ಲೋಕದರ್ಶನವರದಿ
ಬಳ್ಳಾರಿ24: ಅನೈತಿಕ ಸಂಬಂಧದಿಂದ ಮಹಿಳೆ ಮತ್ತು ಪುರುಷ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡ್ರಿ ಗ್ರಾಮದ ತಿಮ್ಮಪ್ಪನ ಗುಡ್ಡದಲ್ಲಿ ಮದ್ದಪ್ಪ ಮತ್ತು ಶಾಂತಮ್ಮ ವಿಷ ಸೇವಿಸಿದ್ದಾರೆ. ಮದ್ದಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಶಾಂತಮ್ಮ ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ಕೂಡ್ಲಿಗಿ ಪೊಲೀಸರು ತಿಳಿಸಿದ್ದಾರೆ.
ಮದ್ದಪ್ಪ ಅವರ ಅಣ್ಣ ಸಿದ್ದಪ್ಪ ಈ ಕುರಿತು ದೂರು ನೀಡಿದ್ದಾರೆ. ಸ್ಥಳಕ್ಕೆ ಕೂಡ್ಲಿಗಿ ಪೊಲೀಸ್ ಠಾಣೆಯ ಪಿ.ಎಸ್.ಐ ತಿಮ್ಮಣ್ಣ ಎಸ್ ಚಾಮನೂರು ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.