ಮಾಸ್ಕೋ, ಫೆ ೩, ಭಾನುವಾರ ಲಂಡನ್ ನಲ್ಲಿ ನಡೆದ ಇರಿತ ಪ್ರಕರಣದ ದಾಳಿಕೋರನನ್ನು ಶಿಕ್ಷೆಗೊಳಗಾದ ಭಯೋತ್ಪಾದಕ ಅಪರಾಧಿ ಎಂದು ಗುರುತಿಸಲಾಗಿದ್ದು, ಆತ ಜೈಲಿನಿಂದ ಬಿಡುಗಡೆಗೊಂಡಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.ಸ್ಥಳೀಯ ಕಾಲಮಾನ ಮಧ್ಯಾಹ್ನ ೨ ಗಂಟೆಗೆ ದಕ್ಷಿಣ ಲಂಡನ್‌ನ ಸ್ಟ್ರೀಥಮ್ ಹೈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಹಲವು ಜನರನ್ನು ಇರಿದು ಗಾಯಗೊಳಿಸಿದ್ದ ದಾಳಿಕೋರನನ್ನು ಪೊಲೀಸ್ ಅಧಿಕಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಭಯೋತ್ಪಾದನೆ-ಸಂಬಂಧಿತ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ದಾಳಿಕೋರ ಸುದೇಶ್ ಅಮ್ಮಾನ್ ೧೩ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಸರ್ಕಾರಿ ಅಧಿಕಾರಿ ಮೂಲಗಳನ್ನು ಉಲ್ಲೇಖಿಸಿ ದಿ ಗಾರ್ಡಿಯನ್ ವರದಿ ಮಾಡಿದೆ. ಮೂರು ವರ್ಷಗಳ ಶಿಕ್ಷೆಯ ಅರ್ಧ ಅವಧಿ ಮುಗಿಸಿದ ನಂತರ ಅಮ್ಮಾನ್ ನನ್ನು ಕೆಲವು ದಿನಗಳ ಹಿಂದೆ ಬಿಡುಗಡೆಗೊಳಿಸಲಾಗಿತ್ತು.