ಧಾರ್ಮಿಕ ಕಾರ್ಯಗಳಿಂದ ಜೀವನ ಪರಿಶುದ್ಧವಾಗುತ್ತದೆ
Life becomes pure through religious activities.
ಧಾರ್ಮಿಕ ಕಾರ್ಯಗಳಿಂದ ಜೀವನ ಪರಿಶುದ್ಧವಾಗುತ್ತದೆ
ಲೋಕದರ್ಶನ ವರದಿ
ಹೂವಿನಹಡಗಲಿ 7: ಧಾರ್ಮಿಕ ಕಾರ್ಯಗಳಿಂದ ಜೀವನದಲ್ಲಿ ಶ್ರದ್ಧೆ, ಭಕ್ತಿ, ಹಾಗೂ ಪ್ರಾಮಾಣಿಕತೆ ಮೂಡುತ್ತದೆ, ಇದರಿಂದ ಜೀವನ ಪರಿಶುದ್ಧವಾಗಿ ಮಾನಸಿಕ ನೆಮ್ಮದಿ, ಸಿಗುತ್ತದೆ ಎಂದು ಸೋಗಿ ಪುರವರ್ಗ ಮಠದ ಅಭಿನವ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು ತಾಲೂಕಿನ ನವಲಿ ಗ್ರಾಮದ ಕೊಟ್ಟುರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಪುರ ಪ್ರವೇಶ ಧಾರ್ಮಿಕ ಭಕ್ತಿ ಹಿತಚಿಂತನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ನೌಕರರಾದ ಚಂದ್ರಶೇಖರಯ್ಯ ಹಾವೇರಿಮಠ ಮಾತನಾಡಿದರು. ಪತ್ರಕರ್ತ ದಯಾನಂದ ಎಂ ಸೇರಿದಂತೆ ನವಲಿ ಗ್ರಾಮದ ಸಮಸ್ತ ಭಕ್ತರು ಸೇರಿದಂತೆ ಇದ್ದರು . ಹೆಚ್ ಎಂ ಕೊಟ್ರಯ್ಯಸ್ವಾಮಿ ಪ್ರಾರ್ಥಿಸಿದರು. ಹಡಗಲಿ ಶರಣಯ್ಯ ಶಾಸ್ತ್ರೀಯಗಳು ವೇದಘೊಷ ಮಾಡಿದರು.ಬಸವಕಲಾ ಲೋಕ ಬಸಾಪುರ ದಾವಣಗೆರೆ ಇವರು ನಡೆಸಿದ ಜಾನಪದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 