ನಮ್ಮ ಪರಂಪರೆಯ ಆದರ್ಶಗಳ ಅಡಿಯಲ್ಲಿ ಬದುಕು ಕಟ್ಟಿಕೊಂಡಾಗ ಬದುಕಿ ಮೌಲ್ಯ ಬರುತ್ತದೆ

ನಮ್ಮ ಪರಂಪರೆಯ ಆದರ್ಶಗಳ ಅಡಿಯಲ್ಲಿ ಬದುಕು ಕಟ್ಟಿಕೊಂಡಾಗ ಬದುಕಿ ಮೌಲ್ಯ ಬರುತ್ತದೆ Life becomes meaningful when we build our lives around the ideals of our heritage.

ನಮ್ಮ ಪರಂಪರೆಯ ಆದರ್ಶಗಳ ಅಡಿಯಲ್ಲಿ ಬದುಕು ಕಟ್ಟಿಕೊಂಡಾಗ ಬದುಕಿ ಮೌಲ್ಯ ಬರುತ್ತದೆ 

  ವಿಜಯಪಯರ 10: ಯುವ ಜನತೆಯು ಕೇವಲ ಶಿಕ್ಷಣವನ್ನು ಕಲಿತ ಮಾತ್ರಕ್ಕೆ ಜ್ಞಾನಿಗಳಾಗುವುದಿಲ್ಲ. ಶಿಕ್ಷಣದ ಜೊತೆಯಲ್ಲಿ ನಮ್ಮ ದೇಶದ ಸಂಸ್ಕಾರ ಹಾಗೂ ಪರಂಪರೆಗಳನ್ನು ತಿಳಿದುಕೊಂಡು ಅವುಗಳ ಆದರ್ಶಗಳ ಅಡಿಯಲ್ಲಿ ಬದುಕು ಕಟ್ಟಿಕೊಂಡಾಗ ಮಾತ್ರ ಬದುಕಿಗೆ ಮೌಲ್ಯ ಬರುತ್ತದೆ ಎಂದು ಎಕ್ಸಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ಹೇಳಿದರು. 

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಾ ಬಂಧನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು; ನಮ್ಮ ಮನಸ್ಸುಗಳನ್ನು ಬೆಸೆಯುವುದಕ್ಕೆಂದೆ ನಮ್ಮ ಪೂರ್ವಜರು ಹಬ್ಬಗಳನ್ನು ಆರಂಭಿಸಿದರು. ಒಂದೊಂದು ಹಬ್ಬವೂ ಕೂಡ ಒಂದೊಂದು ಮೌಲ್ಯಗಳನ್ನು ಬಿತ್ತುತ್ತವೆ. ಆದರೆ ಅವುಗಳನ್ನು ಅರ್ಥ ಮಾಡಿಕೊಡುವ ಕೆಲಸಗಳು ಆಗಬೇಕಿದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಸಾಕಷ್ಟು ಹಬ್ಬಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಆ ಹಬ್ಬಗಳು ನಮ್ಮಲ್ಲಿ ಒಂದು ಹೊಸತನವನ್ನು ಹುಟ್ಟು ಹಾಕುತ್ತವೆ ಎನ್ನುವುದು ವಿಶೇಷವಾಗಿದೆ. ದೀಪಾವಳಿ ಬಂದಾಗ ಮನಸ್ಸಿನ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಹೊತ್ತಿಸಲಿ ಎನ್ನುವ ಸಂದೇಶ ನೀಡಿದರೆ, ವಿಜಯ ದಶಮಿಯು ದುಷ್ಟ ಸಂಹಾರದ ಕುರಿತು ತಿಳಿಸುತ್ತದೆ. ಅದರಲ್ಲೂ ರಕ್ಷಾ ಬಂಧನ ಎನ್ನುವುದು ಹಬ್ಬಳಗಲ್ಲಿಯೇ ವೀಶೀಷ್ಟ ಹಬ್ಬವಾಗಿದ್ದು; ಇಲ್ಲಿ ರಾಖಿಯ ನೂಲನ್ನು ಕಟ್ಟುವುದು ಸಂಪ್ರದಾಯವಾದರೂ ಸಹ ಅದರ ನಂತರದಲ್ಲಿ ಆಗುವ ಬಾಂಧವ್ಯದ ಬೆಸುಗೆ ಮಾತ್ರ ಅಭೂತಪೂರ್ವವಾದುದು. ಸಹೋದರಿ ಕಟ್ಟುವ ನೂಲು ಎರಡು ಮನಸ್ಸುಗಳನ್ನು ಬೆಸೆಯುವುದರ ಜೊತೆಗೆ ಅವಳ ರಕ್ಷಣೆಯ ಹೊಣೆ ಸಹೋದರನ ಹೆಗಲೇರಿಸಿದರೆ ಸಹೋದರನ ಬೆಳವಣಿಗೆಯ ಭಾವ ಸಹೋದರಿಯ ಮನಸೇರುತ್ತದೆ. ಹೀಗಾಗಿ ಇಂತಹ ಹಬ್ಬಗಳು ಕೇವಲ ಹಬ್ಬವಾಗಿ ಇರದೇ ಭಾರತೀಯ ಪರಂಪರೆ ಬಿತ್ತಿ ಬೆಳೆದ ವಸುದೈವ ಕುಟುಂಬಕಂ ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸಲು ನೆರವಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್; ವಿಜ್ಞಾನ ಕಾಲೇಜು ಎಂದು ಬರೀ ಮಕ್ಕಳಿಗೆ ಪಠ್ಯ ಬೋಧನೆ ಮಾಡಿದರೆ ಅವರನ್ನು ಕೇವಲ ವಿದ್ಯಾವಂತರನ್ನಾಗಿ ಮಾಡಲು ಸಾಧ್ಯವಾಗುತ್ತದೆಯೇ ವಿನಃ ಸಂಸ್ಕಾರವಂತರನ್ನಾಗಿ ಹಾಗೂ ಜ್ಞಾನಿಗಳನ್ನಾಗಿ ತಯಾರು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಕಾರ್ಯವಾಗಬೇಕಾದಲ್ಲಿ ಇಂಥ ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆದುಕೊಳ್ಳುತ್ತವೆ. ಆ ನಿಟ್ಟಿನಲ್ಲಿ ಎಕ್ಸಲಂಟ ಸಂಸ್ಥೆಯ ಉದ್ಧೇಶವೇ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದಾಗಿದ್ದು ಇಂದು ವಿದ್ಯಾರ್ಥಿನೀಯರು ವಿದ್ಯಾರ್ಥಿಗಳಿಗೆ ರಾಖಿ ಕಟ್ಟುವುದರ ಮೂಲಕ ಹೊಸತನದ ಹಾದಿಯಲ್ಲಿ ಹೆಜ್ಜೆ ಹಾಕುವುದಕ್ಕೆ ಸಿದ್ಧರಾಗುತ್ತಿದ್ದಾರೆ. ಕಲ್ಮಶ ತುಂಬಿರುವ ಪ್ರಪಂಚವನ್ನು ಶುದ್ಧ ಮಾಡುವುದಕ್ಕೆ ಇಂಥಹ ಕಾರ್ಯಕ್ರಮಗಳು ಅತ್ಯಾವಶ್ಯಕವಾಗಿದ್ದು ಸಮಾಜದ ಒಳಿತಿಗಾಗಿ ನಮ್ಮ ಸಂಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಎಲ್ಲ ವಿದ್ಯಾರ್ಥಿಗಳು ರಾಖಿ ಕಟ್ಟುವ ಮೂಲಕ ಸಹೋದರತ್ವದ ಕಲ್ಪನೆಯನ್ನು ಸಾಕ್ಷೀಕರಿಸಿದರು. ಉಪ ಪ್ರಾಚಾರ್ಯ ಮಂಜುನಾಥ ಮ. ಜುನಗೊಂಡ ಪ್ರಸ್ತಾವಿಕವಾಗಿ ಮಾತನಾಡಿದರು. ಭೌತಶಾಸ್ತ್ರ ಉಪನ್ಯಾಸಕ ರವಿ ಕಲ್ಲೂರ ಮಠ ನಿರೂಪಿಸಿ ವಂದಿಸಿದರು. ಕಾಲೇಜಿನ ಎಲ್ಲ ಸಿಬ್ಬಂಧಿವರ್ಗ ಹಾಗೂ ಎಲ್ಲ ವಿದ್ಯಾರ್ಥಿ ನಿಲಯದ ನಿಲಯ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.