ಶಾಸಕ ಅಪ್ಪಾಜಿ ನಾಡಗೌಡರಿಂದ ಬೆಳೆ ಹಾನಿ ವೀಕ್ಷಣೆ
MLA Appaji Nadagowda inspects crop damage
ಶಾಸಕ ಅಪ್ಪಾಜಿ ನಾಡಗೌಡರಿಂದ ಬೆಳೆ ಹಾನಿ ವೀಕ್ಷಣೆ
ತಾಳಿಕೋಟಿ 10: ಸಪ್ಟಂಬರ್ ಮಾಸದಲ್ಲಿ ಈ ಬಾರಿ ವಾಡಿಕೆ ಗಿಂತ ಹೆಚ್ಚು ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಹಾನೀಗೀಡಾಗಿದ್ದು, ಇದಕ್ಕಾಗಿ ಜಂಟಿ ಸಮೀಕ್ಷೆಯನ್ನು ಕೈಗೊಂಡು ಅರ್ಹ ರೈತರ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರದ ಮಾರ್ಗಸೂಚಿಯಂತೆ ಬೆಳೆ ಪರಿಹಾರ ನೀಡಲಾಗುವುದು. ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಅವರು ಯಾವ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಕೆ ಎಸ್ ಡಿ ಎಲ್ ಅಧ್ಯಕ್ಷ ಶಾಸಕ ಸಿ. ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಶುಕ್ರವಾರ ತಾಲೂಕಿನ ಬಾವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಜಮೀನುಗಳ ಬೆಳೆ ಹಾನಿ ವೀಕ್ಷಣೆ ಮಾಡಿದ ನಂತರ ಅವರು ಅತಿವೃಷ್ಟಿ ಹಾನಿ ಕುರಿತು ಮಾಹಿತಿ ನೀಡಿದರು.
ಈ ಬಾರಿಯ ಅತಿವೃಷ್ಟಿಯಿಂದಾಗಿ ರೈತರು ಅತಿ ಹೆಚ್ಚು ಬೆಳೆದ ಹತ್ತಿ ಬೆಳೆ ಶೇ. 70ರಷ್ಟು ಹಾನೀಗೀಡಾಗಿದೆ ಹಾಗೂ ತೊಗರಿ ಬೆಳೆಯೂ ಸಹ ಭಾಗಶ ಹಾಳಾಗಿದೆ ಇದರಿಂದ ನಮ್ಮ ರೈತರು ಕಷ್ಟದಲ್ಲಿರುವುದು ನಿಜ ಅವರಿಗೆ ತೊಂದರೆ ಮಾಡಬೇಕು ಬೆಳೆ ಹಾನಿ ಆಗಿರುವ ಪ್ರಮಾಣ ಕಡಿಮೆ ತೋರಿಸಬೇಕು ಎಂಬ ಉದ್ದೇಶ ನಮಗಿಲ್ಲ ನಮ್ಮದು ರೈತ ಪರವಾಗಿರುವ ಸರಕಾರ ರೈತರ ಹಿತ ಚಿಂತನೆ ನಮ್ಮ ಮುಖ್ಯ ಧ್ಯೇಯವಾಗಿದೆ. ಪರಿಹಾರ ನೀಡುವಲ್ಲಿ ಸರ್ಕಾರದ ಮಾನದಂಡಗಳಿವೆ ಅದನ್ನು ನಾವು ಪಾಲಿಸಬೇಕಾಗುತ್ತದೆ, ಆದರೆ ಕೆಲವರು ಇದರಲ್ಲಿಯೂ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅವರು ತಾವು ಅಧಿಕಾರದಲ್ಲಿದ್ದಾಗ ರೈತರಿಗೆ ಎಷ್ಟೊಂದು ಸುಳ್ಳು ಹೇಳಿ ಮೋಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಈಗ ರೈತರಿಗೆ ತಪ್ಪು ಮಾಹಿತಿ ಕೊಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅವರೊಬ್ಬ ಮಾಜಿ ಶಾಸಕರಾಗಿದ್ದು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಜನರು ಅವರಿಗೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಅವರು ವಿಶ್ರಾಂತಿ ಪಡೆಯಲಿ, ಜನರು ಅವರ ಸೇವೆಗಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ ನಾನು ಆ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ ಎಂದ ಅವರು ನಮ್ಮ ರೈತರು ಇಂಥವರ ಕುರಿತು ಹೆಚ್ಚು ಜಾಗೃತರಾಗುವ ಅಗತ್ಯವಿದೆ ಎಂದರು.
ತಾಳಿಕೋಟಿ ತಹಶೀಲ್ದಾರ್ ಡಾ.ವಿನಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಾವಿಕಟ್ಟಿ, ತಾಂತ್ರಿಕ ಅಧಿಕಾರಿ ರಾಜೇಶ್ವರಿ ನಾಡಗೌಡ,ಕೃಷಿ ಅಧಿಕಾರಿಗಳಾದ ಮಹೇಶ ಜೋಶಿ, ಗೋವಿಂದರೆಡ್ಡಿ ಮೆದಕಿನಾಳ, ಸರ್ಕಲ್ ವಿನೋದ್ ಸಿಂದಗಿ, ಗ್ರಾಮ ಆಡಳಿತಾಧಿಕಾರಿ ಶಬ್ಬೀರ್ ಮುಲ್ಲಾ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 