ದೇವರಗುಡ್ಡದ ಮಾಲತೇಶ ಶ್ರೀ ಕಾಣರ್ಿಕ: ಘಟಸರ್ಪ ಗಾಬ ಆದಿತಲೇ ಪರಾಕ್

ಲೋಕದರ್ಶನವರದಿ

ರಾಣೇಬೆನ್ನೂರು09: ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಕರಿಯಾಲದಲ್ಲಿ ಸೋಮವಾರ ಸಂಜೆ ವಿಜಯದಶಮಿ ಪ್ರಯುಕ್ತ ಪ್ರತಿವರ್ಷದ ಸಂಪ್ರದಾಯದಂತೆ ಅತ್ಯಂತ ಧಾಮರ್ಿಕ ವಿಧಿ-ವಿಧಾನಗಳೊಂದಿಗೆ ನಡೆದ ಕಾಣರ್ಿಕ ವಾಣಿಯು "ಘಟಸರ್ಪ ಗಾಬ ಆದಿತಲೇ ಪರಾಕ್.... ಎಂದಾಗಿದೆ. ಗೊರವಯ್ಯ ನಾಗಪ್ಪಜ್ಜ ಉಮರ್ಿಯವರು  ನುಡಿದ ಈ ವರ್ಷದ ಕಾಣರ್ಿಕದ ಈ ನುಡಿಯಾಗಿದ್ದು, ವರ್ಷದಲ್ಲಿ ಎರಡು ಬಾರಿ ಈ ಕಾಣರ್ಿಕವಾಗಲಿದೆ. ಭಾರತ ಹುಣ್ಣಿಮೆಯಂದು ಸುಕ್ಷೇತ್ರ ಮೈಲಾರ, ನಂತರ ದಸರಾ ಸಂದರ್ಭದಲ್ಲಿ ದೇವರಗುಡ್ಡದಲ್ಲಿ  ಈ ಕಾಣರ್ಿಕವಾಗಲಿದೆ.

     9 ದಿನಗಳವರೆಗೆ ಹಾಲು ಮತ್ತು ಹಣ್ಣುಗಳನ್ನು ಸೇವಿಸಿ ಉಪವಾಸ ವೃತ ಆಚರಿಸಿ ಅಂದಾಜು 25 ಅಡಿ ಎತ್ತರದ ಬಿಲ್ಲನ್ನೇರಿ, ಸುತ್ತಲೂ ನೋಡಿ ಜನಸಾಗರದ ಮಧ್ಯ ಕಾಣರ್ಿಕ ನುಡಿದು ಬೀಳುವುದು, ಭಕ್ತರು ಅವರನ್ನು ಕಾಪಾಡುವುದು ಕಾಣರ್ಿಕದ ಹಿಂದಿನಿಂದಲೂ ಬಂದಿರುವ ಐತಿಹ್ಯವಾಗಿದೆ. ಕಾಣರ್ಿಕದ ನುಡಿಯನ್ನು ಮಳೆ-ಬೆಳೆ, ಕೃಷಿ, ರೈತ, ಸಮಾಜ, ರಾಜಕೀಯ ಮತ್ತಿತರ ಆಯಾಮಗಳ ಮೇಲೆ ವಿಶ್ಲೇಷಿಸಬಹುದಾಗಿದೆ.

     ಕಳೆದ ಬಾರಿ ಆಗಿರುವ ಕಾಣರ್ಿಕ "ಸರ್ವರೂ ಸಂಪಲೇ, ನಾಡು ತಂಪಲೇ ಪರಾಕ್ ಎಲ್ಲರಿಗೂ ಒಳಿತಾಗುವಂತಹ ಧನಾತ್ಮಕವಾದ ನುಡಿಯಾಗಿತ್ತು.  ಆದರೆ, ಈ ಬಾರಿ ಕಾಣರ್ಿಕ ಅಜ್ಜನವರು ನುಡಿದಿರುವ ವಾಣಿಯು "ಘಟಸರ್ಪ ಗಾಬ ಆದಿತಲೇ ಪರಾಕ್... ಆಗಿರುವ ಕಾಣರ್ಿಕವನ್ನು ಜನಾಭಿಪ್ರಾಯದ ಮೇರೆಗೆ ವಿಶ್ಲೇಷಿಸಿದರೆ, ಅತಿವೃಷ್ಠಿ-ಅನಾವೃಷ್ಠಿಯಿಂದ ಮನುಕುಲ ಕಂಗಾಲು ಎನ್ನುವ ಸಾರವನ್ನು ಅಥರ್ೈಸಿಸುವಂತಾಗಿದೆ ಎನ್ನುವುದು ಸಾರ್ವಜನಿಕರ ಮಾತಾಗಿದೆಯಾದರೂ, ಕೆಲವರು ತಮ್ಮದೇ ಆದ ಬೇರೆ-ಬೇರೆ ಅರ್ಥವನ್ನು ಕಲ್ಪಿಸುತ್ತಿರುವುದು ಸಹ ಕೇಳಿಬರುತ್ತಿದೆ