ಲಾಕ್ ಡೌನ್ ಉಲ್ಲಂಘನೆ... ಶಾಸಕನ ಬಂಧನ

ಡಹ್ರಾಡೂನ್,  ಮೇ ೭,ಲಾಕ್ ಡೌನ್  ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ  ಪೊಲೀಸರು  ಶಾಸಕರೊಬ್ಬರನ್ನು  ತಮ್ಮ ವಶಕ್ಕೆ ಪಡೆದುಕೊಂಡಿರುವ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.ಉತ್ತರ ಪ್ರದೇಶಕ್ಕೆ ಸೇರಿದ ಪಕ್ಷೇತರ ಶಾಸಕ ಅಮನ್ ಮಣಿ ತ್ರಿಪಾಠಿ, ಹತ್ತು ಮಂದಿ  ಸಹಚರರೊಂದಿಗೆ  ಸೇರಿ ಕೇದಾರ ನಾಥ್, ಬದ್ರಿನಾಥ್  ದೇಗುಲಗಳನ್ನು  ಸಂದರ್ಶಿಸಲು ಹೊರಟಿದ್ದರು.ಇದಕ್ಕಾಗಿ ಸರ್ಕಾರದಿಂದ  ಅನುಮತಿಯನ್ನು ಪಡೆದುಕೊಂಡಿದ್ದರು. ಆದರೆ, ಚಮೋಲಿ ಜಿಲ್ಲೆಯಲ್ಲಿ ಪೊಲೀಸ್  ಅಧಿಕಾರಿಗಳು  ಶಾಸಕರು ಹಾಗೂ ಅವರ ಬೆಂಬಲಿಗರನ್ನು  ತಡೆದು ನಿಲ್ಲಿಸಿದರು.ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ತ್ರಿಪಾಠಿ  ತೀವ್ರ ವಾಗ್ವಾದಕ್ಕಿಳಿದರು. ಇದರಿಂದ  ಶಾಸಕರು ಹಾಗೂ ಅವರ  ೧೦ ಮಂದಿ ಸಹಚರರನ್ನು ಪೊಲೀಸರು ಬಂಧಿಸಿ,  ನಂತರ ಎಲ್ಲರಿಗೂ  ತಪಾಸಣೆ ನಡೆಸಿ, ಬಲವಂತದಿಂದ ವಾಪಸ್ಸು ಕಳುಹಿಸಿದ್ದಾರೆ.