ಸೋತವರು ಕುಗ್ಗದೇ ಗೆಲುವಿನತ್ತ ಚಿತ್ತಹರಿಸಬೇಕು: ವಿಜಯಲಕ್ಷ್ಮಿ ಕಮ್ಮಾರ
Losers should not be discouraged and strive for victory: Vijayalakshmi Kammara
ಧಾರವಾಡ 04: ಇತ್ತಿಚೆಗೆ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಗಳು ಧಾರವಾಡ ಶಹರದ ಶಾಂತಿ ಸದನ ಪ್ರೌಢಶಾಲೆಯಲ್ಲಿ ನಡೆದವು. ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಿ.ಎಚ್.ಕ್ಯೂ. ಕ್ಲಸ್ಟರ್ನ ಸಿ.ಆರಿ್ಪ. ಯವರಾದ ವಿಜಯಲಕ್ಷ್ಮಿ ಕಮ್ಮಾರ ರವರು ಮಾತನಾಡಿ ಸೋಲು-ಗೆಲುವು ಸಮಾನಾಂತರವಾಗಿ ತೆಗೆದುಕೊಂಡು ಹೋಗಬೇಕು, ಸೋತವರು ಕುಗ್ಗದೇ ಗೆಲುವಿನತ್ತ ಚಿತ್ತಹರಿಸಬೇಕು, ಗೆದ್ದವರು ಮುಂದಿನ ಗೆಲುವಿಗಾಗಿ ಶ್ರಮ ಪಡಬೇಕು ಎಂದು ಹೇಳಿದರು.
ನಿವೃತ್ತ ಸಾಯಿ ಸ್ಪೋರ್ಟ್ಸನ ಬಾಸ್ಕೆಟ್ ಬಾಲ್ ತರಬೇತಿದಾರರಾದ ರಾಜು ಮುಖಾಶಿ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಯಾವಾಗಲೂ ಕ್ರೀಡಾ ಸ್ಪೂರ್ತಿ ಜಾಗೃತವಾಗಿರಬೇಕು ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು ಕ್ರೀಡೆಗಳಿಂದ ಆಗುವ ಪ್ರಯೋಜನ ತಿಳಿಸಿದರು. ಶಾಂತಿ ಸದನ ಪ್ರೌಢಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಫಾತಿಮಾರವರು ಮಾತನಾಡಿ ಎಲ್ಲ ವಿದ್ಯಾರ್ಥಿಗಳಿಗೆ ಶುಭಕೋರಿದರು. ಮುಖ್ಯೋಪಾದ್ಯಾಯನೀಯರಾದ ಸಿಸ್ಟರ್ ಫಿಲೋಮೆನಾರವರು ಮಾತನಾಡಿ ಎಲ್ಲ ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲಿ ಭಾವಹಿಸಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿ ತಂದೆ ತಾಯಿ ಹಾಗೂ ಶಾಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ದಾಖಲಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಡ್ಯಾನಿಯಲ್ ಕುಮಾರ, ಶಿವು ಬೊಂಗಾಳೆ, ಮಾಂತೇಶ ಪಾಟಿಲ, ಗಂಗಾಧರ ಕೊಲ್ಲೂರ, ಇಮಾನುವೆಲ್ ಚಲ್ಲಾ, ಸೈಮನ್ ಕ್ರಾಸ್ತಾ ಉಪಸ್ಥಿತರಿದ್ದರು, ಪ್ರಾರ್ಥನೆಯನ್ನು ಅಕ್ಷತಾ ಬೆನ್ನೂರರವರು ನಡೆಸಿಕೊಟ್ಟರು, ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಬಸವರಾಜ ಪಟ್ಟಣದವರರವರು ನಿರ್ವಹಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 