ವಾಷಿಂಗ್ಟನ್, ಫೆ 18 ,ದಕ್ಷಿಣ ಅಮೆರಿಕಾದ ಮಿಸ್ಸಿಸಿಪಿಯಲ್ಲಿ ಜಾಕ್ಸನ್ ಪರ್ಲ್ ನದಿ ಅಪಾಯದ ಮಟ್ಟ ಮೀರಿ ಹರಿದು, ಪ್ರವಾಹದಿಂದಾಗಿ ನೂರಾರು ಮನೆಗಳು ನಾಶವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ.
ನದಿ ಪ್ರಸ್ತುತ 36.7 ಅಡಿ (11.18 ಮೀಟರ್) ಎತ್ತರದಷ್ಟು ಹರಿಯುತ್ತಿದ್ದು, ನೀರಿನ ಪ್ರಮಾಣ ತಗ್ಗಲು ಎರಡರಿಂದ ಮೂರು ದಿನಗಳು ಬೇಕಾಗುತ್ತದೆ. ಪ್ರವಾಹದಲ್ಲಿ ಕೊಚ್ಚಿಹೋದವರ ರಕ್ಷಣಾಕಾರ್ಯ ಭರದಿಂದ ಸಾಗಿದೆ ಎಂದಿದ್ದಾರೆ. ಪ್ರವಾಹದ ಅವಘಡಗಳಲ್ಲಿ ಗ್ರೆನೆಡಾ ಕೌಂಟಿಯಲ್ಲಿ ಭಾನುವಾರ ನಾಲ್ವರು ಗಾಯಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ದುರಂತದ ಸಂಖ್ಯೆ ಹೆಚ್ಚಲು ಬಿಡುವುದಿಲ್ಲ ಎಂದಿರುವ ಅಧಿಕಾರಿಗಳು ರಕ್ಷಣಾ ಕಾರ್ಯಕ್ಕೆ ಸೂಕ್ತ ಕ್ರಮ ಕೈಐಗೊಂಡಿದ್ದಾರೆ. ಜಾಕ್ಸನ್ ಪರ್ಲ್ ನದಿಯು ಈ ಹಿಂದೆ ಎರಡು ಬಾರಿ 1979 ಹಾಗೂ 1983ರಲ್ಲಿ 38 ಅಡಿಗಳಿಗೂ ಹೆಚ್ಚು ಎತ್ತರದಲ್ಲಿ ಹರಿದಿತ್ತು ಎನ್ನಲಾಗಿದೆ.