ಎಂ.ಬಿ.ಎ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
MBA Students Welcome Ceremony
ಬೆಳಗಾವಿ 06: ಕೆ.ಎಲ್.ಎಸ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಅಂಡ್ ರಿಸರ್ಚ್ ಬೆಳಗಾವಿ, ಎಂ.ಬಿ.ಎ. (2025ಹಿ2027) ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲು ’ಆರಂಭ’ ಎಂಬ ದಿಕ್ಸೂಚಿ ಕಾರ್ಯಕ್ರಮವನ್ನು ಆಯೋಜಿಸಿತು. ಇದು ಅವರ ಶೈಕ್ಷಣಿಕ ಮತ್ತು ವೃತ್ತಿಪರ ಪ್ರಯಾಣದ ಆರಂಭವನ್ನು ಗುರುತಿಸಿತು. ಕಾರ್ಯಕ್ರಮವು ಡಾ. ಆರಿಫ್ ಶೇಖ್, ನಿರ್ದೇಶಕರು, ಕೆ.ಎಲ್.ಎಸ್. ಐ.ಎಂ.ಇ.ಆರ್. ರವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಅವರು ನೂತನ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಂಸ್ಥೆಯ ಶೈಕ್ಷಣಿಕ ಕಲಿಕೆಯ ವಾತಾವರಣ, ಬೋಧಕರ ಮಾರ್ಗದರ್ಶನ, ಉದ್ಯಮದ ಒಡನಾಟ ಮತ್ತು ಸಲಹೆ ಬೆಂಬಲದ ಸದುಪಯೋಗ ಪಡೆದುಕೊಳ್ಳಲು ಪ್ರೇರೇಪಿಸಿದರು. ಜವಾಬ್ದಾರಿಯುತ, ಕೌಶಲ್ಯವುಳ್ಳ ಮತ್ತು ಉದ್ಯಮಕ್ಕೆ ಸಿದ್ಧರಿರುವ ನಿರ್ವಹಣಾ ವೃತ್ತಿಪರರನ್ನು ಅಭಿವೃದ್ಧಿಪಡಿಸುವಲ್ಲಿ ಐ.ಎಂ.ಇ.ಆರ್.ನ ಬದ್ಧತೆಯನ್ನು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದವರು ಉಮೇಶ್ ಬೆಲ್ಲೂಡಿ, ಸಿ.ಇ.ಒ., ಬ್ರೈನ್ ಟ್ರೀ ಎಚ್.ಆರ್. ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್. ಇವರು ಬೆಂಗಳೂರು ಮತ್ತು ಅಮೆರಿಕದಲ್ಲಿ ಕಛೇರಿಗಳನ್ನು ಹೊಂದಿರುವ ಜಾಗತಿಕ ಮಾನವ ಸಂಪನ್ಮೂಲ ಸಲಹಾ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಕೆ.ಎಲ್.ಎಸ್. ಐ.ಎಂ.ಇ.ಆರ್.ನ (1996ರ ಬ್ಯಾಚ್) ಹೆಮ್ಮೆಯ ಹಳೆಯ ವಿದ್ಯಾರ್ಥಿಯಾದ ಇವರು, ಯಶಸ್ವಿ ಅಂತಾರಾಷ್ಟ್ರೀಯ ಸಲಹಾ ಸಂಸ್ಥೆಯನ್ನು ಕಟ್ಟಿದ ತಮ್ಮ ಪ್ರಯಾಣದ ಅನುಭವ ಹಂಚಿಕೊಂಡರು. ತಮ್ಮ ಪ್ರೇರಕ ಭಾಷಣದಲ್ಲಿ, ಶ್ರೀ ಬೆಲ್ಲೂಡಿ ಅವರು ಮಹತ್ವಾಕಾಂಕ್ಷಿ ವ್ಯವಸ್ಥಾಪಕರಿಗೆ ಯಶಸ್ಸಿನ ಐದು ಪ್ರಮುಖ ಆಯಾಮಗಳನ್ನು ಎತ್ತಿ ತೋರಿಸಿದರು:
*ಸಮರ್ಥ ಸಂವಹನ * ಕಾರ್ೊರೇಟ್ ನಾಯಕತ್ವದ ಉಪಕ್ರಮ
*ನಿರಂತರ ಕಲಿಕೆ * ಜಾಲಬಂಧ ಮತ್ತು ವೃತ್ತಿಪರ ಸಂಬಂಧಗಳ ನಿರ್ಮಾಣ
*ತಂತ್ರಜ್ಞಾನದಲ್ಲಿ ಪರಿಣತಿ
"ಪ್ರತಿದಿನ ತಮ್ಮ ಮೇಲೆ ಹೂಡಿಕೆ ಮಾಡಿ" ಮತ್ತು ವೃತ್ತಿಪರ ಬೆಳವಣಿಗೆಗೆ ಉತ್ತೇಜನ ನೀಡುವ ಅವಕಾಶಗಳಲ್ಲಿ ಸಕ್ರಿಯವಾಗಿ ಕಲಿಯಲು, ಭಾಗವಹಿಸಲು ಮತ್ತು ತೊಡಗಿಸಿಕೊಳ್ಳಲು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯ್ ಕಾಲ್ಕುಂಡ್ರಿಕಾರ್, ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷರು, ಕೆ.ಎಲ್.ಎಸ್. ಐ.ಎಂ.ಇ.ಆರ್. ವಹಿಸಿದ್ದರು. ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಅವರು ಸಮಗ್ರ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು, ಶೈಕ್ಷಣಿಕ ಉತ್ಕೃಷ್ಟತೆಯ ಜೊತೆಗೆ ಕ್ರೀಡೆ, ಹವ್ಯಾಸಗಳು ಮತ್ತು ದೈಹಿಕ ಫಿಟ್ನೆಸ್ ಕೂಡ ಆತ್ಮವಿಶ್ವಾಸದಿಂದ ಕೂಡಿದ, ಸಮತೋಲಿತ ಮತ್ತು ಭವಿಷ್ಯಕ್ಕೆ ಸಿದ್ಧರಾದ ನಿರ್ವಹಣಾ ಪದವೀಧರರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಈ ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ರಾಹುಲ್ ಮೇಲ್ಕಾನ್ಟ್ರಾಕ್ಟರ್ ಮತ್ತು ಸಹಾಯಕ ಪ್ರಾಧ್ಯಾಪಕಿ ಗೌತಮಿ ಮಗನೂರು ಅವರು ಹಿರಿಯ ವಿದ್ಯಾರ್ಥಿ ಸ್ವಯಂಸೇವಕರ ಸಹಾಯದೊಂದಿಗೆ ಸಂಯೋಜಿಸಿ, ಸುಗಮವಾಗಿ ನಡೆಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 