ಇಂಫಾಲ್, ಮಾರ್ಚ್ 7,ಕೊರೊನಾವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮಣಿಪುರ ಸರ್ಕಾರ ಅಲ್ಲಿನ ವಿಮಾನ ನಿಲ್ದಾಣ ಮತ್ತು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ ಎಂದು ಶುಕ್ರವಾರ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ ಕೆ.ರಾಜೊ ತಿಳಿಸಿದ್ದಾರೆ.ಸೋಂಕು ಶಂಕಿತ ವ್ಯಕ್ತಿಯನ್ನು ಇಂಫಾಲ್ನ ಬಿರ್ ಟಿಕೆಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ವೈರಸ್ ನಿಯಂತ್ರಣಕ್ಕಾಗಿ ಸಾರಿಗೆ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸೋಂಕು ಸಂದೇಹಾಸ್ಪದ ಪ್ರಕರಣಗಳ ನಿರ್ವಹಣೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕರೋನವೈರಸ್ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ನಿಯಮಿತವಾಗಿ ಕೈ ತೊಳೆಯುವುದು, ಮಾಸ್ಕ್ ಬಳಸುವುದು, ಸಾಮೂಹಿಕ ಕೂಟಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ, ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮುಂದೆ ಕೈ ಹಿಡಿದು ಸೀನಬೇಕು ಎಂದು ಎಚ್ಚರಿಕೆ ನೀಡಿದರು. ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ತಾತ್ಕಾಲಿಕವಾಗಿ ಒಂದು ತಿಂಗಳು ರದ್ದುಗೊಳಿಸಲಾಗಿದೆ. ಈ ವರೆಗೆ ಒಟ್ಟು 1,21,629 ಜನರನ್ನು ತಪಾಸಣೆ ಮಾಡಲಾಗಿದ್ದು, ಇಂಫಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲ ಪ್ರಮುಖ ಪ್ರದೇಶಗಳಾದ ಮೊರೆಹ್, ಬೆಹಿಯಾಂಗ್, ಸಿನ್ಜಾಲ್, ತುಸೊಮ್, ಕಾಮ್ಜಾಂಗ್, ಮಾವೋ ಗೇಟ್, ಜಿರಿಬಾಮ್ ಬಳಿ ಶಂಕಿತ ಹನ್ನೆರಡು ಮಾದರಿಗಳನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಂದು ಮುಖ್ಯಮಂತ್ರಿ ಹೇಳಿದರು.ಅದರಲ್ಲಿ 10 ಮಾದರಿಗಳು ನಕಾರಾತ್ಮಕವಾಗಿದ್ದು, ಎರಡು ವರದಿಗಳ ಫಲಿತಾಂಶದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇಂದು ಮತ್ತೊಂದು ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಪ್ರಾದೇಶಿಕ ಸಂಸ್ಥೆ (ರಿಮ್ಸ್)ನಲ್ಲಿ 4 ಹಾಸಿಗೆಗಳೊಂದಿಗೆ 8 ಹಾಸಿಗೆಗಳನ್ನು ಒಳಗೊಂಡ ಪ್ರತ್ಯೇಕ ವಾರ್ಡ್ ಅನ್ನು ಸ್ಥಾಪಿಸಲಾಗಿದೆ.ಯಾವುದೇ ಶಂಕಿತ ಪ್ರಕರಣಕ್ಕೆ ಚಿಕಿತ್ಸೆ ನೀಡಲು ವೆಂಟಿಲೇಟರ್ಗಳು ಸಿದ್ಧವಾಗಿವೆ. ಜೆಎನ್ಐಎಂಎಸ್ನಲ್ಲೂ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದ್ದು,1 ವೆಂಟಿಲೇಟರ್ನೊಂದಿಗೆ 6 ಹಾಸಿಗೆಗಳನ್ನು ಒಳಗೊಂಡಿರುವ ವಾರ್ಡ್ ಚಿಕಿತ್ಸೆಗೆ ಸಿದ್ಧವಾಗಿದೆ.ವೈರಸ್ ಕುರಿತು ಸಾರ್ವಜನಿಕರ ಸಹಾಯಕ್ಕೆ ಟೋಲ್ ಫ್ರೀ ಸಂಖ್ಯೆ 0385-2411668 ಕಂಟ್ರೋಲ್ ರೂಮ್ 24x7 ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.ಶಂಕಿತ ಪ್ರಕರಣಗಳ ಸಾಗಣೆಗೆ ಸಹಾಯವಾಗಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ಮುಖ್ಯಮಂತ್ರಿಗಳು ನೀಡಿದ್ದಾರೆ.