ಬೀದಿ ನಾಯಿಗಳಿಂದ ಗಾಯಗೊಂಡ ಪುಟ್ಟ ಬಾಲಕರು
Little boys injured by stray dogs
ಜಮಖಂಡಿ 08: ಬೌಬೌ ಬೀದಿ ನಾಯಿಗಳ ಅಟ್ಟಹಾಸದಿಂದ ಐದಾರು ಪುಟ್ಟ ಬಾಲಕರ ಮೇಲೆ ದಾಳಿ ಮಾಡಿ ಅಟ್ಟಾಡಿಸಿ ಸಿಕ್ಕ ಸಿಕ್ಕಲ್ಲಿ ಕಚ್ಚಿ ರಕ್ತಸ್ರಾವಗೊಳಿಸಿ ಪುಟ್ಟ ಬಾಲಕರ ಚಿರಾಟ, ನರಳಾಟ, ಕಣ್ಣೀರಿನ ರೋಧನೆ ಮುಗಿಲು ಮುಟ್ಟುವಂತೆ ಇತ್ತು.
ನಗರದಲ್ಲಿ ಬೀದಿ ನಾಯಿಗಳಿಂದ ಮನೆಯಿಂದ ಆಚ್ಚೆಗೆ ಹೊರಗೆ ಬರಲು ಭಯಭೀತಗೊಂಡಿರು ಜನತೆ. ರಾಮದೇವ ಗಲ್ಲಿಯ ಇವನ್ ಸಾಗರ ಬಾಗೋಜಿ (6) ಪುಟ್ಟ ಬಾಲಕ ತಮ್ಮ ಮನೆಯ ಮುಂದೆ ಆಟವಾಡುವ ಸಮಯದಲ್ಲಿ ಬೀದಿ ನಾಯಿಗಳು ಬಾಲಕ ಮೇಲೆ ದಾಳಿ ಮಾಡಿ ಸಿಕ್ಕ ಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದ್ದಾವೆ. ಬೀದಿ ನಾಯಿಗಳು ಗಾಯಗೊಳಸಿದನ್ನು ಕಂಡ ಹೆತ್ತ ತಂದೆ-ತಾಯಿಗಳ ಕಣ್ಣೀರಿನ ಹೊಳೆ ಹರಿಯುತ್ತಿದೆ.
ಸರಕಾರಿ ಉಪವಿಭಾಗ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳ ಕಡಿತದಿಂದ ಪುಟ್ಟ ಪುಟ್ಟ ಬಾಲಕರ ಕಣ್ಣೀರಿನ ರೋಧನ, ನರಳಾಟ, ಚಿರಾಟ ನೋಡಿದ ವ್ಯಕ್ತಿಗಳಿಗೂ ಸಹ ಕಣ್ಣೀರು ಬರುವ ದೃಶ್ಯ ಸಾಮಾನ್ಯವಾಗಿತ್ತು.
ಅರಳಿಕಟ್ಟಿ ಗಲ್ಲಿ 6 ವರ್ಷದ ಮೊತ್ತಬ್ಬ ಪುಟ್ಟ ಬಾಲಕ ಪ್ರಭು ಸದಾಶಿವ ತುಪ್ಪದ ಇತನು ಮನೆಯ ಪಕ್ಕದಲ್ಲಿ ಇರುವ ಖಾಸಗಿ ಶಾಲೆಯ ಮುಂದೆ ಆಟವಾಡುವ ಸಮಯದಲ್ಲಿ ಬೀದಿ ನಾಯಿಗಳು ಬಾಲಕ ಮೇಲೆ ದಾಳಿ ನಡೆಸಿ. ಸಿಕ್ಕ ಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದ್ದಾವೆ. ಹೆತ್ತ ತಂದೆ-ತಾಯಿಯ ಹಾಗೂ ಮಗುವಿನ ಕಣ್ಣೀರಿನ ರೋಧನ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟುವಂತೆ ಇತ್ತು.
ಕತಾಟೆ ಪ್ಲಾಟ್ ಗಲ್ಲಿಯಲ್ಲಿ ಸಿಕ್ಕಲಗಾರ (7) ಪುಟ್ಟ ಬಾಲಕಿಯ ಮೇಲೆ ಬೀದಿ ನಾಯಿಗಳು ಅಟ್ಟಹಾಸ ಮೆರೆದು ಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದ್ದಾವೆ. ಆಸ್ಪತ್ರೆಯಲ್ಲಿ ಹೆತ್ತ ತಾಯಿ ರೋಧನ ಕೇಳ ತೀರದು. ಬೀದಿ ನಾಯಿಗಳ ಅಟ್ಟಹಾಸದಿಂದ ಮಕ್ಕಳನ್ನು ಗಾಯಗೊಸಿದನ್ನು ಕಂಡ ಹೆತ್ತ ತಂದೆ-ತಾಯಂದಿಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿಗಳಿಗೆ ಹಿಡಿಶಾಪ ಹಾಕುವುದು ಸರ್ವೇಸಾಮಾನ್ಯವಾಗಿತು.
ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ ಸಾರ್ವಜನಿಕರು ತಮ್ಮ ಮಕ್ಕಳನ್ನು ಹೊರಗೆ ಆಟವಾಡಲು ಹಾಗೂ ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಗರದಲ್ಲಿ ಉದ್ಭವಿಸಿದೆ. ಒಂದೇ ದಿನದಲ್ಲಿ ಐದಾರು ಪುಟ್ಟ ಬಾಲಕರ ಮೇಲೆ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಸಿಕ್ಕ ಸಿಕ್ಕಲ್ಲಿ ಕಚ್ಚಿ ಕಚ್ಚಿ ಗಾಯಗೊಸಿದ್ದಾವೆ.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 