ಲೋಕ್ ಅದಾಲತ್ ಯಶಸ್ವಿ:554 ಚೆಕ್ ಬೋನ್ಸ್, 62 ಅಪಘಾತ ಪರಿಹಾರ ಪ್ರಕರಣ ರಾಜಿ
Lok Adalat successful: 554 cheques cleared, 62 accident compensation cases settled
ಕಾರವಾರ 13 : ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸೇರಿದಂತೆ ಜಿಲ್ಲೆಯ 26 ಕೋರ್ಟಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ ಯಶಸ್ವಿಯಾಯಿತು.554 ಚೆಕ್ ಬೋನ್ಸ್, 62 ಅಪಘಾತ ಪರಿಹಾರ ಪ್ರಕರಣಗಳು ರಾಜಿಯಲ್ಲಿ ಕೊನೆಯಾದವು.ವಿಚ್ಛೇದನ ಕೋರಿ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದ 7 ದಂಪತಿಗಳು ಅರ್ಜಿ ಹಿಂಪಡೆದು, ಒಗ್ಗೂಡಿದರು.ಮುಂಡಗೋಡದಲ್ಲಿ 3, ಕಾರವಾರ, ಸಿದ್ದಾಪುರ, ಹಳಿಯಾಳ ಮತ್ತು ಭಟ್ಕಳದಲ್ಲಿ ತಲಾ 1 ಜೋಡಿಯು ವಿಚ್ಛೇದನ ಪ್ರಕರಣ ಹಿಂಪಡೆದರು.
ನ್ಯಾಯಾಧೀಶರ ಸಮ್ಮುಖದಲ್ಲಿ ಪುನಃ ಒಂದಾಗಿ ಬಾಳುವ ವಚನ ಕೈಗೊಂಡರು.ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ 50 ಆಸ್ತಿ ವಿಭಜನೆಯ ಪ್ರಕರಣಗಳು ರಾಜಿ ಸಂಧಾನದಲ್ಲಿ ಸುಖಾಂತ್ಯಗೊಂಡವು. ಸಹೋದರ, ಸಹೋದರಿಯರು, ಕುಟುಂಬ ಸದಸ್ಯರ ನಡುವೆ ವೈಮನಸ್ಯಕ್ಕೆ ಕಾರಣವಾಗಿದ್ದ ಪ್ರಕರಣಗಳು ನ್ಯಾಯಾಲಯದಲ್ಲಿ ಮಾತುಕತೆಯಲ್ಲಿ ಮುಗಿದವು.27,506 ಪ್ರಕರಣಗಳು ಇತ್ಯರ್ಥ:ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರ ನೇತೃತ್ವದಲ್ಲಿ ಲೋಕ ಅದಾಲತ್ ಮೂಲಕ ಒಂದೇ ದಿನ 21,243 ವ್ಯಾಜ್ಯ ಪೂರ್ವ ಪ್ರಕರಣ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ 6,263 ಪ್ರಕರಣಗಳು ಸೇರಿ ಒಟ್ಟು 27,506 ಪ್ರಕರಣಗಳು ರಾಜಿ ಸಂಧಾನದಲ್ಲಿ ಬಗೆಹರಿದವು. ನ್ಯಾಯಾಧೀಶರ ಸಮ್ಮುಖದಲ್ಲಿ ವಕೀಲರು ಕಕ್ಷಿದಾರರೊಂದಿಗೆ ಮಾತುಕತೆ ನಡೆಸಿ ಪ್ರಕರಣ ಇತ್ಯರ್ಥ ಮಾಡಿದರು.ವಿದ್ಯುತ್, ಆಸ್ತಿ ಕರ ಮತ್ತು ನೀರಿನ ಶುಲ್ಕಕ್ಕೆ ಸಂಬಂಧಿಸಿದ 7,034 ಪ್ರಕರಣಗಳು, 18,904 ಸಿವಿಲ್ ಪ್ರಕರಣಗಳು, 103 ಕಾರ್ಮಿಕ ವಿವಾದ ಪ್ರಕರಣಗಳು, 194 ಬ್ಯಾಂಕ್ ಪ್ರಕರಣಗಳು ಬಗೆಹರಿದವು. ಅವುಗಳ ಮೂಲಕ ?32.07 ಕೋಟಿ ಮೌಲ್ಯದ ಪರಿಹಾರಗಳನ್ನು ಸಂಬಂಧಿತ ಕಕ್ಷಿದಾರರಿಗೆ ಒದಗಿಸಲಾಯಿತು.
‘ಲೋಕ ಅದಾಲತ್‌ನಲ್ಲಿ ಈ ಬಾರಿ ವಿವಾಹ ವಿಚ್ಛೇಧನ, ಆಸ್ತಿ ವಿಭಜನೆಯಂತಹ ಕೌಂಟುಂಬಿಕ ಕಲಹಕ್ಕೆ ಕಾರಣವಾಗುತ್ತಿದ್ದ ಪ್ರಕರಣಗಳು ಸುಖಾಂತ್ಯವಾಗಿವೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 