ಹಿಡಕಲ್ಲ ಗ್ರಾಪಂ ಕಾರ್ಯಾಲಯದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
Lord Mahavir Jayanti celebrated at Hidakalla Grama Office
ಲೋಕದರ್ಶನ ವರದಿ
ಪಾಲಬಾವಿ 30: ನೀನೂ ಬದುಕು ಇತರರನ್ನು ಬದುಕಲು ಬಿಡು ಎಂಬ ಅಹಿಂಸಾ ಪರವಾದ ಮಾತು ಜೈನ ಧರ್ಮದ ತಳಹದಿಯಾಗಿದೆ. ಸಕಲ ಜೀವಿಗಳ ಮೇಲೆ ದಯೆ ಹೊಂದಿ, ಈ ಜಗತ್ತಿನಲ್ಲಿ ಮನುಷ್ಯರಿಗೆ ಬದುಕಲು ಎಷ್ಟು ಹಕ್ಕು ಇದೆಯೋ ಹಾಗೆಯೇ ಎಲ್ಲ ಜೀವಿಗಳಿಗೂ ಹಕ್ಕಿದೆ ಎಂದು ಸಾರಿದ ಜೈನ ಧರ್ಮದ 24ನೆಯ ತೀರ್ಥಂಕರು. ಭಗವಾನ್ ಮಹಾವೀರರು ತಾವು ಕಂಡ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸಿದವರು. ದೊರೆಯ ಮಗನಾಗಿ ಸಕಲ ಐಶ್ವರ್ಯವನ್ನು ಅನುಭವಿಸುವ ಅವಕಾಶವಿದ್ದರೂ ಮಹಾವೀರರು ಎಲ್ಲವನ್ನು ಬಿಟ್ಟು ಕವಿವಾಣಿಯಂತೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬಂತೆ ಯುವರಾಜನಾಗುವ ಎಲ್ಲ ಅವಕಾಶವನ್ನು ಬದಿಗೊತ್ತಿ ತನ್ನ ಅರಿವನ್ನು ವಿಸ್ತರಿಸಲು ತಪಸ್ಸು ಮಾಡಿದರು ಭಗವಾನ್ ಮಹಾವೀರಾರು ಎಂದು ಆನಂದಿ ಹಿರೇಮಠ ಹೇಳಿದರು.ಸಮೀಪದ ಹಿಡಿಕಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ (ಮಾ.30) ರಂದು ಮುಂಜಾನೆ 9ಗಂಟೆಗೆ ಭಗವಾನ್ ಮಹಾವೀರದ ಜಯಂತಿಯ ನಿಮಿತ್ಯ ಮಹಾವೀರರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಪುಂಡಲೀಕ ನಡಕಟ್ಟಿ, ಗ್ರಾಪಂ ಸಿಬ್ಬಂದಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 