ಕರಾವಳಿಯಲ್ಲಿ ಜನ ಜೀವನ ಅಸ್ತವ್ಯಸ್ತ : ಅಬ್ಬರಿಸಿದ ವರುಣ: ಮೂರು ಮನೆ ಸಂಪೂರ್ಣ ಹಾನಿ
Life on the coast disrupted: Storm surge: Three houses completely damaged
ಕಾರವಾರ, 17 ; ಉತ್ತರ ಕನ್ನಡ ಕರಾವಳಿಯಲ್ಲಿ ಗುರುವಾರ ಬೆಳಗಿನ ಜಾವ ಮೂರು ಗಂಟೆಯಿಂದ ಬೆಳಿಗ್ಗೆ ಎಂಟು ಗಂಟೆತನಕ ಭಾರೀ ಮಳೆ ಸುರಿಯಿತು. ಕಾರವಾರ ಬಸ್ ಡಿಪೋ ಸೇರಿದಂತೆ ತಗ್ಗು ಪ್ರದೇಶಗಳಾದ ನ್ಯೂ ಕೆಎಚ್ ಬಿ ಕಾಲೂನಿ ಜ್ಞಾನೇಶ್ವರಿ ವಿದ್ಯಾಮಂದಿರ, ಗುನಗಿವಾಡದ ಕೆಲಭಾಗ, ಸಂಕ್ರೀವಾಡ, ದೇವಳಿವಾಡ, ಬೈತಖೋಲ್, ಶೆಜವಾಡದ ಕೆಲ ಪ್ರದೇಶ ಜಲಾವೃತವಾಗಿದ್ದವು.
ತಗ್ಗು ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿತು. ಭಟ್ಕಳದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಗ್ರಾಮಾಂತರ ಭಾಗದಲ್ಲಿ ಮೂರು ಮನೆಗಳು ಸಂಪೂರ್ಣ ಕುಸಿದಿವೆ. ಆದರೆ ಯಾವುದೇ ಜೀವ ಹಾನಿಯಾಗಿಲ್ಲ. ಭಟ್ಕಳ, ಕಾರವಾರ, ಹೊನ್ನಾವರ, ಕುಮಟಾದಲ್ಲಿ ಹೆಚ್ಚು ಮಳೆಯಾದರೆ, ಅಂಕೋಲಾದಲ್ಲಿ ಸಾಧಾರಣ ಮಳೆಯಾಗಿದೆ. ಘಟ್ಟದ ಮೇಲೆ ಹಿತಕರ ಮಳೆಯಾಗಿದೆ. ಸಂಪ್ರದಾಯಿಕ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಯಾಂತ್ರಿಕ ಮೀನುಗಾರಿಕೆಗೆ ಅಗಸ್ಟ 15ರತನಕ ನಿಬಂರ್ಧ ಹೇರಲಾಗಿದೆ. ಆಗಾಗ 40-50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರದಂಡೆಗೆ ಯಾರು ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ.ಕದ್ರಾ ಕೊಡಸಳ್ಳಿ ಮಧ್ಯೆ ಕುಸಿದಿದ್ದ ಮಣ್ಣು ತೆರವು:ಕದ್ರಾ ಕೊಡಸಳ್ಳಿ ಮಧ್ಯೆ ಕುಸಿದಿದ್ದ ಗುಡ್ಡದ ಮಣ್ಣು ತೆರವು ಕಾರ್ಯವನ್ನು ಕೆಪಿಸಿ ಪ್ರಾರಂಭ ಮಾಡಿದೆ. ಈ ಕಾರ್ಯಕ್ಕೆ ಇನ್ನೊಂದು ದಿನ ಸಮಯ ತಗುಲಲಿದೆ. ಕೊಡಸಳ್ಳಿ ಅಣೆಕಟ್ಟಿಗೆ ಬೇಕಾಗುವ ಸಾಮಾಗ್ರಿಗಳನ್ನು ಮತ್ತು ಡಿಸೆಲ್ ಸಾಗಿಸಲು ರಸ್ತೆ ಇಲ್ಲದ ಕಾರಣ ವಿದ್ಯುತ್ ಉತ್ಪಾದನೆ ಗೆ ಅಡ್ಡಿಯಾಗಿತ್ತು. ಅತೀಯಾದ ಮಳೆಯಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಗುಡ್ಡ ಕುಸಿದಿತ್ತು. ಇದೀಗ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ಸಲಹೆ ಪಡೆದು ರಸ್ತೆಯ ಮೇಲೆ ಬಿದ್ದ ಮಣ್ಣು ತೆರವು ಕಾರ್ಯ ಪ್ರಾರಂಭವಾಗಿದೆ.
ಮಳೆ ವಿವರ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 35.4, ಮಿಮೀ, ಭಟ್ಕಳದಲ್ಲಿ 94.9, ಹಳಿಯಾಳ 4.2,ಹೊನ್ನಾವರ 60.6, ಕಾರವಾರ 59.8, ಕುಮಟಾ 47, ಮುಂಡಗೋಡ 4.5, ಸಿದ್ದಾಪುರ 20.4, ಶಿರಸಿ 14.1, ಸೂಪಾ 8.5, ಯಲ್ಲಾಪುರ 4.5, ದಾಂಡೇಲಿಯಲ್ಲಿ 5.9 ಮಿಲಿ ಮೀಟರ್ ಮಳೆ ಸುರಿದಿದೆ. ನಿನ್ನೆ ಸುರಿದ ಮಳೆಗೆ ಜಿಲ್ಲೆಯಲ್ಲಿ 3 ಮನೆಗಳು ಸಂಪೂರ್ಣ ಹಾನಿಯಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ........
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 