ಸಾಹಿತ್ಯವು ಪಶುತ್ವದಿಂದ ಮನುಷ್ಯತ್ವದೆಡೆ ಒಯ್ಯುತ್ತದೆ: ರಾಘವೇಂದ್ರ ಪಾಟೀಲ

ಸಾಹಿತ್ಯವು ಪಶುತ್ವದಿಂದ ಮನುಷ್ಯತ್ವದೆಡೆ ಒಯ್ಯುತ್ತದೆ: ರಾಘವೇಂದ್ರ ಪಾಟೀಲ Literature takes us from animality to humanity: Raghavendra Patil

ಬೆಳಗಾವಿ 30- ಮನುಷ್ಯನಿಂದು ಆಧುನಿಕತೆ ಹೆಸರಿನಲ್ಲಿ ರಾಕ್ಷಸಿತನದತ್ತ ಹೊರಟಿದ್ದು ಅದರಿಂದ ಹೊರತರುವ ಶಕ್ತಿ ಸಂಗೀತ, ಸಾಹಿತ್ಯಕ್ಕಿದೆ. ಸಾಹಿತ್ಯವು ನಮ್ಮನ್ನು ನಾವು ತಿದ್ದಿ ತೀಡಿಕೊಳ್ಳುವ ಕೈಗನ್ನಡಿಯಾಗಿದೆ. ಸಂಗೀತ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಹೆಚ್ಚಿಸುವ ಕಾರ‌್ಯವಿಂದು ಆಗಬೇಕಿದೆ. ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ‌್ಯಕ್ರಮಗಳು ಆಧುನಿಕತೆ ಎಂಬ ರೋಗವನ್ನು ನಿವಾರಿಸಲು ಒಳ್ಳೆಯ ಓಷಧಿಗಳಾಗಿವೆ. ಈ ಸಾಹಿತ್ಯೋತ್ಸವ -2025 ಆ ಓಷಧಿಯಾಗಿ ಕೆಲಸ ಮಾಡುತ್ತಲಿದೆ ಎಂದು ಖ್ಯಾತ ಕಾದಂಬರಿಕಾರ ರಾಘವೇಂದ್ರ ಪಾಟೀಲ ಇಂದಿಲ್ಲಿ ಹೇಳಿದರು. 

ನಗರದ ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಹಿಂದವಾಡಿಯಲ್ಲಿರುವ ಐಎಂಇಆರ್ ಸಭಾಭವನದಲ್ಲಿ ಇಂದು ದಿನಾಂಕ 30 ರವಿವಾರದಂದು ಪ್ರಾಚಾರ್ಯ ಪ್ರಹ್ಲಾದಕುಮಾರ ಸಭಾಮಂಟಪದಲ್ಲಿ ಬೆಳಗಾವಿ ಸಾಹಿತ್ಯೋತ್ಸವ ಹಿ 2025 ಒಂದು ದಿನದ ಕಾರ‌್ಯಕ್ರಮ ಜರುಗಿತು. ಕಾರ‌್ಯಕ್ರಮವನ್ನು ಲೇಖಕಿ ಡಾ.ಗುರುದೇವಿ ಹುಲೆಪ್ಪನವರಮಠ ಅವರ ‘ರವಿವಾರಾಯನಮಃ’ ಲಲಿತ ಪ್ರಬಂಧ ಕೃತಿ ಬಿಡುಗಡೆಯೊಂದಿಗೆ ಕಾರ‌್ಯಕ್ರಮವನ್ನು ಉದ್ಘಾಟಿಸಿದ ಡಾ. ರಾಘವೇಂದ್ರ ಪಾಟೀಲ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು. 

ಮುಂದೆ ಮಾತನಾಡುತ್ತ ಡಾ. ರಾಘವೇಂದ್ರ ಅವರು ಸಂಗೀತ, ಸಾಹಿತ್ಯ, ಉಪನ್ಯಾಸದಿಂದ ಕೂಡಿದ ಸಾಹಿತ್ಯೋತ್ಸವ 2025 ನಮ್ಮ ಹೃದಯದಲ್ಲಿರುವ ಕಲ್ಮಶಗಳನ್ನು ತೆಗೆದು ಮನುಷ್ಯನನ್ನಾಗಿಸುವ ಕಾರ‌್ಯವನ್ನು ಮಾಡುತ್ತಲಿದೆ ಎಂದು ಅವರು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಅನುವಾದಕ ಡಾ. ಚಂದ್ರಕಾಂತ ಪೋಕಳೆಯವರು ಮಾತನಾಡಿ ಮರಾಠಿ ಭಾಷಿಕರಲ್ಲಿ ನಡೆಯುವಂತೆ ಕನ್ನಡದಲ್ಲಿ ಸಮ್ಮೇಳನಗಳು ನಡೆಯುತ್ತಿಲ್ಲ. ಅವರಲ್ಲಿರುವಂತಹ ಸಹಕಾರವು ಇಲ್ಲಿ ಇಲ್ಲ. ಭಾಷಾ ಉತ್ಸವಗಳಲ್ಲಿ ಊರಿನ ಎಲ್ಲ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇಲ್ಲಿ ಸಾಹಿತ್ಯಿಕ ಉತ್ಸವಗಳು ಕೇವಲ ಸಾಹಿತಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು. 

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಹಿತ್ಯೋತ್ಸವ -2025ದ ಸಂಚಾಲಕ ಶೀರೀಷ ಜೋಶಿಯವರು ಸಾಹಿತ್ಯೋತ್ಸವ-2025 ನಮ್ಮ ಮೊದಲ ಕಾರ‌್ಯಕ್ರಮವಾಗಿದ್ದು ಇದರಲ್ಲಿ ಸಂಗೀತ, ಸಾಹಿತ್ಯ, ನಾಟಕ ಹೀಗ ಎಲ್ಲವನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದೇವೆ. ಈ ಉತ್ಸವವು ಪ್ರತಿವರ್ಷವೂ ಜರುಗಲಿದ್ದು ಇದರ ಸದುಪಯೋಗವನ್ನು ಎಲ್ಲ ಬರೆಹಗಾರರು, ಸಾಹಿತ್ಯ ವಿದ್ಯಾರ್ಥಿಗಳು ಪಡೆಯಬೇಕೆಂದು ಕೇಳಿಕೊಂಡರು. 

ಶಾಸ್ತ್ರೀಯ ಸಂಗೀತ, ಬೆಳಗಾವಿ ಜಿಲ್ಲೆಯ ಕಾವ್ಯ ಪರಂಪರೆ, ಮಾಧ್ಯಮಗಳ ಸಾಂಸ್ಕೃತಿಕ ಹೊಣೆ, ನಾಕುತಂತಿಗೆ ಸುವರ್ಣ ಸಂಭ್ರಮ, ಸಾಹಿತಿಗಳ ಸಂಗ ಮೋಜಿನ ಪ್ರಸಂಗ, ವರ್ತಮಾನ ರಂಗಭೂಮಿ, ನಾನು ಮತ್ತು ನನ್ನ ಪುಸ್ತಕ, ಕುವೆಂಪು ಕಾದಂಬರಿಗಳು ಗೋಷ್ಠಿಗಳು ಜರುಗಿದವು. ಡಾ.ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ಶಾಸ್ತ್ರಿಯ ಸಂಗೀತ ಜರುಗಿತು. ತಬಲಾ ನಾರಾಯಣ ಗಣಾಚಾರಿ, ಹಾರ್ಮೋನಿಯಂ ಯೋಗೇಶ ರಾಮದಾಸ ಸಾಥ ನೀಡಿದರು. 

ಒಂದು ದಿನದ ಈ ಕಾರ‌್ಯಕ್ರಮದಲ್ಲಿ ಡಾ. ಬಸವರಾಜ ಜಗಜಂಪಿ, ಪ್ರೊ. ಎಂ. ಎಸ್‌. ಇಂಚಲ, ರಘು ಕಮ್ಮಾರ, ಪ್ರಕಾಶ ಗರುಡ, ಸಂಕೇತ ಪಾಟೀಲ, ಡಾ. ರಾಜಶೇಖರ ಎಚ್‌. ಬಿ., ಡಾ. ಗುರುಪಾದ ಮರಿಗುದ್ದಿ, ಬಿ. ಎಸ್‌. ಗವಿಮಠ, ಜ್ಯೋತಿ ಬದಾಮಿ, ಸಯ್ಯದ ಎನ್ ಆರ್‌. ಡಾ. ಸರಜು ಕಾಟ್ಕರ್, ಡಾ. ಶ್ಯಾಮಸುಂದರ ಬಿದರಕುಂದಿ, ರಮೇಶ ಮಿರ್ಜಿ, ನಿರಜಾ ಗಣಾಚಾರಿ, ರಮೇಶ ಜಂಗಲ, ಡಾ. ಎನ್‌. ಎಸ್‌. ಶ್ರೀಧರಮೂರ್ತಿ, ಸುಮಾ ಕಿತ್ತೂರ, ಆಶಾ ಯಮಕನಮರ್ಡಿ, ಶ್ವೇತಾ ನರಗುಂದ, ಶೈಲಜಾ ಭಿಂಗೆ, ಡಾ. ರಾಮಕೃಷ್ಣ ಮರಾಠೆ, ಎನ್‌. ಬಿ. ದೇಶಪಾಂಡೆ, ಬಂಡೋ ಕುಲಕರ್ಣಿ, ಬಿ. ಕೆ. ಕುಲಕರ್ಣಿ, ಡಾ. ಪಿ.ಜಿ. ಕೆಂಪಣ್ಣವರ, ಶೈಲಜಾ ಭಿಂಗೆ, ಜಯಶೀಲಾ ಬ್ಯಾಕೋಡ, ಎಂ. ಕೆ. ಹೆಗಡೆ, ಡಾ. ಶ್ರೀಧರ ಹುಕ್ಕೇರಿ, ಎಚ್, ಎಸ್, ದೇಶಪಾಂಡೆ, ಜಿ.ಎಸ್‌. ಸೋನಾರ, ತಾನಾಜಿ, ಗುಂಡೇನಟ್ಟಿ ಮಧುಕರ, ರಾಜಕುಮಾರ ಕುಂಬಾರ, ದೇವು ಪತ್ತಾರ, ದೀಪಿಕಾ ಚಾಟೆ, ಶ್ರದ್ಧಾ ಪಾಟೀಲ ಬೇರೆ ಬೇರೆ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.  ಭಾರತಿ ವಡವಿ, ಚಿದಂಬರ ಮುನವಳ್ಳಿ, ಉಪಸ್ಥಿತರಿದ್ದರು. ರಾಗರಾಗಿಣಿ ತಂಡದವರ ಪ್ರಾರ್ಥನೆಯೊಂದಿಗೆ ಕಾರ‌್ಯಕ್ರಮ ಪ್ರಾರಂಭವಾಯಿತು. ಎಂ. ಬಿ. ಹೊಸಳ್ಳಿ ನಿರೂಪಿಸಿದರು.