ಪೌರ ಕಾರ್ಮಿಕರ ಜೊತೆಗೆ ಸ್ಥಳಿಯರು ಕೈಜೊಡಿಸಿ ಸಹಕರಿಸಿ ಸ್ವಚ್ಚತೆಗೆ ಆಧ್ಯತೆ ನೀಡಿ
Locals join hands with civic workers and prioritize cleanliness
ಗದಗ 25 ; ನಗರದ ಚೆನ್ನಮ್ಮ ಸರ್ಕಲ್‌ನಿಂದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದವರೆಗೂ “ಸ್ವಚ್ಚತಾ ಹೀ ಸೇವಾ “ಅಭಿಯಾನದಡಿ ಸಾಮೂಹಿಕ ಸ್ವಚ್ಚತಾ ಶ್ರಮದಾನಕ್ಕೆ ಗುರುವಾರ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಸ್ವಚ್ಛೋತ್ಸವ ಎಂಬ ಶೀರ್ಷಿಕೆಯಡಿ ನಗರದಲ್ಲಿ ಚೆನ್ನಮ್ಮ ಸರ್ಕಲ್‌ನಿಂದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದವರೆಗೂ ಅಷ್ಟೇ ಸಿಮಿತವಾಗದೆ ನಗರದಲ್ಲಿ ಪ್ರತಿಯೊಂದು ವಾರ್ಡಗಳಿಗೂ “ಸ್ವಚ್ಚತಾ ಹೀ ಸೇವಾ“ ಅಭಿಯಾನವು ಗದಗದಲ್ಲಿ ಮಾದರಿಯಾಗುವಂತೆ ಪೌರಕಾರ್ಮಿಕರು ಮತ್ತು ಸ್ಥಳಿಯರು ಸಹಕರಿಸಿ ಸ್ವಚ್ಚವಾಗಿರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದರ ಮುಖ್ಯ ಉದ್ದೇಶ ಸ್ವಚ್ಚಮೇವ ಜಯತೆ ಎನ್ನುವ ಉಕ್ತಿಯಂತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೂಂಡರೆ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ್ರ ಕೋಟೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟಿ, ಗದಗ-ಬೆಟಗೇರಿ ನರ್ಗರಸಭೆ ಪೌರಾ0ುುಕ್ತ ರಾಜಾರಾಮ್.ಎನ್.ಪವಾರ, ನಗರಸಭೆ ಪರಿಸರ ಅಭಿ0ುಂತರರು ಆನಂದ್.ಬದಿ ನಗರಸಭೆ ಸಾಹಾ0ುಕ ಕಾ0ುರ್ಾಲಕ ಅಭಿ0ುಂತರರು ಎಚ್.ಎ.ಬಂಡಿವಡ್ಡರ, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೌರ ಕಾರ್ಮಿಕರು, ಎನ್.ಎಸ್.ಎಸ್. ಎನ್ ಸಿಸಿ ವಿದ್ಯಾರ್ಥಿಗಳು, ಎನ್.ಜಿ.ಓ ಸಂಘ ಸಂಸ್ಥೆಯವರು, ಹಾಸ್ಟೆಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 