ಲೋಕಸಭೆ; ಅಗಲಿದ ಸದಸ್ಯ ಮೆಹತೊ ಗೌರವಾರ್ಥ ಅಪರಾಹ್ನದವರೆಗೆ ಕಲಾಪ ಮುಂದೂಡಿಕೆ

ನವದೆಹಲಿ,ಮಾ2, ಇದೇ 28 ರಂದು ನಿಧನರಾದ  ಲೋಕಸಭೆಯ ಹಾಲಿ ಸದಸ್ಯ ಬೈದ್ಯನಾಥ್  ಪ್ರಸಾದ್ ಮೆಹತೊ  ಅವರಿಗೆ   ಸಂತಾಪ  ಸೂಚಿಸಿದ ನಂತರ  ಸ್ಪೀಕರ್   ಕಲಾಪವನ್ನು   ಅಪರಾಹ್ನ 2 ಗಂಟೆಯವರೆಗೆ ಮುಂದೂಡಿದರು.ಸಂತಾಪ ಸೂಚಕ ನಿರ್ಣಯ  ಮಂಡಿಸಿದ    ಸ್ಪೀಕರ್  ಓಂ ಬಿರ್ಲಾ,  ಬಿಹಾರದ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಿಂದ 2009 ಹಾಗೂ  2019ರ ಸಾರ್ವತ್ರಿಕ ಚುನಾವಣೆಯಲ್ಲಿ  ಆಯ್ಕೆಗೊಂಡಿದ್ದರು.ಮೆಹತೊ ಅವರು  ಇದಕ್ಕೂ ಮೊದಲು ಬಿಹಾರ ವಿಧಾನಸಭೆಗೆ  ಮೂರು ಬಾರಿ ಚುನಾಯಿತರಾಗಿ  2005ರಿಂದ 2008ರವರೆಗೆ  ರಾಜ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ  

ಸಚಿವರಾಗಿ ಸೇವೆ ಸಲ್ಲಿಸಿದ್ದರು.ಬರಹಗಾರರೂ ಆಗಿದ್ದ  ಮೆಹತೋ     'ಕಹಿನ್ ಧೂಪ್ ಕಹಿನ್  ಛಾಯಾ"   ಎಂಬ  ಹಿಂದಿ ಕೃತಿ ರಚಿಸಿದ್ದರು.ಫೆಬ್ರವರಿ 28 ರಂದು   ತಮ್ಮ 72ನೇ ವಯಸ್ಸಿನಲ್ಲಿ  ನಿಧನಹೊಂದಿದ್ದರು.ಅಗಲಿದ  ಸದಸ್ಯನ ಆತ್ಮಕ್ಕೆ ಶಾಂತಿ ಕೋರಿ    ಸದನದ  ಎಲ್ಲ  ಸದಸ್ಯರು ಎದ್ದುನಿಂತು   ಕೆಲ ನಿಮಿಷ ಮೌನ ಆಚರಿಸಿದರು.ನಂತರ  ಸ್ಪೀಕರ್   ಸದನವನ್ನು   ಅಪರಾಹ್ನ  2 ಗಂಟೆಗೆ  ಮುಂದೂಡಿದರು.ಸಂಸತ್ತಿನ  ಬಜೆಟ್  ಅಧಿವೇಶನದ  ಎರಡನೇ ಚರಣ ಇಂದಿನಿಂದ ಆರಂಭಗೊಂಡಿದ್ದು, ಏಪ್ರಿಲ್ 3ರವರೆಗೆ ಮುಂದುವರಿಯಲಿದೆ.