ಪುರಾಣ,ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ: ತಡವಲಗಾ

ಪುರಾಣ,ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ: ತಡವಲಗಾ Listening to myths and discourses brings peace to the mind: Tadavalaga

                ದೇವರಹಿಪ್ಪರಗಿ   09: ಪುರಾಣ,ಪ್ರವಚನಗಳು ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತವೆ.ಆದ್ದರಿಂದ ಸಿದ್ಧಾರೂಡರ ಜೀವನ ಚರಿತ್ರೆ ಅವರ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶ್ರಿ?ಗಳು ಹೇಳಿದರು.ಪಟ್ಟಣದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರರ 13ನೇ ವರ್ಷದ ಕಾರ್ತಿಕೋತ್ಸವದ ಪ್ರಯುಕ್ತ ಸೋಮವಾರದಂದು ಸುಮಾರು 21 ದಿನಗಳ ಕಾಲ ಶ್ರೀ ಸಿದ್ಧಾರೂಢ ಸ್ವಾಮಿಗಳ ಪುರಾಣ ಮಂಗಳೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

                 ಸಮಾರಂಭದ ಸಾನಿಧ್ಯವನ್ನು ಸ್ಥಳೀಯ ಜಡಿ ಮಠದ ಶ್ರೀ ಷ.ಬ್ರ ಜಡಿ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ಪರದೇಶಿ ಮಠದ ಪ.ಪೂ ಶ್ರೀ ಶಿವಯೋಗಿ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ,“ಮಹಾಪುರುಷರ, ಶರಣರ, ಸಂತರ ಬದುಕು ನಮಗೆ ಮಾದರಿಯಾಗಬೇಕು. ಪ್ರತಿಯೊಬ್ಬರೂ ತಮ್ಮ ಅಂತರಾತ್ಮದ ಭಾವ ಶುದ್ಧವಾಗಿಟ್ಟುಕೊಳ್ಳಬೇಕು. ಪುರಾಣ ಪ್ರವಚನಗಳನ್ನು ಕೇವಲ ಆಲಿಸುವುದಕ್ಕೆ ಮಾತ್ರ ಸೀಮಿತಗೊಳಿಸದೇ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  

                 ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡಬೇಕು,” ಎಂದರು.ಐಪುರಾಣ ಪ್ರವಚನವನ್ನು ವಡಗೇರಿಯ ವೇ. ನಾಗಯ್ಯ ಶಾಸ್ತ್ರಿಗಳು, ಸಂಗೀತ ಸೇವೆ ವೇ. ಪಡದಳ್ಳಿಯ ಸಿದ್ದಯ್ಯ ಹಿರೇಮಠ ಹಾಗೂ ತಬಲಾ ಸೇವೆಯನ್ನು ಸುರಪುರದ ರಾಜಶೇಖರ್ ಗೆಜ್ಜೆ ನೆರವೇರಿಸಿದರು.ಸಮಾರಂಭದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರುಗಳಾದ ಬಸಣ್ಣ ಕರಭಂಟನಾಳ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪಿ.ಎಂ. ಬೆನಕನಹಳ್ಳಿ, ಸಂಜೀವ ಅವಟಿ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಅವಿನಾಶ ತಳಕೇರಿ, ಓಂಪ್ರಸನ್ನ ಮಿಂಚನಾಳ ಅವರನ್ನು ಶ್ರೀಗಳು, ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.

                  ಮಂಗಳವಾರದಂದು ಜಾತ್ರಾ ಮಹೋತ್ಸವದ ಪ್ರಯುಕ್ತ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಹಾಗೂ 20 ಜನ ಪೂರ್ವಂತರ ಶಸ್ತ್ರಾಭ್ಯಾಸ ನೋಡುಗರ ಗಮನ ಸೆಳೆಯಿತು, ಸುಮಂಗಲಿಯರಿಂದ ಕುಂಭಾಭಿಷೇಕ ಹಾಗೂ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಚೆನ್ನವೀರ ಕುದರಿ, ಪಂಚಾಕ್ಷರಿ ಮಿಂಚನಾಳ, ಬಾಬುಗೌಡ ಪಾಟೀಲ, ಯಲಗೂರೇಶ ದೇವೂರ, ಪ್ರಭು ಬುದ್ನಿ, ರಮೇಶ ಮಾಶಾನವರ, ತೇಜಪ್ಪ ಕಕ್ಕಳಮೇಲಿ, ಶಿವಯ್ಯ ವಸ್ತ್ರದ, ವಿನೋದ ನಾಶಿಮಠ, ಅಪ್ಪೊಜಿ ದೇಸಾಯಿ, ಶಿವನಗೌಡ ಯರನಾಳ, ಅಪ್ಪು ಬಿರಾದಾರ, ಮಾನಕಪ್ಪ ದುತ್ತರಗಾಂವಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.