ತ್ರಿಪೋಲಿ, ಫೆ 12 : ಲಿಬಿಯಾ ರಾಜಧಾನಿ ತ್ರಿಪೋಲಿಯ ಪಶ್ಚಿಮ ಭಾಗದಲ್ಲಿನ ಅಬು ಇಸಾ ಗ್ರಾಮದ ಶಾಲೆಯೊಂದರಲ್ಲಿ ನಿನ್ನ ಸಾಂಭವಿಸಿದ ಸ್ಫೋಟದಲ್ಲಿ ಮೂರು ಮಕ್ಕಳು ಗಾಯಗೊಂಡಿರುವುದಕ್ಕೆ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಬೇಸರ ವ್ಯಕ್ತಪಡಿಸಿದೆ.
ಸೋಮವಾರ ನಡೆದ ಘಟನೆಯಲ್ಲಿ ಮೂರು ಮಕ್ಕಳು ಗಾಯಗೊಂಡಿರುವುದಕ್ಕೆ ಯುನಿಸೆಫ್ ತೀವ್ರ ವಿಷಾದ ವ್ಯಕ್ತಪಡಿಸುತ್ತಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಲಿಬಿಯಾದಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧದ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಾನಿಯಾಗದಂತೆ ಯಾವಾಗಲೂ ಎಚ್ಚರವಹಿಸಬೇಕು ಎಂದು ವಿಪಕ್ಷಗಳಿಗೆ ಯುನಿಸೆಫ್ ಕರೆ ನೀಡಿದೆ.
2019ರ ಏಪ್ರಿಲ್ ನಿಂದ ಉಗ್ರ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಪೂರ್ವ ಭಾಗದ ಸೇನೆ, ವಿಶ್ವಸಂಸ್ಥೆಯ ಬೆಂಬಲವಿರುವ ಸರ್ಕಾರವನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದೆ. ಈ ಯುದ್ಧದಲ್ಲಿ ಸಾವಿರಾರು ಜನರು ಹತ್ಯೆಗೊಳಗಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ 1.50 ಲಕ್ಷಕ್ಕೂ ಹೆಚ್ಚು ಜನರು ಇತರೆಡೆ ವಲಸೆ ಹೋಗಿದ್ದಾರೆ.