ಭಾಷಾ ವಿಜ್ಞಾನಿ ಡಾ. ಸವದತ್ತಿಮಠ ಹಾಗೂ ಡಾ. ಜಯಲಲಿತರಿಗೆ ವಿದ್ಯಾಶಂಕರ ಪ್ರಶಸ್ತಿ ಪ್ರದಾನ
Linguist Dr. Savadatti Math and Dr. Jayalalithaa awarded Vidyashankar Award
ಧಾರವಾಡ : ಎಲ್ಲೆಡೆ ಇಂದು ಶಾಸ್ತ್ರ ವಿಷಯ ಸಂಶೋಧಕರ ಕೊರತೆ ಎದ್ದುಕಾಣುತ್ತಿದ್ದು, ಕನ್ನಡದ ವಿದ್ವತ್ ಪರಂಪರೆ ಕ್ಷೀಣಿಸುತ್ತಿದೆ ಎಂದು ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಡಿ.ವ್ಹಿ.ಪರಮಶಿವಮೂರ್ತಿ ಹೇಳಿದರು. ಅವರು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಡಾ.ಎಸ್.ವಿದ್ಯಾಂಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ನಗರದ ಹಿರಿಯ ಭಾಷಾ ವಿಜ್ಞಾನಿ, ವಿದ್ವಾಂಸ ಡಾ.ಸಂಗಮೇಶ ಸವದತ್ತಿಮಠ ಅವರಿಗೆ 2025ನೆಯ ಸಾಲಿನ ವಿದ್ಯಾಶಂಕರ ಪ್ರಶಸ್ತಿ ಮತ್ತು ಕುಪ್ಪಂ ದ್ರಾವಿಡ ವಿ.ವಿ.ಯ ಡಾ.ಜಯಲಲಿತ ಅವರಿಗೆ ವಿದ್ಯಾಶಂಕರ ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು. ವಚನ ವಾಙ್ಮಯದಲ್ಲಿ ಡಾ.ಸಂಗಮೇಶ ಸವದತ್ತಿಮಠ ಅವರು ಬರೆದಿರುವ ‘ವರ್ಣನಾತ್ಮಕ ವಚನ ಪದಕೋಶ’ ಬಹಳ ಅಪರೂಪದ ಕೃತಿಯಾಗಿ ಎಲ್ಲರ ಗಮನಸೆಳೆದಿದೆ ಎಂದರು. ಶ್ರೀನಿಡುಮಾಮಿಡಿ ಗೂಳೂರು ಸಂಸ್ಥಾನಮಠದ ಶ್ರೀವೀರಭದ್ರ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿ.ವಿ. ಪ್ರಾಧ್ಯಾಪಕ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ವಿಶ್ರಾಂತ ಪ್ರಾಚಾರ್ಯ ಡಾ. ಸಿ. ಶಿವಕುಮಾರಸ್ವಾಮಿ, ಖ್ಯಾತ ಅನುವಾದಕಿ ಡಾ.ಮಲರಿ್ವಳಿ, ವಿದ್ಯಾಶಂಕರರ ಮಗಳು ಪ್ರಿಯದರ್ಶಿನಿ ಸೇರಿದಂತೆ ಡಾ. ಎಸ್.ವಿದ್ಯಾಂಶಂಕರ ಸಾಂಸ್ಕೃತಿಕ ಪ್ರತಿಷ್ಠಾನದ ವಿವಿಧ ಪದಾಧಿಕಾರಿಗಳು ಇದ್ದರು. ಪ್ರಶಸ್ತಿಯು 30 ಸಾವಿರ ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರ-ಫಲಕವನ್ನು ಒಳಗೊಂಡಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 