ಸಂಗೀತ ಕೇಳುವುದರಿಂದ ನಮ್ಮ ಮನಸ್ಸಿಗೆ ಪ್ರಫುಲ್ಲತೆ ನೀಡುತ್ತದೆ: ನಯನಾ ಶೇಟ್
Listening to music enriches our minds: Nayana Shet
ಧಾರವಾಡ 26: ಭಾರತೀಯ ಸಂಗೀತ, ನೃತ್ಯ ಕಲೆಯು ಕೇವಲ ಮನರಂಜನೆಗಾಗಿ ಅಲ್ಲ, ಇದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿವೆ. ಭಜನ್, ಕೀರ್ತನೆ, ದಾಸವಾಣಿ, ವಚನ ಸಂಗೀತ ಕೇಳುವುದರಿಂದ ನಮ್ಮ ಮನಸ್ಸಿಗೆ ಪ್ರಫುಲ್ಲತೆಯನ್ನು ನೀಡುತ್ತದೆ ಎಂದು ಸಮಾಜ ಸೇವಕಿ ನಯನಾ ಶೇಟ್ ಹೇಳಿದರು.
ನಗರದ ಯಾಲಕ್ಕಿಶೆಟ್ಟರ ಕಾಲೋನಿಯ ಶಂಕರಮಠದ ಸಭಾಂಗಣದಲ್ಲಿ ಧಾರವಾಡದ ದರ್ಬಾರ ಸಂಗೀತ ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೆ ನಿಮಿತ್ತ ಏರಿ್ಡಸಿದ್ದ ಸಂಗೀತೋತ್ಸವವನ್ನು ಉದ್ಘಾಟಿಸಿದ ನಯನಾ ಶೇಟ್ ಅವರು ಮಾತನಾಡುತ್ತ ಕಳೆದ 11 ವರ್ಷಗಳಿಂದ ಮಕ್ಕಳಲ್ಲಿ ಸಂಗೀತದ ಮೂಲಕ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪಿ.ಪಿ.ಜೆ. ಸಂಗೀತ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯೆ ಡಾ.ಸುಮಿತ್ರಾ ಕಾಡದೇವರಮಠ ಮಾತನಾಡುತ್ತ ಸಂಗೀತ ಕೇಳುವುದು ಬಹಳ ಸರಳ, ಆದರೆ ಸಂಗೀತ ಕಲಿಸುವುದು ಬಹಳ ಕಠೀಣವಾದ ವಿದ್ಯೆಯಾಗಿದೆ. ಮಕ್ಕಳಲ್ಲಿ ಸಂಗೀತದ ಅಭಿರುಚಿ ಹೆಚ್ಚಿಸಿ, ಅವರನ್ನು ರಾಗ, ತಾಳ, ಲಯಬದ್ಧವಾಗಿ, ದೃಢ ಮನಸ್ಸಿನಿಂದ ಹಾಡುವಂತೆ ಮಾಡುವುದೇ ನಿಜಯವಾದ ಸಂಗೀತ ಗುರುವಿನ ಕಾರ್ಯವಾಗಿದೆ. ಆ ಕಾರ್ಯವನ್ನು ಬಸವರಾಜ ಹೂಗಾರ ಬಹಳ ನಿಷ್ಠೆಯಿಂದ ಮಾಡುತ್ತಿದ್ದಾರೆ. ಯಾವುದೇ ಒಂದು ಸಂಗೀತದ ಕಚೇರಿಗಳು ಆದಾಗ, ಆ ಸಂಗೀತದ ಬಗ್ಗೆ ಉನ್ನತಮಟ್ಟದ ವಿಮರ್ಶಾತ್ಮಕ ಲೇಖನಗಳು ಪ್ರಕಟವಾಗುವ ಕಾರ್ಯವಾಗಬೇಕಿದೆ ಎಂದರು.
ರಂಗಭೂಮಿ ಕಲಾವಿದ ವೀರಣ್ಣ ಪತ್ತಾರ ಮಾತನಾಡುತ್ತ ಗುರುವಿನಿಂದ ಪಡೆದ ಸಂಗೀತವನ್ನು ಮುಂದಿನ ಪರಂಪರೆಯ ವಿದ್ಯಾರ್ಥಿಗಳಗೆ ಧಾರೆ ಎರೆಯುವುದೇ ನಿಜವಾದ ಗುರುವಿಗೆ ನೀಡುವ ಗುರುದಕ್ಷಿಣೆಯಾಗಿದೆ. ವಿದ್ಯಾರ್ಥಿಗಳು ತಾಳ್ಮೆಯಿಂದ, ಏಕಾಗ್ರತೆಯಿಂದ ಸಂಗೀತ ಕಲಿತಲ್ಲಿ ಇವರಲ್ಲಿ ನಾವು ಒಬ್ಬರು ಡಾ.ಮಲ್ಲಿಕಾರ್ಜುನ ಮನಸೂರರನ್ನ, ಡಾ.ಗಂಗೂಬಾಯಿ ಹಾನಗಲ್‌ರನ್ನ ಕಾಣಬಹುದಾಗಿದೆ ಎಂದರು.
ಸಾಂಸ್ಕೃತಿಕ ಸಂಘಟಕರಾದ ಪ್ರಕಾಶ ಬಾಳಿಕಾಯಿ ಮಾತನಾಡುತ್ತ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪರಂಪರೆಯ ಸಂಗೀತದ ಘಮಲು ದೇಶ-ವಿದೇಶಗಳಲ್ಲೂ ಪರಸರಿಸಿರುವುದಷ್ಟೇ ಅಲ್ಲ ವಿಶ್ವದಲ್ಲೇ ಬಹುದೊಡ್ಡ ಪರಂಪರೆಯಾಗಿರುವುದು ನಮ್ಮ ನಾಡಿನ ಹೆಮ್ಮೆ ಎಂದರು.
ಸುಚೇತಾ ಹೂಗಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಾವು ಮಕ್ಕಳಿಗೆ ಮೊಬೈಲ್ ಸಂಸ್ಕೃತಿಯಿಂದ ಹೊರತಂದು, ನಮ್ಮ ಕಲೆ, ಸಾಹಿತ್ಯ, ಸಂಗೀತ, ಪುಸ್ತಕದ ಓದಿನತ್ತ ಪ್ರೆರೇಪಿಸಬೇಕಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ಗೋಪಾಲ ಉಣಕಲ್ ಮತ್ತು ಪ್ರಕಾಶ ಹೂಗಾರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಹೂಗಾರ ಸ್ವಾಗತಿಸಿದರು. ಸ್ವೇತಾ ಹೂಗಾರ ವಂದಿಸಿದರು.
ದರ್ಬಾರ ಸಂಗೀತ ಕಲಾ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ರಾಗಗಳಲ್ಲಿ ಗಾಯನ, ಗುರುಪ್ರಸಾದ ಛಬ್ಬಿ ವಚನ ಗಾಯನ, ಸಾತ್ವಿಕ ಮಹಾಮನೆ ವಯೋಲಿನ್, ಗಾಮಣ್ಣ ಹೂಲಿಕಟ್ಟಿ ಶಿಷ್ಯರು ದ್ವಂದ್ವ ಸಿತಾರ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಡಾ.ರಾಜಕುಮಾರ ಮುಡಬಿ, ಡಾ.ನಾಗಲಿಂಗ ಮುರಗಿ, ಜಗದೀಶ ಕಾಲೇಬಾ, ಅನಿರುದ್ದ ಭುಜಂಗ ಹಾಗೂ ಸಂವಾದಿನಿಯಲ್ಲಿ ವಿನೋದ ಪಾಟೀಲ ಹಾಗೂ ಅಭಿಷೇಕ ಕಮ್ಮಾರ ಸಾಥ್ ಸಂಗತ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 