ರೈತ ಕುಟುಂಬಕ್ಕೆ ಎಂ. ಬಿ. ಪಾಟೀಲ ರೂ. 5 ಲಕ್ಷ ಪರಿಹಾರದ ಚೆಕ್ ವಿತರಣೆ
M. B. Patil distributes Rs. 5 lakh compensation cheque to farmer family
ವಿಜಯಪುರ 22: ಹೊಲದಲ್ಲಿ ಬೆಳೆಗಳಿಗೆ ನೀರುಣಿಸಲು ತೆರಳಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವೀಗೀಡಾದ ಇಬ್ಬರು ಸಹೋದರರ ಕುಟುಂಬಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸರಕಾರದ ವತಿಯಿಂದ ತಲಾ ರೂ. 5 ಲಕ್ಷ ಪರಿಹಾರದ ಚೆಕ್ ವಿತರಿಸಿದ್ದಾರೆ.
ತಿಕೋಟಾ ತಾಲೂಕಿನ ಬಾಬಾನಗರದ ರೈತ ಕುಟುಂಬದ ರೈತ ಸಹೋದರರಾದ ರಾಜು ವಿಜಾಪುರ ಮತ್ತು ಶ್ರೀಕಾಂತ ವಿಜಾಪುರ ಅವರುಗಳು ಕಳೆದ ವರ್ಷ ತಮ್ಮ ಹೊಲದಲ್ಲಿ ಬೆಳೆಗಳಿಗೆ ನೀರುಣಿಸಲು ಹೋಗಿದ್ದಾಗ ಅಚಾನಕ್ ಆಗಿ ವಿದ್ಯುತ್ ತಂತಿ ತಗುಲಿ ಸಾವೀಗೀಡಾಗಿದ್ದರು. ಈ ಘಟನೆಯ ಬಳಿಕ ಸಚಿವರು ಕೂಡಲೇ ಅವರ ಮನೆಗೆ ತೆರಳಿ, ದುಃಖದಲ್ಲಿದ್ದ ಕುಟುಂಬಸ್ಥರನ್ನು ಭೇಟಿಮಾಡಿ ಸಾಂತ್ವನ ಹೇಳಿ, ಸರಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದ್ದರು. ಆ ಭರವಸೆಯಂತೆ ಸಚಿವರು ಇಂದು ಸೋಮವಾರ ಮೃತ ಸಹೋದರರ ಮನೆಗೆ ತೆರಳಿದ ಸಚಿವರು ವಿಜಾಪುರ ಸಹೋದರರ ಕುಟುಂಬ ಸದಸ್ಯರಾದ ಕುಸುಮಾ ರಾಜಕುಮಾರ ವಿಜಾಪುರ ಮತ್ತು ರೇಖಾ ಶ್ರೀಕಾಂತ ವಿಜಾಪುರ ಅವರಿಗೆ ಸರಕಾರದ ವತಿಯಿಂದ ಎರಡೂ ಕುಟುಂಬಕ್ಕೂ ತಲಾ ರೂ. 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.ಬಳಿಕ ಮಾತನಾಡಿದ ಸಚಿವರು, ಸರಕಾರ ನೀಡಿರುವ ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಮೃತರ ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ದುಂಡಪ್ಪ ವಿಜಾಪುರ, ಈರನಗೌಡ ರುದ್ರಗೌಡರ, ಸಿದಗೊಂಡ ರುದ್ರಗೌಡರ, ಸುಭಾಸ್ ಅಕ್ಕಿ, ಜೊತೇಂದ್ರ ಆಯತವಾಡ, ಯಲ್ಲಾಲಿಂಗ ಹೊನವಾಡ, ಕಾಶಿರಾಯ ಡೆಂಗನವರ, ಹಣಮಂತ್ ಪೂಜಾರಿ, ಯೆಲ್ಲಪ್ಪ ಹೊನಕಟ್ಟಿ, ಸಂತೋಷ ಹೊನವಾಡ, ಅಹ್ಮದ್ ಅಲಿ ಮಕಂದರ ಮುಂತಾದವರು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 