ಸಾಹಿತಿ ಪೂಜಾರಿ ರಾಷ್ಟ್ರ ಶಿಕ್ಷಕ ಪುರಷ್ಕೃತರಾಗಿ ಇತಿಹಾಸ ಸೃಷ್ಠಿಸಿದ್ದರು: ಮಯೂರ
Literary scholar Pujari created history by becoming a recipient of the National Teacher Award: Mayur
ಸಿಂದಗಿ 04: ಮಕ್ಕಳ ಸಾಹಿತಿ ಹ.ಮ.ಪೂಜಾರಿ ಅವರು ಶಿಕ್ಷಕ ವೃತ್ತಿ ಮಾಡುವ ಮುಖೇನ ರಾಷ್ಟ್ರ ಶಿಕ್ಷಕ ಪುರಷ್ಕೃತರಾಗಿ ಸಿಂದಗಿ ನಗರದಲ್ಲಿ ಇತಿಹಾಸ ಸೃಷ್ಠಿಸಿದ್ದರು. ಅಲ್ಲದೆ ಮಕ್ಕಳ ಪ್ರೇರಿತ ಕಥೆ, ಕವನಗಳ ಮೂಲಕ ಪ್ರೇರಣೆಯಾಗಿದ್ದಾರೆ ಅದರ ಹಿನ್ನಲೆಯನ್ನು ಗುರುತಿಸಿ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನಗರವನ್ನು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಮುಡಿಗೆರಿಸಿದಂತಾಗಿದೆ ಇವರಿಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಂತಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಸಿ. ಮಯೂರ ಶುಭ ಕೋರಿದರು.
ಪಟ್ಟಣದ ಹ.ಮ.ಪೂಜಾರ ಅವರ ನಿವಾಸದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡ ಮಕ್ಕಳ ಹಿರಿಯ ಸಾಹಿತಿ ಹ.ಮ. ಪೂಜಾರ ದಂಪತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂದಗಿ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ಈ ಬಾರಿ ಸಾಹಿತ್ಯ ಕ್ಷೇತ್ರದಲ್ಲಿ ಕರ್ನಾಟಕ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಮಕ್ಕಳ ಹಿರಿಯ ಸಾಹಿತಿಗಳಾದ ಹ.ಮ.ಪೂಜಾರ ಅವರಿಗೆ ನೀಡಿ ಗೌರವಿಸಿದ್ದು ತಾಲೂಕಿಗೆ ಹೆಮ್ಮೆ ತಂದಿದೆ. ಅವರ ಸಾಧನೆಯನ್ನು ಪರಿಗಣಿಸಿ ಸರಕಾರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಸಂತಸ ತಂದಿದೆ. ಇನ್ನು ಹೆಚ್ಚೆಚ್ಚು ಪ್ರಶಸ್ತಿಗಳು ಅವರಿಗೆ ಲಭಿಸಲಿ ಎಂದು ಹೇಳಿದರು.
ಈ ವೇಳೆ ಸನ್ಮಾನವನ್ನು ಸ್ವೀಕರಿಸಿದ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವುದು ಬಹಳ ಅವಶ್ಯಕತೆಯಿದೆ. ಮಕ್ಕಳ ಮನಸ್ಸಿಗೆ ಮುದ ನೀಡಿ ಅವರ ಜ್ಞಾನಾಭಿವೃದ್ಧಿಗೆ ಪೂರಕವಾಗಿರಬೇಕು ಅಂದಾಗ ಮಾತ್ರ ಅದು ಮಕ್ಕಳ ಸಾಹಿತ್ಯವಾಗಲು ಸಾಧ್ಯ. ಮುಂಬರುವ ದಿನಮಾನಗಳಲ್ಲಿ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಹದಾಸೆ ನನ್ನದಾಗಿದ್ದು, ಸಾಹಿತ್ಯ ಪರಿಷತ್ ಮತ್ತು ಸಾಹಿತ್ಯಾಸಕ್ತರ ಸಹಕಾರ ನನಗಿರಲಿ ಎಂದರು.
ಸನ್ಮಾನ ಸಮಾರಂಭದಲ್ಲಿ ಆನಂದ ಶಾಬಾದಿ, ರಾಜು ನರಗೋದಿ, ಶರಣಬಸವ ಲಂಗೋಟಿ, ಸಂತೋಷ ಮಣಗಿರಿ, ಬಸವರಾಜ ಅಗಸರ, ಸದ್ದಾಂ ಆಲಗೂರ, ನಾಗೇಶ ತಳವಾರ, ಸಂಗಮೇಶ ಡಿಗ್ಗಿ, ಆರೀಫ್ ಅಂತರಗಂಗಿ, ಜೈಭೀಮ ತಳಕೇರಿ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಎಸ್.ಎಂ.ಮಸಳಿ, ಶಾಂತು ರಾಣಾಗೋಳ, ಅನಸೂಯಾ ಪರಗೊಂಡ, ಚಂದ್ರಕಾಂತ ಸಿಂಗೆ, ಎಂ.ಆರ್.ಡೋಣಿ, ಶ್ಯಾಮಲಾ ಮಂದೇವಾಲಿ, ವಿಜಯಕುಮಾರ ಹೂಗಾರ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 