ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿ ಶಾಸಕ ಅಶೋಕ ಮನಗೂಳಿ
MLA Ashok Managuli distributes free bus passes to students
ಲೋಕದರ್ಶನ ವರದಿ
ಸಿಂದಗಿ 23 ; ನಗರವು ವಿದ್ಯಾಕಾಶಿಗೆ ಹೆಸರಾಗಿದ್ದು ಇಲ್ಲಿನ ಗ್ರಾಮೀಣ ಮಕ್ಕಳು ಸಾರಿಗೆ ವ್ಯವಸ್ಥೆಯಿಂದ ಶೈಕ್ಷಣಿಕ ಪ್ರಗತಿ ಸುಧಾರಣೆಯಗಬೇಕೆನ್ನು ದೃಷ್ಠಿಯಿಂದ ವಿದ್ಯಾರ್ಥಿನಿಯರ ಜೊತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಬಸ್ಸಿನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 6ನೇ ಗ್ಯಾರೆಂಟಿಯನ್ನು ಸರಕಾರ ಘೋಷಣೆ ಮಾಡಿದ್ದಾರೆ ಅಂತಹ ಮಹತ್ವಾಕಾಂಕ್ಷಿ ಯೋಜನೆಯಡಿ ಬಸ್ಸ ಪಾಸ್ ವಿತರಣೆ ಮಾಡಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಂಡು ತಮ್ಮ ಜೀವನದ ದಿಕ್ಸೂಚಿ ಬದಲಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಎಲೈಟ್ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಬಾಗ ಸಿಂದಗಿ ಘಟಕದಿಂದ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಕ್ಷೇತ್ರದ ಸಮಸ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಗಳನ್ನು ವಿತರಿಸಿ ಮಾತನಾಡಿ, ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರೆಂಟಿಗಳನ್ನು ಸಮರ್ಕವಾಗಿ ನಿರ್ವಹಿಸಿಕೋಮಡು ಬಂದಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಅಧಿಕಾರ ಸ್ವೀಕರಿಸಿ ರಾಜ್ಯದ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆ ರೂಪಿಸಿ ಇದಕ್ಕೆ ತಗಲು ಸುಮಾರು 850 ಕೋಟಿ ಅನುದಾನವು ಕೂಡಾ ಕಾಯ್ದಿರಿಸಿದ್ದಾರೆ. ಹೀಗಾಗಿ ಎಲ್ಲ ಗ್ಯಾರೆಂಟಿ ಯೋಜನೆಗಳಿಗೆ ಸುಮಾರು 60 ಸಾವಿರ ಕೋಟಿ ವ್ಯಯ ಮಾಡುತ್ತಿದೆ ಎಲ್ಲ ಗ್ಯಾರೆಂಟಿಗಳ ಸದುಪಯೋಗ ಪಡೆದುಕೋಂಡು ಜೀಓನ ಶೈಲಿ ಬದಲಿಸಿಕೊಳ್ಳಬೇಕು ಎಂದರು.
ವಿಬಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಮಾತನಾಡಿ, ಬಸ್ಸುಗಳು ನಮ್ಮೆಲ್ಲರ ಆಸ್ತಿ ಅವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಬಸ್ಸ ಸಮಯಕ್ಕೆ ವಿಳಂಬವಾಗಿದೆ ಬಂದಿದೆ ಎಂದು ಬಸ್ಸಿಗೆ ಕಲ್ಲು ಒಡೆಯುವ ಪ್ರವೃತ್ತಿ ಇಟ್ಟುಕೊಳ್ಳಬೇಡಿ, ತಮ್ಮ ತಂದೆ ತಾಯಿ ನೀಡಿದ ಒಳ್ಳೆಯ ಸಂಸ್ಕಾರವನ್ನು ಶೈಕ್ಷಣಿಕ ಪ್ರಗತಿಯಲ್ಲಿ ಸಾಧನೆಗೈದು ಹಿರಿಯ ಗೌರವಕ್ಕೆ ಪಾತ್ರರಾಗಿ ಎಂದು ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕ ಶಾಂತೂ ಹಿರೇಮಠ, ವಿದ್ಯಾರ್ಥಿ ಚೇತನ ಕಾಸರ ಮಾತನಾಡಿದರು. ಸಹಾಯಕ ಸಂಚಾರ ನಿಯಂತ್ರಣಾಧಿಕಾರಿಗಳಾದ ಎಂ.ಎಸ್.ಹಿರೇಮಠ, ಆನಂದ ಹೂಗಾರ, ಎಲೈಟ್ ಸಂಸ್ಥೆಯ ಅಧ್ಯಕ್ಷ ಮಹಿಬೂಬ ಅಸಂತಾಪೂರ, ಘಟಕ ವ್ಯವಸ್ಥಾಪಕ ಭೀಮಾಶಂಕರ ವಾಘಮೋರೆ, ಎಪಿಎಂಸಿ ಅಧ್ಯಕ್ಷ ಕಲ್ಲಣ್ಣ ನಾಯ್ಕೋಡಿ, ಗ್ಯಾರಂಟಿ ಸಮಿತಿ ಸದಸ್ಯ ಮೋಸೀನ ಬೀಳಗಿ ವೇದಿಕೆ ಮೇಲಿದ್ದರು. ಉಪನ್ಯಾಸಕ ಭಗತ್ ಕೆಂಬಾವಿ ಸ್ವಾಗತಿಸಿ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 