ಸ್ವಾಭಿಮಾನದ ಬದುಕು ಇಂದಿನ ಯುವಕರಿಗೆ ಸ್ಫೂತರ್ಿದಾಯಕ: ಮಾಳಗಿ

ಶಿಗ್ಗಾವಿ ಃ ಅನೇಕ ಅಪಮಾನ, ಅವಮಾನಗಳನ್ನು ಸಹಿಸಿಕೊಂಡು ವಿದ್ಯಾ ಸಂಪಾದನೆ ಮಾಡಿ ರಾಷ್ಟ್ರದ ಕೆಳ ವರ್ಗದವರ ಪರವಾಗಿ ಹಾಗೂ ಅಸ್ಪಶ್ಯತೆಯ ವಿರುದ್ಧ ತಮ್ಮ ಪ್ರಾಣವನ್ನೆ ಪಣಕಿಟ್ಟು ಹೋರಾಟ ಮಾಡಿದವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರವರು, ಅವರ ಸ್ವಾಭಿಮಾನದ ಬದುಕು ಇಂದಿನ ಯುವಕರಿಗೆ ಸ್ಫೂತರ್ಿದಾಯಕವಾಗಿದೆ ಎಂದು ಅಹಿಂದಾ ರಾಜ್ಯ ಮುಖಂಡ ಡಿ ಎಸ್ ಮಾಳಗಿ ಹೇಳಿದರು.

ಶುಕ್ರವಾರ ಪಟ್ಟಣದ ಅಹಿಂದ ಕಾಯರ್ಾಲಯದಲ್ಲಿ ತಾಲೂಕ ಅಹಿಂದಾ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ಡಾ. ಬಿ ಆರ್ ಅಂಬೇಡ್ಕರವರ 63 ಮಹಾ ಪರಿನಿವರ್ಾಣ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಸ್ಪೃಶ್ಯತೆಯೆಂಬ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಶ್ರಮ ಪಟ್ಟವರು ಅಂಬೇಡ್ಕರವರು, ಅವರು ಮಹಾ ಮಾನವತಾವಾದಿ, ಸಾಮಾಜಿಕ ನ್ಯಾಯದ ಚಿಂತಕರು, ಭವ್ಯ ಭಾರತದ ಸಂವಿಧಾನವನ್ನು ಬರೆದು ರಾಷ್ಟ್ರಕ್ಕೆ ನೀಡಿದ್ದರ ಹಿನ್ನಲೆಯಲ್ಲಿ ಇಂದು ಸಂವಿಧಾನದ ಅಡಿಯಲ್ಲಿ ಸರ್ವ ಧರ್ಮ, ಸರ್ವ ಜನಾಂಗದವರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ, ಎಲ್ಲ ವರ್ಗದ ಜನರು ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆ, ಅವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ದೇಶದ ದಲಿತ, ದುರ್ಬಲ ವರ್ಗದವರು ಸಂಘಟಿತರಾಗಿ ಸ್ವಾಭಿಮಾನದಿಂದ ಬದುಕನ್ನು ನಡೆಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ನಾಗರಾಜ ಹಾವೇರಿ, ಯಲ್ಲಪ್ಪ ಹರಿಜನ, ಪರಶುರಾಮ ದೊಡ್ಡಮನಿ, ಶಿದ್ದಪ್ಪ ಹರಿಜನ, ಬಸಪ್ಪ ನಿಡಗುಂದಿ, ಭೀಮಣ್ಣ ಹೊಟ್ಟುರ, ಪರಮೇಶ ಹರಿಜನ, ಮುದಕಪ್ಪ ಪಾಣಿಗಟ್ಟಿ, ಶಿವಾನಂದ ಮಾದರ ಇದ್ದರು.