂಡೆ ಡೆಡ್ ಎಂಡ್ ಕುಡು ರಸ್ತೆ 180 ಲಕ್ಷ ರೂಪಾಯಿಗಳ ಕಾಮಗಾರಿ ಹಾಗೂ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಕಿತ್ತೂರು ಮತಕ್ಷೇತ್ರದ  ಕುರಗುಂದ ಗ್ರಾಮದಲ್ಲಿ ರಸ್ತೆ, ಮೂಲ ಸೌಕರ್ಯ ಅಭಿವೃದ್ಧಿ ಗೆ 100 ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗೆ ಕಿತ್ತೂರು ಚನ್ನಮ್ಮ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಅವರು ದಿ. 3ರಂದು  ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು. 

              ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ನಾನು ಕೊಟ್ಟ ಮಾತಿನಂತೆ ಜನರ ಅನುಕೂಲಗಳಿಗೆ ತಕ್ಕಂತೆ ರಸ್ತೆ, ಮೂಲ ಸೌಕರ್ಯ, ಹೊಲದ ರಸ್ತೆ, ನೀರಾವರಿ ಯೋಜನೆ ಅನುಷ್ಠಾನ ಮತ್ತು ಅವುಗಳ ಮುಂದುವರಿಕೆಗೆ ಇಂದು ಕಾರ್ಯಪ್ರವೃತನಾಗಿ ಕಾರ್ಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದ ಕಾರ್ಯ ಮಾಡಲಾಗುವದು ಎಂದರು.     ನೇಗಿನಹಾಳ, ಸಂಪಗಾಂವ, ಕುರಗುಂದ, ಹೊಳಿ ಹೊಸೂರ, ಹಳೆ ಕುರಗುಂದ  ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಹಕಾರಿ ಧುರಿನರು, ರೈತರು, ಕಾರ್ಯಕರ್ತರು ಭಾಗವಹಿಸಿದ್ದರು.