ಉತ್ಕೃಷ್ಟವಾದ ಲೋಭದ ನಿವೃತ್ತಿಯೇ ಶೌಚಧರ್ಮ
Living a good life with charity is the observance of cleanliness.
ಗದಗ 01: ಭೋಗೋಪಭೋಗ ವಸ್ತುಗಳಲ್ಲಿ ಅತ್ಯಾಸಕ್ತಿಯೇ ಲೋಭವಾಗಿದ್ದು, ಅತಿಯಾಸೆ, ಜಿಪುಣತನ ತೊರೆದು ಉದಾರ ಗುಣಗಳಿಂದ ದಾನ, ಧರ್ಮ, ಪರೋಪಕಾರದೊಂದಿಗೆ ಉತ್ತಮ ಜೀವನ ನಡೆಸುವುದೇ ಶೌಚಧರ್ಮದ ಪಾಲನೆಯಾಗಿದೆ ಎಂದು ಮಂಜುನಾಥ ಬೋಗಾರ ಹೇಳಿದರು.
ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ಪ್ರಯುಕ್ತ ರೋಣದ ಪಾರ್ಶ್ವನಾಥ ಬಸದಿಯಲ್ಲಿ ಹಮ್ಮಿಕೊಂಡಿದ್ದ ‘ಉತ್ತಮ ಶೌಚಧರ್ಮ’ ಕುರಿತು ಮಾತನಾಡುತ್ತ, ಈ ವ್ರತನಿಯಮಕ್ಕೆ ಪ್ರತಿಜ್ಞಾಬದ್ಧರಾಗಿರುವರು ತಮಗೆ ಪ್ರಾಪ್ತವಾದ ವಸ್ತುಗಳಲ್ಲೇ ತೃಪ್ತರಾಗಿ ಸಂತುಷ್ಟರಾಗಿತ್ತಾರೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನೇಮಿನಾಥ ಮುತ್ತಿನ ಅವರು ಮನುಷ್ಯನು ಅತಿ ಲಾಲಸೆಗಳು, ಭೋಗಭಾಗ್ಯಗಳ ಅಪೇಕ್ಷೆ, ಲೋಭ ಇತ್ಯಾದಿಗಳ ಕಾರಣದಿಂದ ದುಃಖಿಯಾಗಿ ಅಧಃಪತನದತ್ತ ಸಾಗುತ್ತಿದ್ದು, ಲೋಲುಪತೆಯನ್ನು ತ್ಯಾಗ ಮಾಡಿದವನು ಮಾತ್ರ ಅಂತರಂಗದಲ್ಲಿ ಶುಚಿರ್ಭೂತನಾಗುತ್ತಾನೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ, ಕಾರ್ಯದರ್ಶಿ ಪ್ರಕಾಶ ಮುತ್ತಿನ, ಉದ್ಯಮಿ ಅಭಿನಂದನ ಗೋಗಿ ಮತ್ತು ಸ್ಥಳೀಯ ಜೈನ ಸಮಾಜದ ಪದಾಧಿಕಾರಿಗಳು, ಹಿರಿಯರು, ಸುತ್ತಮುತ್ತಲಿನ ಗ್ರಾಮಗಳ ಶ್ರಾವಕರು, ಶ್ರಾವಿಕೆಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 