ಬಾಗಲಕೋಟೆ: ನವನಗರದಲ್ಲಿಯ ಉಪವಿಭಾಗಾಧಿಕಾರಿಗಳ ಹಾಗೂ ತಹಶೀಲದಾರ ಕಾಯರ್ಾಲಯದ ಮಿನಿ ವಿಧಾನ ಸೌಧಕ್ಕೆ ಶುಕ್ರದೆಶೆ ಪ್ರಾರಂಭವಾಗಿದೆ.
ಬಾಗಲಕೋಟೆಗೆ ತಹಶೀಲ್ದಾರರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಗುರುಸಿದ್ಧಯ್ಯ ಹಿರೇ ಮಠ ರವರ ಇಚ್ಛಾಶಕ್ತಿಯಿಂದಾಗಿ ಮಿನಿ ವಿಧಾನ ಸೌಧದ ಕೋಠಡಿ ಹಾಗೂ ಆವರಣ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಈ ಸೌಧ ಉದ್ಘಾಟನೆಯಾದಾಗಿನಿಂದ ಹಲವು ತಹಶೀಲ್ದಾರ ಕಾರ್ಯನಿ ರ್ವಹಿಸಿದ್ದರೂ. ಇದುವರೆಗೆ ಯಾರೂ ಸ್ವಚ್ಛತೆಯ ಕಡೆಗೆ ಗಮನ ಹರಿಸಿರಲಿಲ್ಲಾ ಮಿನಿ ವಿಧಾನ ಸೌಧದ ಮೂಲೆ ಮೂಲೆಗಳಲ್ಲಿ ಗುಟುಕಾದಿಂದ ಕಲೆ, ಎಲ್ಲಂದ ರಲ್ಲಿ ಕಸ ಕಡ್ಡಿ, ಕೊಳೆತ ವಸ್ತು, ಮರಿ ಹಿರಿ ರಾಜಕೀಯ ಪುಡಾರಿಗಳ ಸಮ್ಮೇಳನ ವಿವಿಧ ಕಾರ್ಯಕ್ರಮಗಳ ಬಿತ್ತಿ ಪತ್ರಗಳಿಂದ ಮಿನಿ ವಿಧಾನಸೌಧ ನಲುಗಿ ಹೋಗಿತ್ತು.
ತಹಶೀಲ್ದಾರ ಗುರುಸಿದ್ಧಯ್ಯ ಅವರು ತಮ್ಮ ಸಿಬ್ಬಂದಿ ಹಾಗೂ ತಾಲೂಕಿನ ಎಲ್ಲ ಗ್ರಾಮ ಲೆಕ್ಕಾಧಿ ಕಾರಿಗಳು ಗ್ರಾಮ ಸಹಾಯಕರು ತಿಂಗಳು ಎರಡನೇಯ ಶನಿವಾರ ಹಾಗೂ ತಿಂಗಳ ನಾಲ್ಕನೇಯ ಶನಿವಾರ ರಜೆ ದಿನವಾಗಿದ್ದರಿಂದ ಮಿನಿ ವಿಧಾನ ಸೌಧ ಸ್ವಚ್ಛಗೊಳಿ ಸುವ ಕಾರ್ಯಕೈಗೊಂಡರು.
ದೂಳು ತುಂಬಿದ ಕಡತಗಳು, ನಿರುಪಯುಕ್ತ ವಸ್ತುಗಳು, ಮೂಲೆ ಮೂಲೆಯಲ್ಲಿ ಬಿಡು ಬಿಟ್ಟ ಜೆಡರ ಬಲೆ ಸ್ವಚ್ಛತೆ ಕಾಣದೆ ಮಸಕಾ ಗಿರುವ ಕಿಡಕಿಗಳ ಗಾಜುಗಳು, ಕುಳಿತರೆ ಮೈಗೆ ಅಂಟಿಕೊಳ್ಳು ತ್ತಿರುವ ದೂಳು ಹಿಡಿದ ಕುಚರ್ಿ ಗಳು, ಕಲೆಗಳಿಂದ ಕೂಡಿದ ನೆಲ ಹಾಸು ಕಸ ಕಡ್ಡಿಗಳಿಂದ ಕೂಡಿದ ಆವರಣ ವಟ್ಟಿನಲ್ಲಿ ಇಡೀ ಮಿನಿ ವಿಧಾನ ಸೌಧ ಶನಿವಾರ ರಂದು ಲಕಲಕ ಹೊಳಿಯುವಂತಾಗಿತ್ತು ಈ ಕುರಿತು ಮಾತನಾಡಿದ ತಹಶೀಲ್ದಾರ ಗುರುಶಿದ್ದಯ್ಯ ಹಿರೇಮಠ ರವರು ನಾನು ಇಲ್ಲಿಗೆ ಬಂದಾಗ ಕಳೆಗುಂದಿದ ದೂಳು ಕಸಕಡ್ಡಿಗಳಿಂದ ಕೂಡಿದ ಮಿನಿ ವಿಧಾನ ಸೌಧದ ಸ್ವಾಗತ ದೊರೆಯಿತು.
ಅಂದೇ ನಾನು ತೀಮರ್ಾ ನಿಸಿ ಪ್ರತಿ ತಿಂಗಳು ಎರಡನೇಯ ಶನಿವಾರ ಹಾಗೂ ತಿಂಗಳ ನಾಲ್ಕ ನೇಯ ಶನಿವಾರದ ರಜೆ ದಿನ ವನ್ನು ಉಪಯೋಗಿಸಿಕೊಂಡು ನಮ್ಮ ಕಾಯರ್ಾಲಯವನ್ನು ನಾವೇ ಸ್ವಚ್ಛಮಾಡಿಕೊಳ್ಳಬೇಕೆಂಬ ತೀಮರ್ಾಣಕ್ಕೆ ಬಂದು ಇದಕ್ಕೆ ನಮ್ಮೆಲ್ಲ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾ ಯಕರ, ಸಹಕಾರ ಮತ್ತು ಸಮ್ಮತಿ ದೊರೆತಿದ್ದರಿಂದ ಸಾಧ್ಯವಾಗಿದ್ದು ಮುಂಬರುವ ದಿನಗಳಲ್ಲಿ ಮಿನಿ ವಿಧಾನ ಸೌಧದ ಆವರಣದಲ್ಲಿ ಗಿಡ ಮರಗಳನ್ನು ನೆಟ್ಟು ಕಾರ್ಯ ನಿಮಿತ್ಯ ಆಗಮಿಸುವ ಸಾರ್ವಜ ನಿಕರಿಗೆ ನೆರಳು ಹಾಗೂ ಕುಳಿತು ಕೊಳ್ಳಲು ಹಾಸನದ ವ್ಯವಸ್ಥೆ ಮಾಡಿಕೊಡಬೇಕೆಂಬ ಬಯಕೆ ಇದ್ದು ಅದು ಕೈಗೂಡುವವರೆಗೆ ಈ ಕಾರ್ಯ ನಿರಂತರವಾಗಿ ನಡೆಯ ಲಿದೆ ಎಂದರು.ಈ ಕಾರ್ಯದಲ್ಲಿ ಉಪ ತಹಶೀಲ್ದಾರಗಳಾದ ಪಿ. ಎ.ಶಿಂಗ್ರಿ,ಎಂ.ಎಸ್.ದೊಡ ಮನಿ ಗ್ರಾಮ ಲೆಕ್ಕಾಧಿಕಾರಿಗಳಾದ ಶಶಿ ಕಾಂತ ಪೂಜಾರ,ಶ್ರೀಕಾಂತ ಪಾಟೀಲ,ವಿಜಯಕುಮಾರ ದೇಶಮಾನೆ ಸೇರಿದಂತೆ ಸಿಬ್ಬಂದಿಗಳು ಇದ್ದರು.