ರಸ್ತೆ ಅಭಿವೃದ್ಧಿಗೆ ಕಾಮಗಾರಿಗಳಿಗೆ ಶಾಸಕ ಐಹೊಳೆ ಚಾಲನೆ
MLA Aihole launches road development works
ಚಿಕ್ಕೋಡಿ, 26 ; ಪ್ರತಿಯೊಂದು ಗ್ರಾಮಕ್ಕೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ನನ್ನ ಆದ್ಯತೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ತಾಲೂಕಿನ ಕಬ್ಬೂರಹಿಕೆಂಚನಟ್ಟಿ ರಸ್ತೆ ಹಾಗೂ ಮೀರಾಪೂರಹಟ್ಟಿಹಿಮಾಡಲಗಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ, ಈ ಎರಡೂ ರಸ್ತೆ ಕಾಮಗಾರಿಗಳಿಗೆ ತಲಾ 50 ಲಕ್ಷ ರೂ., ಒಟ್ಟು 1 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರಾಗಿದೆ ಇದರಿಂದ ಜನರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವುದಾಗಿ ತಿಳಿಸಿದರು.
ಗ್ರಾಮೀಣ ಜನತೆಯ ಬದುಕಿಗೆ ರಸ್ತೆ ಅವಶ್ಯಕ. ಉತ್ತಮ ರಸ್ತೆ ಇದ್ದರೆ ಶಿಕ್ಷಣ, ಆರೋಗ್ಯ, ವ್ಯಾಪಾರ, ಕೃಷಿ ಎಲ್ಲವೂ ಸುಗಮವಾಗುತ್ತದೆ. ಅಭಿವೃದ್ಧಿಯ ಬಾಗಿಲು ರಸ್ತೆ ಮೂಲಕವೇ ತೆರೆಯುತ್ತದೆ. ಆದ್ದರಿಂದ ಪ್ರತಿಯೊಂದು ಗ್ರಾಮಕ್ಕೂ ಗುಣಮಟ್ಟದ ರಸ್ತೆ ಒದಗಿಸುವುದು ನನ್ನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ದುರೀಣ ಸುರೇಶ ಬೆಲ್ಲದ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಕೆಂಚ್ಚಪ್ಪ ಕಾಮಗೌಡ, ಶ್ರೀಶೈಲ ತೇರದಾಳೆ, ಮಹಾದೇವ ಪ್ರದಾನಿ, ಜೆ.ಆರ್.ಪಾಟೀಲ, ವರ್ದಮಾನ ಖೆಮಲಾಪುರೆ, ಮಲ್ಲು ಜಿವನಿ, ಸುನಿಲ ಇನಾಮದಾರ, ವಿಠ್ಠಲ ಕುಕನೂರ, ಶಿವನಂದ ಮಠಪತಿ, ಎಸ್.ಎಸ್,ಹೊಸಮನಿ, ಮಾರುತಿ ಹುಡೇದ, ಶ್ರೀಶೈಲ ತಲ್ಲೂರ, ಮಾಹಾದೇವ ಹುಡೇದ, ಕೃಷ್ಟ ಮದರ, ಅಶೋಕ ರೊಟ್ಟಿ, ರಮೇಶ ಖಿಲಾರಿ, ಗುರುನಾಥ ಪಾಟೀಲ, ಸುರೇಶ ಖಜಿಡೋಣಿ, ಅಜೀತ ಖೋತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 