ಮುಂದಿನ ಮೂರು ತಿಂಗಳು ಲಿಯೊನೆಲ್ ಮೆಸ್ಸಿ ಅಮಾನತು

ಅಸನ್ಷನ್, ಆ 3  ಬ್ರೆಜಿಲ್ನಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ ಕೊಪಾ ಅಮೆರಿಕಾ ಫುಟ್ಬಾಲ್ ಟೂರ್ನಿಯ ಬಗ್ಗೆ ಭ್ರಷ್ಟಚಾರದ ಆರೋಪ ಮಾಡಿದ್ದ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರನ್ನು ಮುಂದಿನ ಮೂರು ತಿಂಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ. 

ದಕ್ಷಿಣ ಅಮೆರಿಕಾ ಫುಟ್ಬಾಲ್ ಅಸೋಸಿಯೇಷನ್ ಈ ಕುರಿತು ಶುಕ್ರವಾರ ಸ್ಪಷ್ಟಪಡಿಸಿದ್ದು, ಜುಲೈನಲ್ಲಿ ನಡೆದಿದ್ದ ಕೊಪಾ ಅಮೆರಿಕಾ ಮೂರನೇ ಸ್ಥಾನಕ್ಕೆ ನಡೆದಿದ್ದ ಅರ್ಜೆಂಟೀನಾ ಮತ್ತು ಚಿಲಿ ವಿರುದ್ಧ ಪಂದ್ಯದ ನಂತರ ಮೆಸ್ಸಿ ಈ ಕುರಿತು ಆರೋಪ ಮಾಡಿದ್ದರು. ಈ ಪಂದ್ಯದಲ್ಲಿ 2-1 ಅಂತರದಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸಿತ್ತು.  

ಬಾರ್ಸ್ಲೋನಾ ಫಾವರ್ಡ್ ಆಟಗಾರನಿಗೆ 50, 000 ಯುಎಸ್ ಡಾಲರ್ ದಂಡ ವಿಧಿಸುವ ಜತೆಗೆ ಮೂರು ತಿಂಗಳ ಕಾಲ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ಅಮಾನತುಗೊಳಿಸಲಾಗಿದೆ. 

ಪ್ರಸಕ್ತ ವರ್ಷದ ಮುಂದಿನ ನಾಲ್ಕು ಸೌಹಾರ್ಧಯುತ ಪಂದ್ಯಗಳಿಗೆ ಮೆಸ್ಸಿ ಅವರನ್ನು ನಿಷೇಧ ಹೇರಲಾಗಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಮೆಸ್ಸಿ ಹಾಗೂ ಅರ್ಜೆಂಟೀನಾ ಪ್ರಯತ್ನ ನಡೆಸುತ್ತಿದೆ. 

ಅಮಾನತುಗೊಂಡಿರುವ 32ರ ಪ್ರಾಯದ ಮೆಸ್ಸಿ ಸೆಪ್ಟಂಬರ್ನಲ್ಲಿ ನಡೆಯುವ ಚಿಲಿ ಹಾಗೂ ಮೆಕ್ಸಿಕೋ ವಿರುದ್ಧ ಕಣಕ್ಕೆ ಇಳಿಯುತ್ತಿಲ್ಲ. ನಂತರ, ಅಕ್ಟೋಬರ್ನಲ್ಲಿ ಜರ್ಮನಿ ವಿರುದ್ಧ ಮತ್ತೇರಡು ಪಂದ್ಯಗಳಿಗೂ ಮೆಸ್ಸಿ ಅಲಭ್ಯರಾಗಲಿದ್ದಾರೆ.  

 ಬಾರ್ಸ್ಲೋನಾ ಮುಂಚೂಣಿ ಆಟಗಾರ ಮುಂದಿನ ಮಾರ್ಚ್ನ್ಲ್ಲಿ ಫಿಫಾ ವಿಶ್ವಕಪ್ನ ದಕ್ಷಿಣ ಅಮೆರಿಕಾ ಅರ್ಹತಾ ಸುತ್ತಿನ ಚಿಲಿ ವಿರುದ್ಧ ಮೊದಲನೇ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಚಿಲಿ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ರೆಡ್ ಪಡೆದಿದ್ದರು.