ಧಾರ್ಮಿಕ ಪರಂಪರೆಯಿಂದ ಜೀವನ ಸಾರ್ಥಕ

ಲೋಕದರ್ಶನವರದಿ

ಹಾವೇರಿ ೦೨: ಧಾಮರ್ಿಕತೆ ಹಾಗೂ ಧಾಮರ್ಿಕ ಪರಂಪರೆಗಳನ್ನಿಟ್ಟುಕೊಂಡು ಜೀವನವನ್ನು ಕಟ್ಟಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುವುದರೊಂದಿಗೆ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮಿಜಿ ಹೇಳಿದರು.

 ನಗರದ ಜರಸೂರು ಬಣ್ಣದಮಠದ ಮಲ್ಲಿಕಾಜರ್ುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವರುದ್ರ ಚನ್ನಮಲ್ಲಿಕಾಜರ್ುನ ಸ್ವಾಮಿಜಿಗಳ 9ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಧಮರ್ೋತ್ತೇಜಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮದ ಮೊದಲ ದಿನದ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಪ್ರಸಕ್ತ ಧಾಮರ್ಿಕ ಕಾರ್ಯಗಳು ಜರುಗುವುದು ಅಪರೂಪ, ಧಾಮರ್ಿಕ ಕಾರ್ಯಗಳಲ್ಲಿ ನೀಡಲಾಗುವ ಸಂದೇಶಗಳನ್ನು ಮನವಿಟ್ಟು ಕೇಳುವುದರೊಂದಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಮುಂದಾಗುವುದು ಇನ್ನು ಅಪರೂಪವಾಗುತ್ತಿದೆ ಎಂದರು.

 ಇಂದಿನ ಯುವ ಜನಾಂಗ ಧಾಮರ್ಿಕ ಕಾರ್ಯಗಳಿಂದ ದೂರವಾಗುತ್ತಿರುವುದು ಕಂಡುಬರುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಜನಾಂಗಕ್ಕೆ ಧರ್ಮದ ಅರಿವೇ ಇರದೇ ಧರ್ಮ ಸಂಕಷ್ಟದಲ್ಲಿ ಸಿಲುಕುತ್ತದೆ, ಯುವ ಜನತೆಯೊಂದಿಗೆ ಮಕ್ಕಳನ್ನು ಧಾಮರ್ಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಬಹಳ ಅವಶ್ಯಕವಾಗಿದೆ ಎಂದು ತಿಳಿಸಿದರು.

  ಸಮ್ಮುಖ ವಹಿಸಿ ಮಾತನಾಡಿದ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ, ವಿಶ್ವದ ಅನೇಕ ರಾಷ್ಟ್ರಗಳು ವಿವಿಧ ಕ್ಷೇತ್ರಗಳಲ್ಲಿ ಮುಂದುವರೆದಿರಬಹುದು ಆದರೆ ಆ ದೇಶಗಳಲ್ಲಿ ಧಾಮರ್ಿಕತೆ ಕುಸಿತವನ್ನು ಕಂಡಿದ್ದರೆ ಭಾರತದಲ್ಲಿ ಮಾತ್ರ ಧಾಮರ್ಿಕತೆಯೊಂದಿಗೆ ಭವ್ಯ ಭಾರತ ನಿಮರ್ಾಣವಾಗುತ್ತಿದೆ ಎನ್ನುವುದು ಕಂಡುಬರುತ್ತಿದೆ ಎಂದು ತಿಳಿಸಿದರು.

   ಇಂದಿನ ತಾಂತ್ರಿಕ ಯುಗದಲ್ಲಿ ಆಥರ್ಿಕವಾಗಿ ಸದೃಢರಾದಂತೆ ಐಶಾರಾಮಿ ಜೀವನಕ್ಕೆ ಮಾರುಹೋಗಿ ಧಾಮರ್ಿಕ ಪರಂಪರೆ, ಸಂಸ್ಕೃತಿ, ಸಂಸ್ಕಾರ ಹಾಗೂ ಭಕ್ತಿಯನ್ನು ಮರೆಯುತ್ತಿದ್ದೇವೆ, ಉನ್ನತ ಜೀವನವನ್ನು ನಡೆಸುವುದರೊಂದಿಗೆ ಇವೆಲ್ಲವನ್ನು ಎಲ್ಲರೂ ಮತ್ತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಮುಂದಿನ ಜನಾಂಗಕ್ಕೂ ಕೊಡುಗೆ ಆಗಿ ನೀಡಬೇಕಾಗಿದೆ ಎಂದು ಹೇಳಿದರು.

  ಮಾತನಾಡಿದ ಕರ್ಜಗಿ ಗೌರಿಮಠ ಹಾಗೂ ನಗರದ ಗುರುಪಾದದೇವರಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿ, ಮಕ್ಕಳಿಗೆ ಆಸ್ತಿಯನ್ನು ಮಾಡದೇ ಅವರಿಗೆ ಉನ್ನತ ಶಿಕ್ಷಣ, ಧಾಮರ್ಿಕತೆ, ಸಂಸ್ಕೃತಿಯನ್ನು ಹಾಗೂ ಸಂಸ್ಕಾರ ನೀಡುವ ಮೂಲಕ ಅವರನ್ನೇ ಒಂದು ಆಸ್ತಿಯನ್ನಾಗಿ ಮಾಡಿರಿ ಎಂದರು.

 ಹತ್ತು ಭಾವಿಗೆ ಒಂದು ಕೆರೆ ಸಮಾನ, ಹತ್ತು ಕೆರೆಗಳಿಗೆ ಒಂದು ಸರೋವರ ಸಮಾನ, ಹತ್ತು ಸರೋವರಕ್ಕೆ ಒಬ್ಬ ಪುತ್ರ ಸಮಾನವಾದರೆ ಹತ್ತು ಪುತ್ರರಿಗೆ ಒಂದು ಮರ ಸಮಾನ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒದೊಂದು ಮರವನ್ನು ಬೆಳೆಸುವುದಕ್ಕೆ ಮುಂದಾಗುವಂತೆ ಕರೆ ನೀಡಿದರು.

 ಅತಿಥಿಗಳ ಪರವಾಗಿ ನಗರಸಭಾ ಸದಸ್ಯ ಮಲ್ಲಿಕಾಜರ್ುನ ಸಾತೇನಹಳ್ಳಿ ಮಾತನಾಡಿ, ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾಜರ್ುನ ಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು. 

     ವೇದಿಕೆಯಲ್ಲಿ ಮೂರು ದಿನಗಳ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಜಗದೀಶ ಕನವಳ್ಳಿ, ಉಪಾಧ್ಯಕ್ಷ ಶಿವಯೋಗಿ ಹುಲಿಕಂತಿಮಠ, ನಿಕಟಪೂರ್ವ ಅಧ್ಯಕ್ಷ ಮಹಲಿಂಗಸ್ವಾಮಿ ಹಿರೇಮಠ, ನಗರಸಭಾ ಸದಸ್ಯರಾದ ರೇಣುಕಾ ಪುತ್ರನ್, ಚೈತ್ರಾ ಹತ್ತಿ, ಚೌಡೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾ ಡಾವಣಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು, ಗಿರಿಜಾ ಸಾತೇನಹಳ್ಳಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರ್ವಹಿಸಿದರು.