ಗ್ರಂಥಾಲಯ ಜೀವಂತ ದೇವಾಲಯ: ಭೀಮಾಶಂಕರ ಕನ್ನೂರ
Library is a living temple: Bhimashankar Kannur
ಇಂಡಿ 13: ತಾಲೂಕ ಪಂಚಾಯತ್ ಕಾರ್ಯಾಲಯ ಇಂಡಿ ಸಭಾ ಭವನದಲ್ಲಿ ಎಸ್ ಆರ್ ರಂಗನಾಥನ್ ಜನ್ಮ ದಿನ ನಿಮಿತ್ಯ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಡಾ.ಬೀಮಾಶಂಕರ ಕನ್ನೂರ ಅವರು ಡಾ. ಎಸ್. ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಚರಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಡಾ ಭೀಮಾಶಂಕರ ಕನ್ನೂರ ಅವರು ಇಂದು ಡಾ. ಎಸ್ ಆರ್ ರಂಗನಾಥ ರವರ ಜನ್ಮದಿನ ನಿಮಿತ್ತ ಗ್ರಂಥಪಾಲಕ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಭಾರತದ ಗ್ರಂಥಾಲಯದ ಪಿತಾಮಹಡಾ ಎಸ್ ಆರ್ ರಂಗನಾಥನ್ ರವರು ಮದ್ರಾಸ ಪ್ರಾಂತದ ಒಂದು ಚಿಕ್ಕ ಹಳ್ಳಿ ಶಿಯಾಳ ಎಂಬಲ್ಲಿ ಆಗಸ್ಟ್ 12 1892ರಲ್ಲಿ ಜನಿಸಿದರು. ಮದ್ರಾಸ್ ವಿಶ್ವ ವಿದ್ಯಾನಿಲಯದ ಗ್ರಂಥಾಲಯಕ್ಕೆ ಗ್ರಂಥಪಾಲಕರಾಗಿ ನೇಮಕಗೊಂಡು ಅತಿ ಶಿಸ್ತಿನಿಂದ ಸೇವೆಯನ್ನು ಸಲ್ಲಿಸಿದರು. ಗ್ರಂಥಾಲಯದ ಕುರಿತು ವಿವಿಧ ರಾಷ್ಟ್ರಗಳಿಗೆ ಸಂಚರಿಸಿ ಗ್ರಂಥಾಲಯದ ಅರಿವು ಮೂಡಿಸಿದರು. ಗ್ರಂಥಾಲಯ ಸೇವೆಯಲ್ಲಿರುವವರಿಗೆ ಡಾಽ ಎಸ್. ಆರ್. ರಂಗನಾಥನ್ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚಸೂತ್ರಗಳು ಗ್ರಂಥ ಓದಲು. ಗ್ರಂಥಕ್ಕೊಬ್ಬರು. ಎಲ್ಲರಿಗೂ ಗ್ರಂಥಗಳು ಓದುಗರ ಸಮಯವನ್ನು ಉಳಿಸಿರಿ ಗ್ರಂಥಾಲಯ ಬೆಳೆಯುವ ಶಿಶು ಗ್ರಂಥಪಾಲಕರಿಗೆ ದಾರೀದೀಪವಾಗಿವೆ. ಅದೇ ರೀತಿ ಶಾಲಾ ಮಕ್ಕಳು ಸಾಯಂಕಾಲ ಮನೆಗೆ ಬರುವುದರಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಇರುವ ಅರಿವು ಕೇಂದ್ರಗಳು ಸಾಯಂಕಾಲ 6ರಿಂದ 8 ಘಂಟೆಯವರೆಗೆ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವುದು ಹಾಗೂ ಎಲ್ಲರೂ ಶಿಸ್ತು ಬದ್ಧವಾಗಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಯೋಜನಾಧಿಕಾರಿ ನಂದೀಪ ರಾಠೋಡ, ಸಹಾಯಕ ನಿರ್ದೇಶಕರು ಪಂ ರಾ ಪ್ರಕಾಶ್ ರಾಠೋಡ, ತಾಲೂಕ ವ್ಯವಸ್ಥಾಪಕ ಮುರುಗೇಶ ನಾರಾಯಣಪುರ, ತಾಲೂಕಿನ ಎಲ್ಲಾ ಅರಿವು ಕೇಂದ್ರ ಗ್ರಂಥಪಾಲಕರು, ತಾಲೂಕ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 