ಕಲೆ ಜೀವಂತವಾಗಿರಲು ಕಲಾವಿದರ ಪರಿಶ್ರಮವೇ ಕಾರಣ ಎಂ.ಬಸವರಾಜ್
M. Basavaraj: The reason why art is alive is because of the hard work of artists
ಕಲೆ ಜೀವಂತವಾಗಿರಲು ಕಲಾವಿದರ ಪರಿಶ್ರಮವೇ ಕಾರಣ ಎಂ.ಬಸವರಾಜ್
ಬಳ್ಳಾರಿ 13: ಕಲೆ ಒಂದು ತಪಸ್ಸು, ಆದಿಯಿಂದಅಂತ್ಯದವರೆಗೂಕಲೆಯಲ್ಲಿಕಲಿಯುವುದು ಬಹಳಷ್ಟು ಇರುತ್ತದೆ ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಒಂದು ಹಬ್ಬವನ್ನೇ ಮಾಡುತ್ತಿದ್ದರು ಪಾತ್ರಧಾರಿಗಳು ತಾವೇದುಡ್ಡನ್ನು ಹಾಕಿಕೊಂಡು ನಟಿಯರನ್ನು ಕರೆಸಿ ಅಲ್ಪಸ್ವಲ್ಪ ಹಣವನ್ನುಕೊಟ್ಟು ವಿದ್ಯುತ್‌ಇಲ್ಲದ ಸಂದರ್ಭದಲ್ಲಿ ವಾಹನ ಸೌಕರ್ಯಇಲ್ಲದಿದ್ದಾಗ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದರು ನಟಿಯರುತಮ್ಮಊರಿನಿಂದಎತ್ತಿನ ಬಂಡಿಯಲ್ಲಿ ಬಂದುಎಲ್ಲೋ ದೇವಸ್ಥಾನಗಳಲ್ಲಿ ಮಲಗಿಕೊಂಡುಇಡೀರಾತ್ರಿ ನಿದ್ದೆಗಟ್ಟು ಪ್ರದರ್ಶನ ಮಾಡಿ ಹೋಗುತ್ತಿದ್ದರು.
ಇಂಥಕಲಾವಿದರಿಂದಲೇಇಂದು ಕಲೆ ಉಳಿದುಕೊಂಡಿದೆ ಎಂದುಇತಿಹಾಸಅಕಾಡೆಮಿಅಧ್ಯಕ್ಷ ಟಿ ಹೆಚ್ ಎಂ ಬಸವರಾಜ್‌ಅಭಿಪ್ರಾಯ ಪಟ್ಟರು. ಅವರು ನಗರದ ಡಾ. ಜೋಳದ ರಾಶಿ ದೊಡ್ಡನಗೌಡರಂಗಮಂದಿರದಲ್ಲಿ ಅಭಿನಯ ಕಲಾಕೇಂದ್ರ ಬಳ್ಳಾರಿ ವತಿಯಿಂದ ಹಮ್ಮಿಕೊಂಡ ’ಅಗಲಿದ ರಂಗಭೂಮಿಕಲಾವಿದರಿಗೆ ರಂಗ ನಮನ’, ’ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ’ ಹಾಗೂ ’ಮಗ ಹೋದರು ಮಾಂಗಲ್ಯ ಬೇಕು’ ಎಂಬ ಸಾಮಾಜಿಕ ನಾಟಕ ಪ್ರದರ್ಶನವನ್ನುಕರ್ನಾಟಕಇತಿಹಾಸಅಕಾಡೆಮಿಯಜಿಲ್ಲಾಧ್ಯಕ್ಷ ಟಿ.ಹೆಚ್.ಎಮ್. ಬಸವರಾಜಅಗಲಿದಕಲಾವಿದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆ ದಿನಗಳಲ್ಲಿ ಬೈಲಾಟಅಥವಾ ನಾಟಕದದಿನದಂದು ಹಳ್ಳಿಯಲ್ಲಿ ಎಲ್ಲರ ಮನೆಗಳು ತಳಿರು ತೋರಣಗಳಿಂದ ಸಿಂಗರಿಸುತ್ತಿದ್ದರು ನಟ ನಟಿಯರಿಗೆ ಬಂಧುಗಳು ಬಂದುತಮ್ಮಕಾಣಿಕೆಯನ್ನು ನೀಡಿಗೌರವಿಸುತ್ತಿದ್ದರು ಸುತ್ತಮುತ್ತಲಿನ ಹಳ್ಳಿಗಳ ಜನ ಸಹಿತ ಬರುತ್ತಿದ್ದರು.ಏಕೆಂದರೆ ಆ ದಿನಗಳಲ್ಲಿ ಟಿವಿ ಮೊಬೈಲು ಯಾವುಇರಲಿಲ್ಲ .ಇಡೀರಾತ್ರಿ ಸಾವಿರಾರುಜನ ನಾಟಕವನ್ನು ವೀಕ್ಷಿಸುತ್ತಿದ್ದರು.ಭಕ್ತಿ ಭಾವ ನೀತಿದಾಯಕ ಒಳ್ಳೆಯ ಸಂಸ್ಕೃತಿಯುಳ್ಳ ನಾಟಕ ಗಳನ್ನು ಆಡುತ್ತಿದ್ದರು.
ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತು ಸತ್ಯವಾದರೂ ಬದುಕನ್ನೇ ಬದಲಿಸುವ ಶಕ್ತಿ ನಾಟಕಗಳಿವೆ ಎಂದುಅಭಿಪ್ರಾಯಪಟ್ಟರು.ವೇದಿಕೆಯಲ್ಲಿದಾನಚಿಂತಾಮಣಿ ಮಸೀದಿಪುರ ಸಿದ್ದರಾಮನಗೌಡರಿಗೆ ಅಭಿನಯ ಕಲಾ ಕೇಂದ್ರದಿಂದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಿದ್ದರಾಮ ಗೌಡರು ಮಾತನಾಡಿ, ಇಂಥ ನಾಟಕಗಳಿಗೆ ದಾನಿಗಳು ಮುಂದೆ ಬರಬೇಕೆಂದು ವಿನಂತಿಸಿದರು.ಇತ್ತೀಚೆಗೆಅಗಲಿದಗಂಗಣ್ಣ ಶ್ರೀರಾಮುಲು ಮತ್ತು ವೆಂಕೋಬಾಚಾರ್‌ಅವರ ಬಗ್ಗೆ ಸಾಹಿತಿರಂಗ ನಿರ್ದೇಶಕ ಕೆ ಜಗದೀಶ್‌ಅವರು ಪ್ರಾಸ್ತಾವಿಕ ಮಾತನಾಡಿರಂಗನಮನ ಸಲ್ಲಿಸಿದರು ಯಲ್ಲೇಶ್ ಯಾಳಗಿ ಕೃತ ಮಗ ಹೋದರೂ ಮಾಂಗಲ್ಯ ಬೇಕು ಎಂಬ ನಾಟಕವನ್ನು ವಿಕಾಸ ಕಲಾತಂಡ ಕೊಳ ಗಲ್‌ಇವರುಎಚ್ ಎಂ ಜಗದೀಶಯ ಸ್ವಾಮಿಯವರ ನಿರ್ದೇಶನದಲ್ಲಿ ಶ್ರೀ ಗುರು ಪಂಚಾಕ್ಷರಿ ವಾದ್ಯ ವೃಂದ ಬಸಾಪಟ್ಟಣಇವರ ಸಂಗೀತ ನಿರ್ದೇಶನದಲ್ಲಿ ಪ್ರದರ್ಶನವಾಯಿತು. ಎಲ್ಲಾ ಪಾತ್ರಧಾರಿಗಳು ತಮ್ಮತಮ್ಮ ಪಾತ್ರಗಳಿಗೆ ಜೀವತುಂಬಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.ಎ ಎಂ ಪಿ ವೀರೇಶ ಸ್ವಾಮಿಕಾರ್ಯಕ್ರಮ ನಿರೂಪಿಸಿದರು.ಗಾಯಕಕುಡಿತಿನಿ ಪ್ರಕಾಶ್‌ರವರು ಪ್ರಾರ್ಥಿಸಿ ವಂದಿಸಿದರು.ನಾಟಕ ವೀಕ್ಷಿಸಲುಅಪಾರ ಪ್ರಮಾಣದ ಪ್ರೇಕ್ಷಕರು ಸೇರಿದ್ದು ವಿಶೇಷವಾಗಿತ್ತು.ಮಸೀದಿಪುರ ಸಿದ್ದರಾಮ ಗೌಡರು ಮಾತನಾಡಿಇಂಥ ನಾಟಕಗಳಿಗೆ ದಾನಿಗಳು ಮುಂದೆ ಬರಬೇಕೆಂದು ವಿನಂತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 