ಕಾಮಗಾರಿ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಶಾಸಕ ಐಹೊಳೆ ಸೂಚನೆ
MLA Aihole instructs officials to complete the work soon
ರಾಯಬಾಗ, 17 : ತಾಲೂಕಿನ ಬಾವನಸೌಂದತ್ತಿ ಗ್ರಾಮದ ಕೃಷ್ಣಾ ನದಿ ದಡದಲ್ಲಿ ನಿರ್ಮಿಸುತ್ತಿರುವ ಕೆರೆ ತುಂಬುವ ಯೋಜನೆ ಕಾಮಗಾರಿಯ ಜಾಕ್‌ವೇಲ್‌ನ್ನು ಶಾಸಕ ಡಿ.ಎಮ್.ಐಹೊಳೆರವರು ಮಂಗಳವಾರ ವಿಕ್ಷಣೆ ನಡೆಸಿ, ಕಾಮಗಾರಿ ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ತಾಲೂಕಿನ 39 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಈಗಾಗಲೇ ಪ್ರತಿಶತ 90 ರಷ್ಟು ಕಾಮಗಾರಿ ಮುಗದಿದ್ದು, ಇನ್ನುಳಿದ ಕಾಮಗಾರಿ ಬೇಗನೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಉಳಿದಿದ್ದು, ಅದನ್ನು ಕೂಡ ಈಗ ಅಧಿಕಾರಿಗಳೊಂದಿಗೆ ಮಾತನಾಡಿ ಬಗೆ ಹರಿಸಲಾಗಿದೆ ಎಂದು ತಿಳಿಸಿದರು. ಸುಮಾರು 100 ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಯೋಜನೆಯಿಂದ ದಕ್ಷಿಣ ಭಾಗದ ಮಳೆ ಆಶ್ರಿತ ಪ್ರದೇಶಗಳ ಜನ-ಜಾನುವಾರುಗಳಿಗೆ ಹಾಗೂ ಅಂತರಜಲ ಮಟ್ಟ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು. ಮಳೆಗಾಲದಲ್ಲಿ ಕೃಷ್ಣಾ ನದಿ ನೀರು ತುಂಬಿ ಹರಿಯುತ್ತಿರುವುದರಿಂದ, ಹೆಸ್ಕಾಂ ಇಲಾಖೆಯವರು 33 ಕೆವ್ಹಿ ವಿದ್ಯುತ್ ಸಂಪರ್ಕ ತಕ್ಷಣ ನೀಡಬೇಕು. ಕೆರೆ ತುಂಬುವ ಯೋಜನೆ ಮುಗಿದ ಕೂಡಲೇ ಇಲ್ಲಿಂದ ನೀರನ್ನು ಎತ್ತಿ ಕೆರೆಗಳಿಗೆ ಹರಿಸಲಾಗುವುದು ಎಂದು ತಿಳಿಸಿದರು.
ನೀರಾವರಿ ಅಧಿಕಾರಿಗಳಾದ ಇಇ ಎಸ್.ಎಸ್.ಕರಿಗಾರ, ಎಇಇ ಕಲ್ಮೇಶ ಕಮಲಾಕರ, ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಕಾಟೆ, ಅನೀಲ ಹಂಜೆ, ಮಹಾವೀರ ಪಾಟೀಲ, ದಶರಥ ಕಾಟೆ, ಅಜೀತ ಖೆಮಲಾಪೂರೆ, ಸತ್ಯಪ್ಪ ಬಿಷ್ಠೆ, ರಮಜಾನ ಮಕಂದಾರ, ಶ್ರೀಕಾಂತ ಮಂಗಸೂಳೆ, ಜಿನ್ನಪ್ಪ ಚಂಪು, ಅರುಣ ಶಿಂದೆ, ಶಾಮ ಕಾಂಬಳೆ, ದೇವಪ್ಪ ಗಾಂಜೆ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 